ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಜನರು ಹೊಸ ವರ್ಷಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ನೂತನ ವರ್ಷದ ಸಂಭ್ರಮಕ್ಕಾಗಿ ವಿವಿಧ ರೀತಿಯಲ್ಲಿ ಪಾರ್ಟಿಗೆ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ. ದೇಶದಲ್ಲಿ ಕೆಲವರು ಯುಗಾದಿ ಹೊಸ ವರ್ಷವೆಂದು ಪರಿಗಣಿಸುತ್ತಾರೆ. ಅಧಿಕ ಸಂಖ್ಯೆಯ ಜನರು ಡಿಸೆಂಬರ್ 31 ರ 12 ಗಂಟೆಗೆ ಹೊಸ ವರ್ಷವೆಂದು ಪರಿಗಣಿಸಯತ್ತಾರೆ.
ವಿಶೇಷವೆಂದರೆ ನಮ್ಮಗಿಂತ ಮೊದಲು ಕೆಲವು ದೇಶಗಳಲ್ಲಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತವೆ. ಇಲ್ಲಿ 12 ಗಂಟೆಗಿಂತ ಮೊದಲೇ ನೂತನ ವರ್ಷಾರಣೆಯ ಸಂಭ್ರಮವಿರುತ್ತದೆ. ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುವು ಎಂಬುದರ ಕುರಿತಂತೆ ಮಾಹಿತಿ ಇಲ್ಲಿದೆ
ಹೊಸ ವರ್ಷಾಚರಣೆ ಮೊದಲು ನಡೆಯುವ ದೇಶಗಳಿವು
ನಮ್ಮ ದೇಶದ ಬಗ್ಗೆ ಹೇಳುವುದಾದರೆ, ಡಿಸೆಂಬರ್ 31 ರ ಮಧ್ಯರಾತ್ರಿ 12 ಗಂಟೆಯ ನಂತರ ಹೊಸ ವರ್ಷದ ಆಚರಣೆ ಪ್ರಾರಂಭವಾಗುತ್ತದೆ. ಆದರೆ, ಜಗತ್ತಿನಲ್ಲಿ ಮೊದಲ ಹೊಸ ವರ್ಷಾರಣೆ ದ್ವೀಪ ‘ಕಿರಿಬಾತಿ’ಯಲ್ಲಿ ನಡೆಯುತ್ತದೆ. ಭಾರತದ ಕಾಲದ ಪ್ರಕಾರ, ನಮ್ಮ ದೇಶದಲ್ಲಿ ಡಿಸೆಂಬರ್ 31 ರ ಸಂಜೆ 3:30 ಆಗಿದ್ದರೆ, ಆಗ ಈ ದೇಶಗಳಲ್ಲಿ ಹೊಸ ವರ್ಷ ಪ್ರಾರಂಭವಾಗಲಿದೆ.
ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ರಷ್ಯಾದ ಕೆಲವು ಭಾಗಗಳಲ್ಲಿ ಭಾರತೀಯ ಕಾಲಮಾನ ಸಂಜೆ 4:30 ರ ಸುಮಾರಿಗೆ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.
ದಕ್ಷಿಣ ಕೊರಿಯಾ ಮತ್ತು ಜಪಾನ್ನಲ್ಲಿ ಹೊಸ ವರ್ಷವು ಡಿಸೆಂಬರ್ 31 ರ ರಾತ್ರಿ 8:30 ಕ್ಕೆ ಪ್ರಾರಂಭವಾಗುತ್ತದೆ. ಹೊಸ ವರ್ಷದ ಆಚರಣೆಗಳು ಚೀನಾದಲ್ಲಿ ಡಿಸೆಂಬರ್ 31 ರಂದು ರಾತ್ರಿ 9:30 ಕ್ಕೆ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ.
ಪಾಕಿಸ್ತಾನ ಮತ್ತು ಇತರ ನೆರೆಯ ದೇಶಗಳಲ್ಲಿ ಯಾವಾಗ?
ಬಾಂಗ್ಲಾದೇಶದಲ್ಲಿ ಹೊಸ ವರ್ಷದ ಆಚರಣೆಯನ್ನು ಭಾರತಕ್ಕಿಂತ ಮೊದಲು ಆಚರಿಸಲಾಗುತ್ತದೆ. ಡಿಸೆಂಬರ್ 31ರ ರಾತ್ರಿ 11.30ಕ್ಕೆ ಇಲ್ಲಿ ಆಚರಣೆ ಆರಂಭವಾಗಲಿದೆ. ನೇಪಾಳದಲ್ಲಿ ರಾತ್ರಿ 11.45ಕ್ಕೆ ಹೊಸ ವರ್ಷ ಆರಂಭವಾಗಲಿದೆ. ಪಾಕಿಸ್ತಾನದಲ್ಲಿ 12:30 ಕ್ಕೆ ಇಲ್ಲಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಏಷ್ಯಾದಲ್ಲಿ, ಇರಾನ್, ಇರಾಕ್ ಮತ್ತು ಟರ್ಕಿಯಲ್ಲಿ ಹೊಸ ವರ್ಷವನ್ನು ಕೊನೆಯದಾಗಿ ಆಚರಿಸಲಾಗುತ್ತದೆ.
ಕೊನೆಯ ಆಚರಣೆ ಯಾವ ದೇಶದಲ್ಲಿ ಗೊತ್ತಾ?
ಇನ್ನು ವಿಶೇಷವೆಂದರೆ US ಮೈನರ್ ಔಟ್ಲೈಯಿಂಗ್ ದ್ವೀಪದಲ್ಲಿ ದಿನದ ಕೊನೆಯಲ್ಲಿ ಹೊಸ ವರ್ಷಾಚರಣೆ ನಡೆಯುತ್ತದೆ.ಇಲ್ಲಿ ಭಾರತೀಯ ಕಾಲಮಾನದ ಪ್ರಕಾರ, ಹೊಸ ವರ್ಷವನ್ನು ಜನವರಿ 1 ರ ಸಂಜೆ 5:35 ಕ್ಕೆ ಆಚರಿಸಲಾಗುತ್ತದೆ.
ನನ್ನ ಆದ್ಯತೆ ರೈತರಿಗೆ ಪರಿಹಾರ ನೀಡುವುದೇ ಹೊರತು ಗುತ್ತಿಗೆದಾರರಿಗೆ ಹಣ ಕೊಡುವುದು ಅಲ್ಲ: ಸಚಿವ ಗೋವಿಂದ ಕಾರಜೋಳ
BREAKING NEWS : ಸುವರ್ಣಸೌಧದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ಆರಂಭ
BIGG NEWS : ‘ಚಾರ್ ಧಾಮ್’ ಯಾತ್ರೆಯ ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಜ.31ವರೆಗೆ ವಿಸ್ತರಣೆ