ವರದಹಳ್ಳಿಯ ಶ್ರೀಧರ ಸ್ವಾಮಿಗಳು ಅಪಾರಮಹಿಮೆಯುಳ್ಳ ಅವತಾರ ಪುರುಷರು. ವರದ ಹಳ್ಳಿಯು ಇವರು ತಪಸ್ಸು ಮಾಡಿದ ಪುಣ್ಯಭೂಮಿ. ಪ್ರತಿನಿತ್ಯ ಸಾವಿರಾರು ಭಕ್ತರು ವರದಹಳ್ಳಿಗೆ ಭೇಟಿಕೊಟ್ಟು ಗುರುಗಳ ಆಶೀರ್ವಾದ ಪಡೆಯುತ್ತಾರೆ. ಹಿಂದೂ ಧರ್ಮದ ಪ್ರವರ್ತಕರು ಆಗಿದ್ದು, ಶ್ರೀರಾಮನ ಭಕ್ತರು ಹಾಗೂ ಸಮರ್ಥ ರಾಮದಾಸರ ಶಿಷ್ಯರು ಆಗಿದ್ದರು. ಶ್ರೀಧರ ಸ್ವಾಮಿಗಳನ್ನು ದತ್ತಾತ್ರೇಯ ಅವತಾರವೆಂದು ಹೇಳುತ್ತಾರೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಶ್ರೀಧರಸ್ವಾಮಿಗಳು ಮಹಾರಾಷ್ಟ್ರ ರಾಜ್ಯದ ನಾಂದೇಡ್ ಜಿಲ್ಲೆಯ ದೇಗಲೂರು ಗ್ರಾಮದವರು. ‘ಪತಕೀ’ ಮನೆತನದ ದೇಶಸ್ಥ ಬ್ರಾಹ್ಮಣ ದಂಪತಿಗಳಾದ ಶ್ರೀನಾರಾಯಣ ರಾಯರು ಮತ್ತು ಕಮಲಾಬಾಯಿವರು ಪುತ್ರ ರೂಪದಲ್ಲಿ ಶ್ರೀಧರ ಸ್ವಾಮಿಗಳನ್ನು ಪಡೆದ ಭಾಗ್ಯಶಾಲಿಗಳು. ಗುರುಗಳ ತಂದೆ -ತಾಯಿಗಳು, ದತ್ತ ಗುರುಗಳನ್ನು ಭಕ್ತಿ ಹಾಗೂ ನಿಶ್ಚಲ ಮನಸ್ಸಿನಿಂದ ಸೇವೆ ಮಾಡಿದಾಗ, ದತ್ತ ಗುರುಗಳು ಇವರ ಭಕ್ತಿಗೆ ಮೆಚ್ಚಿ ಕನಸಿನಲ್ಲಿ ದರ್ಶನ ಕೊಟ್ಟು, ನಿಮಗೆ ಕುಲೋದ್ಧಾರಕ ಹಾಗೂ ವಿಶ್ವೋದ್ಧಾರಕ ತೇಜಸ್ವಿ ಪುತ್ರ ಜನಿಸುವರು ಎಂದು ವರವಿತ್ತು ಅಂತರ್ಧಾನರಾದರು. ನಂತರ ಮಾರ್ಗಶೀರ್ಷ ಹುಣ್ಣಿಮೆಯಂದು ದತ್ತಾತ್ರೇಯರು ಅವತಾರವಾಗಿದ್ದ ಸಮಯದಲ್ಲಿಯೇ, ಸಾಕ್ಷಾತ್ ಪರಬ್ರಹ್ಮ ಸ್ವರೂಪಿಗಳಾದ ಶ್ರೀ ಶ್ರೀಧರ ಸ್ವಾಮಿಗಳು ಜನ್ಮ ತಾಳಿದರು.
ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡರು. ತಾಯಿ ಹಾಗೂ ಸಹೋದರನ ಪೋಷಣೆಯಲ್ಲಿ ಬೆಳೆದರು. ಸಣ್ಣವರಿದ್ದಾಗಲೇ ಆಧ್ಯಾತ್ಮದತ್ತ ಒಲವನ್ನು ಹೊಂದಿದ್ದರು. ಪ್ರಾಥಮಿಕ ಶಿಕ್ಷಣ ಹೈದರಾಬಾದಿನಲ್ಲಿ ಮುಗಿಸಿದರು. ಸನಾತನ ಧರ್ಮದಲ್ಲಿ ಅಚಲವಾದ ಶ್ರದ್ಧಾ, ಭಕ್ತಿಯನ್ನು ಹೊಂದಿದ್ದರು. ಇವರ ಮುಖ ಕಮಲದಲ್ಲಿ ಅಖಂಡ ರಾಮನಾಮವಿತ್ತು. ಇದಕ್ಕೊಂದು ಉದಾಹರಣೆಯಾಗಿ ಶಾಲಾ ಪರೀಕ್ಷೆಯ ಸಮಯದಲ್ಲಿ ಇವರು ಒಮ್ಮೆ ಅನಾರೋಗ್ಯಕ್ಕೊಳಗಾಗಿದ್ದರು. ಪರೀಕ್ಷೆಯಲ್ಲಿ ಪಾಸ್ ಆಗುವುದು ಅನುಮಾನವಿತ್ತು. ಆಗ ಅವರ ತಾಯಿ ಸತತವಾಗಿ ರಾಮನಾಮ ಸ್ಮರಣೆ ಜಪಿಸಬೇಕು ಎಂದು ಹೇಳಿದರು. ಅದೇ ರೀತಿ, ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳು ಸುಲಭವಾಗಿರಲಿ ಎಂಬ ಸಂಕಲ್ಪದೊಂದಿಗೆ ಶ್ರದ್ಧೆ ಹಾಗೂ ಭಕ್ತಿಯಿಂದ, ಓದುವುದನ್ನು ಮರೆತು ರಾಮ ನಾಮಸ್ಮರಣೆಯನ್ನು ಮಾಡುತ್ತಾ ಪರೀಕ್ಷೆ ದಿನ ಶಾಲೆಗೆ ಹೋದರು. ಎಲ್ಲರಿಗೂ ಆಶ್ಚರ್ಯವಾಗುವಂತೆ ಉತ್ತರ ಬರೆದು, ಮೊದಲಿಗರಾಗಿ ಉತ್ತೀರ್ಣರಾಗಿದ್ದರು. ಆಮೇಲೆ ಅವರ ಜೀವನದಲ್ಲಿ ತಾಯಿ, ಅಣ್ಣ ಎಲ್ಲರೂ ಹೋದರು. ಆ ಸಮಯದಲ್ಲಿ ಆಧ್ಯಾತ್ಮಿಕ ಜ್ಞಾನ ಸಂಪಾದನೆಯಲ್ಲಿ ಆಸಕ್ತಿ ಬೆಳೆಸಿಕೊಂಡರು ಮತ್ತು ಆಧ್ಯಾತ್ಮ ಜ್ಞಾನ ಸಂಪಾದನೆಗಾಗಿ ಸಜ್ಜನಗಡ ದಲ್ಲಿರುವ ಶ್ರೀ ಸಮರ್ಥ ರಾಮದಾಸರ ಬಳಿಗೆ ಹೊರಟರು. ಸಮರ್ಥ ರಾಮದಾಸರ ಆಶೀರ್ವಾದವನ್ನು ಪಡೆದು ಅವರ ನಿರ್ದೇಶನದಂತೆ ದಕ್ಷಿಣದ ಕಡೆ ಕರ್ನಾಟಕಕ್ಕೆ ಬಂದು ಸನಾತನ ವೈದಿಕ ಧರ್ಮದ ನಿಜವಾದ ಸಂದೇಶಗಳನ್ನು ಹರಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಹಳ್ಳಿ ಅಥವ ವರದಪುರ ಇದು ಶ್ರೀ ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ ಮತ್ತು ಸಮಾಧಿ ಹೊಂದಿದ ಸ್ಥಳ. ಇಲ್ಲಿ ಅವರ ಸಮಾಧಿ ಮತ್ತು ಧರ್ಮ ಧ್ವಜಗಳಿದ್ದು, ಇತಿಹಾಸ ಪ್ರಸಿದ್ಧ ದುರ್ಗಾದೇವಿಯ ದೇವಾಲಯವಿದೆ. ಶ್ರೀಧರಾಶ್ರಮದ ಆವರಣದಲ್ಲಿ ಮೊದಲು ಕಾಣುವುದು ವರ್ಷಪೂರ್ತಿಯೂ ಗೋವಿನ ಬಾಯಿಂದ ಬೀಳುತ್ತಿರುವ ತೀರ್ಥ (ಗೋಮುಖ ತೀರ್ಥ) ಇದು ಬಹಳಷ್ಟು ಔಷಧಿ ಗುಣವನ್ನು ಹೊಂದಿದೆ. ಗುಡ್ಡದ ಮೇಲೆ ಹೋದಂತೆ ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ ಸ್ಥಳ, ಗುರುಕುಲ, ಮತ್ತು ವೇದ ಪಾಠಶಾಲೆ, ನಂತರ ಗುರುಗಳ ಸಮಾಧಿ ಹೊಂದಿದ ಜಾಗದಲ್ಲಿ ಮಂದಿರವಿದೆ, ಒಂದು ಕಡೆ ಶ್ರೀಧರ ಸ್ವಾಮಿಗಳ ಏಕಾಂತ ಗುಹೆಯನ್ನು ಕಾಣಬಹುದು.
ಶಿವಮೊಗ್ಗ, ಸಾಗರ, ಜೋಗ,ತ್ಯಾಗರ್ತಿ,ಶಿರಸಿ, ತಿರ್ಥಹಳ್ಳಿ, ಹೊಸನಗರ ಸುತ್ತಮುತ್ತಲಿನ ಎಲ್ಲರೂ ಶ್ರೀಧರ ಸ್ವಾಮಿಗಳ ಆರಾಧಕರಾಗಿದ್ದು, ಎಲ್ಲರ ಮನೆಗಳಲ್ಲೂ ಶ್ರೀಧರಸ್ವಾಮಿಗಳ ಫೋಟೋ ಇದ್ದೇ ಇರುತ್ತದೆ. ಮನೆಯಲ್ಲಿಯೇ ಶ್ರೀಧರರ ಸೇವೆಯನ್ನು ಮಾಡುತ್ತಿರುತ್ತಾರೆ. ಹರಕೆಗಳನ್ನು ಮಾಡಿಕೊಂಡು, ಆಗಾಗ್ಗೆ ಆರಾಧನೆ, ಹುಣ್ಣಿಮೆ, ಗುರುಪೂರ್ಣಿಮೆ ನವರಾತ್ರಿ ಇಂತಹ ದಿನಗಳಲ್ಲಿ ವರದಹಳ್ಳಿಗೆ ಹೋಗಿ ಸೇವೆ, ದರ್ಶನ, ಪಾದಪೂಜೆ ಮಾಡಿ ಬರುತ್ತಾರೆ. ವರದಹಳ್ಳಿಯ ಸುತ್ತಮುತ್ತಲು ಪ್ರಕೃತಿ ಸೌಂದರ್ಯ ಚೆನ್ನಾಗಿದ್ದು, ಮನೆಗೆ ಬರುವ ನೆಂಟರಿಗೆ ಗುರುಗಳ ದರ್ಶನ ಹಾಗೂ ಪ್ರಕೃತಿ ಸೌಂದರ್ಯದ ವೀಕ್ಷಣೆ ಮಾಡಿಸುವರು.
ಕೆಳಗಿನ ಘಟನೆಗಳು ಚಿಕ್ಕವರಿದ್ದಾಗ ನಾವೆಲ್ಲ ಕೇಳಿದ ವಿಚಾರಗಳು:
ನಮ್ಮ ಮನೆಗಳಲ್ಲಿ ಹಿರಿಯರ ಕಾಲದಿಂದಲೂ ಗುರುಗಳನ್ನು ನಂಬಿ ನಡೆಯುತ್ತಿದ್ದಾರೆ. ಯಾವುದೇ ಶುಭಕಾರ್ಯಗಳ ಆರಂಭಕ್ಕೂ ಮೊದಲು ಗುರುಗಳ ದರ್ಶನ ಮಾಡಿ ಬಂದು ಮುಂದಿನ ಕೆಲಸ ಮಾಡುವುದು. ಪ್ರತಿ ಗುರುವಾರ ಶ್ರೀಧರ ಸ್ವಾಮಿಗಳ ಫೋಟೋಕ್ಕೆ ಪೂಜೆ, ಭಜನೆ,ಆರತಿ, ಮಾಡುವುದು ಪದ್ಧತಿಯಾಗಿದೆ. ಮನೆಯಲ್ಲೇ ಅವರ ಪಾದುಕೆ ಇದ್ದು ಪೂಜೆ ಮಾಡಲಾಗುತ್ತಿದೆ. ಮನಸ್ಸಿನಲ್ಲಿರುವುದನ್ನು ಏನಾದರೂ ಬೇಡಿಕೊಂಡು, 7, 13, 48, ಸುತ್ತು ನಮಸ್ಕಾರ, “ಶ್ರೀ ಶ್ರೀಧರಾಯ ನಮಃ ” ಎಂದು ನೋಟ್ ಬುಕ್ಕಿನಲ್ಲಿ ‘ಲೆಕ್ಕದಂತೆ’, ಬರೆಯುವುದು. ಹೀಗೆ ನಂಬಿಕೆ ಭಕ್ತಿ ಇಂದಿಗೂ ನಡೆಯುತ್ತಾ ಬಂದಿದೆ. ಶ್ರೀಧರಸ್ವಾಮಿಗಳ ಬಲ ಹಸ್ತದಲ್ಲಿ ಶಿವನ ತ್ರಿಶೂಲದ ಚಿಹ್ನೆ ಮತ್ತು ಬಲದ ಕಿವಿಯಲ್ಲಿ ಲಿಂಗಾಕಾರ ಇದೆ ಅಂತ ಹೇಳುತ್ತಿದ್ದರು.
ಉದಾಹರಣೆಗೆ :- ವರದ ಹಳ್ಳಿಯಲ್ಲಿರುವ ಶ್ರೀಧರ ಗುರುಗಳು ತಪಸ್ಸಿನಿಂದ ಎದ್ದು , ಪ್ರವಚನ ಹಾಗೂ ದರ್ಶನ ಕೊಡುತ್ತಿದ್ದಾರೆ ಎಂದು ನಮ್ಮ ತಂದೆ ತಾಯಿಗೆ ತಿಳಿಯಿತು. ಗಂಡು ಮಗು ಬೇಕು ಎಂದು ಗುರುಗಳ ಆಶೀರ್ವಾದ ತೆಗೆದುಕೊಳ್ಳಲು ವರದಹಳ್ಳಿಗೆ ಹೋದರಂತೆ. ಹತ್ತಿರದಿಂದ ಅವರ ದರ್ಶನ ಸಿಗುವುದೇ ತುಂಬಾ ಕಷ್ಟವಂತೆ. ಆದರೆ ಹೇಗೋ ನೂಕುನುಗ್ಗಲಿನಲ್ಲಿ ಅವರ ದರ್ಶನವಾಯಿತಂತೆ. ನಮ್ಮ ತಂದೆ ತಮ್ಮ ಬೇಡಿಕೆಯನ್ನು ಮುಂದಿಟ್ಟರು.
ಮುಂದಿನ ಸಲ ಗಂಡು ಮಗು ಹುಟ್ಟುತ್ತದೆ. ಇಬ್ಬರು ಗೋಕರ್ಣಕ್ಕೆ ಹೋಗಿ ಮಹಾಬಲೇಶ್ವರನ ದರ್ಶನ ಮಾಡಿ ಬನ್ನಿ ಎಂದು ಹರಸಿದರಂತೆ. ಆನಂತರ ನಮ್ಮ ಅಪ್ಪ-ಅಮ್ಮ ಗೋಕರ್ಣಕ್ಕೆ ಹೋಗಿ ದರ್ಶನ ಮಾಡಿ ಬಂದು ವರ್ಷದೊಳಗೆ ಗಂಡು ಮಗು ಹುಟ್ಟಿ, ಆಮೇಲೆ ಮತ್ತು ಎರಡು ಗಂಡು ಮಕ್ಕಳು ಹುಟ್ಟಿದರು ಅಂತ ಹೇಳುತ್ತಿದ್ದರು.
ಇಂಥದೇ ಒಂದು ಸ್ಮರಣೆ ನಮ್ಮ ಅಣ್ಣನ ಜೀವನದಲ್ಲಿ ಒಂದು ಘಟನೆ ನಡೆದಿತ್ತು. ಚಿಕ್ಕಂದಿನಲ್ಲಿದ್ದಾಗ ಬಹಳ ಕಷ್ಟಪಡುತ್ತಿದ್ದಾಗ, ಹಿರಿಯರ ಮಾತಿನಂತೆ ಸಾಗರದಿಂದ ವರದಪುರಕೆ ನಡೆದುಕೊಂಡು ಹೋಗಿ ಸೇವೆ ಸಲ್ಲಿಸಿ ಬರುತ್ತಿದ್ದರು. ಒಮ್ಮೆ ದತ್ತಜಯಂತಿ ಸಂದರ್ಭದಲ್ಲಿ 12 ದಿನಗಳು ಕೂಡ ಸೇವೆ ಸಲ್ಲಿಸಿ ಬಂದಿದ್ದರು. ಶ್ರೀಧರಸ್ವಾಮಿಗಳ ಹತ್ತಿರ ಸಮಸ್ಯೆಗಳನ್ನು ಹೇಳಲು ಆಗುತ್ತಿಲ್ಲವಲ್ಲ ಎಂದು ಅಂದುಕೊಂಡಿರುವಾಗಲೇ, ಒಂದು ದಿನ ಶಿರಸಿಯಲ್ಲಿ ಗುರುಗಳ ದರ್ಶನವಾಯಿತು ಆಗ ಎಲ್ಲವನ್ನು ಹೇಳಿಕೊಂಡರು. ಇವರ ನೋವಿಗೆ ಮರುಗಿದ ಶ್ರೀಧರರು ‘ಸಮರ್ಥರೇ ನಡೆಸಿಕೊಡುತ್ತಾರೆ’ ಎಂದು ಆಶೀರ್ವದಿಸಿದರು. ಗುರು ಕರುಣೆ , ಗುರು ವಾಕ್ಯ ನಿಜವಾಯಿತು. ನಿರುದ್ಯೋಗಿಯಾಗಿದ್ದ ನಮ್ಮಣ್ಣನಿಗೆ,ಸರ್ಕಾರಿ ಕೆಲಸ ಸಿಕ್ಕಿತು.
ಸಾಗರವೇ ನಮ್ಮ ಅಜ್ಜನ ಮನೆಯಾದುದರಿಂದ ಶ್ರೀಧರ ಸ್ವಾಮಿಗಳು ವರದಹಳ್ಳಿಗೆ ಹೋಗಿ ಬರುವಾಗ, ಸಾಗರದಲ್ಲಿ ಕೆಲವೊಮ್ಮೆ ಉಳಿದಾಗ ಅಂತಹ ದಿನಗಳಲ್ಲಿ ಎಂದಾದರೂ ಒಂದೊಂದು ಸಲ ನಮ್ಮ ಅಜ್ಜಿ, ಶ್ರೀಧರ ಸ್ವಾಮಿಗಳಿಗೆ ಕೈ ತುತ್ತು ಹಾಕಿದ್ದರಂತೆ. ಗುರುಗಳು ಕೊಟ್ಟ ಪಾದುಕೆ ದೇವರ ಗೂಡಿನಲ್ಲಿ ಇಟ್ಟು ಇವತ್ತಿಗೂ ಪೂಜಿಸುತ್ತಿದ್ದಾರೆ.
ಎಸ್ಎಸ್ಎಲ್ ಸಿ, ಪರೀಕ್ಷೆ ಬರೆದ ಮಕ್ಕಳು, ಕೆಲಸಕ್ಕಾಗಿ ಎಂಪ್ಲಾಯ್ಮೆಂಟ್ ಎಕ್ಸ್ಚೇಂಜ್ ಆಫೀಸ್ನಲ್ಲಿ ರಿಜಿಸ್ಟರ್ ಮಾಡಿಸಿದ ಮಕ್ಕಳು, ಮದುವೆಯಾಗುವ ಹೆಣ್ಣು ಮಕ್ಕಳು, ಮಕ್ಕಳಾಗದಿದ್ದವರು, ಕಾಯಿಲೆ-ಕಸಾಲೆ ಇದ್ದವರು, ಸ್ವಂತ ಮನೆಗಾಗಿ ಕಷ್ಟಪಡುತ್ತಿದ್ದವರು, ಭಾವಿಯಲ್ಲಿ ನೀರು ಬರದಿದ್ದಾಗ, ಈ ರೀತಿ ಹಲವಾರು ಬೇಡಿಕೆಗಳನ್ನು ‘ಶ್ರೀಧರ ಸ್ವಾಮಿಗಳ’ ಮೇಲೆ ಭಾರ ಹಾಕಿ, ಉಪವಾಸ, ನಮಸ್ಕಾರ, ಪೂಜೆಗಳನ್ನು ಮಾಡಿ ಫಲಿಸಿದ್ದ ಉದಾಹರಣೆಗಳು ಹಲವಾರು ನಮ್ಮ ಊರಿನಲ್ಲಿ ನಾನು ನೋಡಿದ್ದೇನೆ. ನಾನು ಸಹ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಮುಗಿದ ಮೇಲೆ, ರಿಸಲ್ಟ್ ಬರುವ ಮೊದಲೇ, ಶ್ರೀಧರ ಸ್ವಾಮಿಗಳು, ಹಾಗೂ ರಾಘವೇಂದ್ರ ಗುರುಗಳ ಫೋಟೋಗಳನ್ನು ದೇವರ ಮುಂದೆ ಇಟ್ಟುಕೊಂಡು ಸುತ್ತು ನಮಸ್ಕಾರ ಹಾಕುತ್ತಿದ್ದೆ. 108, 48, ನಮಸ್ಕಾರಗಳಿಗೆ ಲೆಕ್ಕ ಇಡಲು, ಹಾಲುವಾಣ ಮರದ ಬೀಜ ಅಥವಾ ಹುಣಸೆ ಬೀಜಗಳನ್ನು ಡಬ್ಬಿಯಲ್ಲಿ ತುಂಬಿ ದೇವರ ಗೂಡೊಳಗೆ ಇಟ್ಟಿರುತ್ತಿದ್ದರು.
‘ಶ್ರೀ ರಾಮ ನಾಮ ಜಪ ‘ ಕುರಿತು ನಮ್ಮ ಮನೆಯಲ್ಲಿ ಒಂದು ಘಟನೆ ನಡೆದಿತ್ತು ಬಹಳ ಹಿಂದೆ ಮೆಟ್ರಿಕ್ ಓದುತ್ತಿದ್ದ ಕಾಲದಲ್ಲಿ ನನ್ನ ದೊಡ್ಡಪ್ಪನ ಮಗಳು ಎಸೆಸೆಲ್ಸಿ ಎಕ್ಸಾಮ್ ಗಣಿತದ ಪರೀಕ್ಷೆ ದಿನ ಎಕ್ಸಾಮ್ ಹಾಲಲ್ಲಿ ಉತ್ತರ ಬರೆಯುವ ಬದಲು ಹೆದರಿಕೊಂಡು ಎಲ್ಲಾ ಉತ್ತರ ಪತ್ರಿಕೆಯಲ್ಲಿ”ಶ್ರೀ ರಾಮ ಜಯ ರಾಮ ಶ್ರೀ ರಾಮ ಜಯ ರಾಮ” ಬರೆದಿಟ್ಟು ಬಂದಿದ್ದಳಂತೆ ಮನೆಯಲ್ಲಿ ಎಲ್ಲರೂ ಬೈದು ಕೂಗಾಡಿದ್ದರು. ಆದರೆ ಅದೇನು ರಾಮ ಮಹಿಮೆಯೋ ಏನೋ, ಗಣಿತದ ಪೇಪರ್ ಔಟಾಗಿ ಪುನಹ ಎಕ್ಸಾಮ್ ಮತ್ತೆ ಮಾಡಿದ್ದರಂತೆ. ಆಗ ಎಕ್ಸಾಮ್ ಬರೆದು ಜಸ್ಟ್ ಪಾಸಾಗಿದ್ದಳು.
ಕನ್ನಡ ಚಲನಚಿತ್ರ ನಟರಾದ ‘ಉದಯಕುಮಾರ್’ ಅವರು ವರದಹಳ್ಳಿಗೆ ಪ್ರತಿವರ್ಷ ಬಂದು ಸೇವೆ ಸಲ್ಲಿಸಿ ಹೋಗುತ್ತಿದ್ದರಂತೆ. ಮಾಸ್ಟರ್ ಹಿರಣ್ಣಯ್ಯ ನವರಿಗಂತೂ, ವರದಹಳ್ಳಿ ಶ್ರೀಧರ ಸ್ವಾಮಿಗಳು ಅಂದರೆ ಅಪಾರವಾದ ನಂಬಿಕೆಯಿದ್ದು, ಬಿಡುವುದಿಲ್ಲದಿದ್ದರೂ, ಬಿಡುವು ಮಾಡಿಕೊಂಡು ಬರುತ್ತಿದ್ದರಂತೆ. ಉತ್ತರ ಭಾರತದವರ ಮಹಿಳೆಯೊಬ್ಬರು ಶ್ರೀಧರ ಸ್ವಾಮಿಗಳ ಪರಮಭಕ್ತರು. ಶ್ರೀಧರ ಸ್ವಾಮಿಗಳು ಸಮಾಧಿ ಹೊಂದಿದರು ಎಂದು ತಿಳಿದ ಆ ಮಹಿಳೆ, ಇಡೀ ರಾತ್ರಿ ಹೊರಳಾಡಿ ಅತ್ತರಂತೆ, ಆಗ ಬೆಳಗಿನ ಜಾವ ನಸುಕಿನಲ್ಲಿ ಗುರುಗಳು ಬಂದಂತಾಗಿ ‘ನಾನು ಎಲ್ಲೂ ಹೋಗಿಲ್ಲ ನಿಮ್ಮ ಮನೆಯಲ್ಲಿ ಇರುತ್ತೇನೆ ನನ್ನ ಪಾದುಕೆಗಳನ್ನು ಪೂಜಿಸು ಅದರಲ್ಲಿ ನಾನು ಇರುತ್ತೇನೆ ಎಂದು ಹೇಳಿದರಂತೆ, ಆಕೆಗೆ ಎಚ್ಚರವಾಗಿ ಗುರುಗಳ ಅಸ್ಪಷ್ಟ ರೂಪವನ್ನು ಕಂಡರು. ಭಕ್ತಿಯಿಂದ ದಿನನಿತ್ಯ ಪೂಜಿಸುತ್ತಾ ಬಂದರಂತೆ. ಗುರುಗಳ ಕೊನೆಯ ದಿನಗಳಲ್ಲಿ, ಒಂದು ದಿನ ಗುಹೆಯೊಳಗೆ, ತೀರ ಹತ್ತಿರದ ಭಕ್ತರು ನೋಡಿದಾಗ ಶ್ರೀಧರಸ್ವಾಮಿಗಳು, ರಾಘವೇಂದ್ರ ಗುರುಗಳು, ಶಿರಡಿ ಸಾಯಿಬಾಬಾ, ಮೂರು ಮಹಾನ್ ಚೇತನಗಳು ಒಟ್ಟಿಗೆ ಕುಳಿತು ಮಾತಾಡುತ್ತಿದ್ದುದನ್ನು ಕಂಡರಂತೆ, ಮಹಾತ್ಮರ ಪ್ರಭಾವವು ಸಮಾಧಿಯಾಗಿ ನೂರಿನ್ನೂರು ವರ್ಷಗಳು ಕಳೆದ ನಂತರ ಗಾಳಿ ರೂಪದಲ್ಲಿ ಎಲ್ಲೆಡೆಯೂ ಹರಡುತ್ತದೆ ಎಂದು ಹೇಳುತ್ತಿದ್ದರು.
ಶ್ರೀಧರ ಸ್ವಾಮಿಗಳ ಮಹಿಮೆ ಅಪಾರವಾಗಿದ್ದು, ಭಕ್ತಿಯಿಂದ ಬೇಡಿಕೊಂಡ ಭಕ್ತರ ಕಡೆ ಕರುಣೆಯಿಂದ ನೋಡಿ ಆಶೀರ್ವದಿಸಿದ್ದಾರೆ. ಇಂದು ವರದಹಳ್ಳಿ ಅಪಾರವಾಗಿ ಬೆಳೆದು ಭಕ್ತರ ಪಾಲಿಗೆ ಶ್ರೀಧರ ಸ್ವಾಮಿಗಳು ಮಹಿಮಾನ್ವಿತ ರಾಗಿದ್ದು , ಕಷ್ಟಕೋಟಲೆಗಳನ್ನು ಪರಿಹರಿಸುವ ಸಂಜೀವಿನಿಯಾಗಿದ್ದಾರೆ. ಗುರುಕರುಣೆ, ಗುರುಮಹಿಮೆ, ಗುರುದೃಷ್ಟಿ, ಎಂದೆಂದಿಗೂ ಅಪಾರವಾಗಿದ್ದು ಎಲ್ಲರನ್ನು ಸಲಹುತ್ತಾರೆ. ನಂಬಿ ಬಂದವರನ್ನು ಎಂದಿಗೂ ಕೈ ಬಿಡುವುದಿಲ್ಲ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
“ಆದಿನಾರಾಯಣಂ ವಿಷ್ಣುಂ ಬ್ರಹ್ಮಣಾಂಚ ವಿಶಿಷ್ಟತಮ್
ಶ್ರೀರಾಮಂ ಮಾರುತಿಯಂ ವಂದೇ ರಾಮದಾಸಂಚ ಶ್ರೀಧರಮ್,
ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣಿ ಸ್ವಾನಂದ
ಅಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ
ಓಂ ನಮಃ ಶಿವಾಯ ಗುರುವೇ ಸಚ್ಚಿದಾನಂದ ಮೂರ್ತಯೇ ನಿಸ್ಪೃಂಚಾಯ
ಶಾಂತಾಯ ನಿರಾಲಂಬಾಯ ತೇಜಸೇ ಚಿದಾನಂದ
ಮಯಿಂ ದಿವ್ಯಾಂ ಆದಿ ಮಧ್ಯಂತಾ ವರ್ಜಿತಾಂ
ಆತ್ಮ ರೂಪಾಂ ಪರಾಂ ದಿವ್ಯಾಂ ಭವಾನಿ ನೌಮಿ ಸಂತತಂ”
ಇದರಲ್ಲಿ ಕೆಲವು ಸಂಗ್ರಹ, ಇನ್ನೊಂದಿಷ್ಟು ಮನೆಗಳಲ್ಲಿ ನೋಡಿದ್ದು, ಹಿರಿಯರು ಮಾತನಾಡುತ್ತಿದ್ದುದು, ಆಗಿದೆ. ಇವುಗಳೆಲ್ಲ ಆಗಿತ್ತೆಂದು ಹೇಳುತ್ತಾರೆ. ಯಾವುದೇನೇ ಇರಲಿ ಗುರುಗಳ ಮಹಿಮೆ ಅಪಾರವಾದದ್ದು.
“ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ”