ಫ್ರಿಡ್ಜ್‌ನ ಬಳಸೋದು ಒಂದು ಕಲೆ. ಇದರಲ್ಲಿ ಯಾವ ವಸ್ತುಗಳನ್ನು ಇಡಬೇಕು. ಯಾವ ವಸ್ತುಗಳನ್ನು ಇಡಬಾರದು ಎಂಬ ಗೊಂದಲ ಅನೇಕರಲ್ಲಿದೆ. ಹೀಗೆ ಫ್ರಿಡ್ಜ್‌ನಲ್ಲಿ ಇಡಬಹುದಾದ ಪದಾರ್ಥಗಳ ಪಟ್ಟಿ ಹೀಗಿದೆ.
ಹಾಲು ಮತ್ತು ಮೊಸರು ಎರಡನ್ನು ಫ್ರಿಡ್ಜ್‌ನಲ್ಲಿ ಇಡಬಹುದು. ಇದರಿಂದ ಇವುಗಳಲ್ಲಿ ಯಾವುದೇ ರಾಸಾಯನಿಕ ಬದಲಾವಣೆಗಳು ಆಗುವುದಿಲ್ಲ. ಹಾಗೆಂದು ಎರಡಕ್ಕಿಂತ ಹೆಚ್ಚು ದಿನ ಹಾಲು ಮತ್ತು ಮೊಸರು ಫ್ರಿಡ್ಜ್‌ನಲ್ಲಿ ಇಟ್ಟು ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗಬಹುದು.
ಆಲೂಗಡ್ಡೆ ಈರುಳ್ಳಿಯನ್ನು ಬಿಟ್ಟು ಎಲ್ಲಾ ಬಗೆಯ ಹಸಿ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡಬಹುದು. ಆದರೆ ಫ್ರಿಡ್ಜ್‌ನಿಂದ ತೆಗೆದು ಕನಿಷ್ಟ ಪಕ್ಷ 20 ನಿಮಿಷದ ನಂತರ ತರಕಾರಿಗಳನ್ನು ಬಳಸಲು ಅಡ್ಡಿ ಇಲ್ಲ.
ಬಾಳೆ ಹಣ್ಣನ್ನು ಬಿಟ್ಟು ಎಲ್ಲಾ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡಬಹುದು. ಮಾರ್ಕೆಟ್‌ನಿಂದ ತಂದ ಹಣ್ಣುಗಳನ್ನು ಒಂದೇ ದಿನ ತಿಂದು ಖಾಲಿ ಮಾಡಲಾಗದು ಹಾಗಾಗಿ ಇವುಗಳನ್ನು ಫ್ರಿಡ್ಜ್‌ನಲ್ಲಿ ಇಡಿ. ಹಣ್ಣುಗಳನ್ನು ಸಹ ಫ್ರಿಡ್ಜ್‌ನಿಂದ ತೆಗೆದು 20 ನಿಮಿಷ ಬಿಟ್ಟು ಸೇವಿಸಿ.
ಉಪ್ಪಿನಕಾಯಿಗಳನ್ನು ಸರಿಯಾಗಿ ಶೇಖರಿಸದೇ ಇದ್ದರೆ ಕೆಲವೊಮ್ಮೆ ಉಪ್ಪಿನಕಾಯಿಗಳು ಬೇಗನೇ ಹಾಳಾಗುತ್ತವೆ. ವರ್ಷಕ್ಕಾಗುವಷ್ಟು ತುಂಬಾ ಕಷ್ಟಪಟ್ಟು ಮಾಡಿದ ಉಪ್ಪಿನಕಾಯಿಗಳು ಹೊರಗೆ ಇಟ್ಟರೆ ಅದರ ಮೇಲೆ ಬೂಸು ಬರಬಹುದು ಅಥವಾ ಇಟ್ಟಲ್ಲಿಯೇ ಕೊಳೆತು ಹೋಗಬಹುದು. ಹಾಗಾಗಿ ಫ್ರಿಡ್ಜ್‌ನಲ್ಲಿ ಉಪ್ಪಿನಕಾಯಿ ಇಟ್ಟರೆ ಬಹು ದಿನಗಳವರೆಗೂ ಉಪ್ಪಿನಕಾಯಿಯನ್ನು ಕೆಡದಂರೆ ಸಂರಕ್ಷಿಸಬಹುದು.
ಡ್ರೈ ಫ್ರೂಟ್ಸ್ ಫ್ರಿಡ್ಜ್‌ನಲ್ಲಿ ಇಡಬಹುದು. ರೆಡಿಮೇಡ್ ಹಣ್ಣಿನ ಜ್ಯೂಸ್ ಮಿಕ್ಕದರೆ ಫ್ರಿಡ್ಜ್‌ನಲ್ಲಿಟ್ಟು ಸೇವಿಸಬಹುದು. ಸಾಸ್, ಚೀಸ್, ರೆಡಿಮೇಡ್ ಬೆಣ್ಣೆ, ಮೊಟ್ಟೆ, ಹಸಿ ಮಾಂಸ ಇವುಗಳನ್ನೆಲ್ಲಾ ಫ್ರಿಡ್ಜ್‌ನಲ್ಲಿಟ್ಟು ಬಳಸಬಹುದು. ಆದರೆ ನೆನಪಿರಲಿ ಹೆಚ್ಚು ದಿನಗಳ ಕಾಲ ಫ್ರಿಡ್ಜ್‌ನಲ್ಲಿಯೇ ಈ ಎಲ್ಲಾ ವಸ್ತುಗಳನ್ನು ಇಟ್ಟು ಸೇವಿಸಬೇಡಿ. ಆದಷ್ಟು ತಾಜಾ ಆಹಾರ ಪದಾರ್ಥಗಳನ್ನು ಸೇವಿಸಿ. ಒಂದೆರಡು ದಿನಗಳವರೆಗೆ ಮಾತ್ರ ಫ್ರಿಡ್ಜ್‌ನಲ್ಲಿ ಆಹಾರ ಪದಾರ್ಥಗಳನ್ನು ಇಡಲು ಯೋಗ್ಯ.