Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ರಾಮಮಂದಿರ ದೇಣಿಗೆ ಅಕ್ರಮ ಆರೋಪ: ಎಸ್‌ಐಟಿ ತನಿಖೆಯ ನಿರ್ಧಾರವನ್ನು ಸ್ವಾಗತಿಸಿದ ನೃಪೇಂದ್ರ ಮಿಶ್ರಾ

​ಫಿಫಾ ವಿಶ್ವಕಪ್ 2026: ಟೆಕ್ಸಾಸ್‌ನಲ್ಲಿ ಹೈ-ವೋಲ್ಟೇಜ್ ಥ್ರಿಲ್ಲರ್; ನೆದರ್ಲ್ಯಾಂಡ್ಸ್ ವಿರುದ್ಧ ಸಾಹಸಿಕ ಹೋರಾಟ ನಡೆಸಿ 2-2 ಸಮಬಲ ಸಾಧಿಸಿದ ಜಪಾನ್!

BIG NEWS: ರಾಜ್ಯದ ಆರೋಗ್ಯ ಇಲಾಖೆಯ ‘NHM ಗುತ್ತಿಗೆ ನೌಕರ’ರನ್ನು ‘ಖಾಯಂ’ ಬಗ್ಗೆ ಸಚಿವ ಯು.ಟಿ ಖಾದರ್ ಹೇಳಿದ್ದೇನು ಗೊತ್ತಾ?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೀಗಿವೆ 2027ರ ‘ಜನಗಣತಿ’ಯ ವೇಳೆಯಲ್ಲಿ ನಿಮಗೆ ಕೇಳುವಂತ ’33 ಪ್ರಶ್ನೆ’ಗಳು | Census-2027
KARNATAKA

ಹೀಗಿವೆ 2027ರ ‘ಜನಗಣತಿ’ಯ ವೇಳೆಯಲ್ಲಿ ನಿಮಗೆ ಕೇಳುವಂತ ’33 ಪ್ರಶ್ನೆ’ಗಳು | Census-2027

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ 2027ರ ಭಾರತದ ಜನಗಣತಿಗಾಗಿ (Census of India 2027) ಸಿದ್ಧಪಡಿಸಲಾದ ಪ್ರಶ್ನಾವಳಿಗಳ ಅಧಿಕೃತ ಕನ್ನಡ ಆವೃತ್ತಿಯನ್ನು ಒಳಗೊಂಡ ‘ಕರ್ನಾಟಕ ರಾಜ್ಯಪತ್ರ’ದ ವಿಶೇಷ ಸಂಚಿಕೆಯನ್ನು ಹೊರಡಿಸಲಾಗಿದೆ. ಮನೆಗಳ ಪಟ್ಟಿ ಮತ್ತು ವಸತಿ ಗಣತಿಗಾಗಿ ಒಟ್ಟು 33 ಪ್ರಶ್ನೆಗಳನ್ನು ನಿಗದಿಪಡಿಸಲಾಗಿದ್ದು, ಸಾರ್ವಜನಿಕರ ಮಾಹಿತಿಗಾಗಿ ಇದನ್ನು ಪ್ರಕಟಿಸಲಾಗಿದೆ.

ರಾಜ್ಯಪತ್ರದಲ್ಲಿ ಏನಿದೆ:

ಕೇಂದ್ರದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ಜನವರಿ 22, 2026 ರಂದು ಹೊರಡಿಸಿದ್ದ ಅಧಿಸೂಚನೆಗೆ ಪೂರಕವಾಗಿ, ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ ಜಿ.ಕೆ. ಅವರ ಆದೇಶದಂತೆ ಮಾರ್ಚ್ 6, 2026 ರಂದು ಈ ರಾಜ್ಯಪತ್ರವನ್ನು ಪ್ರಕಟಿಸಲಾಗಿದೆ.

ಗಣತಿಯ ವೇಳೆ ಕೇಳಲಾಗುವ ಪ್ರಮುಖ 33 ಪ್ರಶ್ನೆಗಳು:

ಗಣತಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದಾಗ ಸಂಗ್ರಹಿಸಲಿರುವ ಮಾಹಿತಿಯ ವಿವರಗಳು ಹೀಗಿವೆ:

  1. ಮನೆ ಮತ್ತು ಕಟ್ಟಡದ ವಿವರ: ಕಟ್ಟಡದ ಸಂಖ್ಯೆ, ಜನಗಣತಿ ಮನೆ ಸಂಖ್ಯೆ, ಮನೆಯ ನೆಲ, ಗೋಡೆ ಮತ್ತು ಮೇಲ್ಛಾವಣಿಗೆ ಬಳಸಲಾದ ಪ್ರಧಾನ ಸಾಮಗ್ರಿ.

  2. ಬಳಕೆ ಮತ್ತು ಸ್ಥಿತಿ: ಜನಗಣತಿ ಮನೆಯ ಬಳಕೆ (ವಸತಿ ಅಥವಾ ಇತರ ಉದ್ದೇಶ) ಮತ್ತು ಮನೆಯ ಪ್ರಸ್ತುತ ಸ್ಥಿತಿ.

  3. ಕುಟುಂಬದ ಮಾಹಿತಿ: ಕುಟುಂಬದ ಸಂಖ್ಯೆ, ವಾಸವಾಗಿರುವ ವ್ಯಕ್ತಿಗಳ ಒಟ್ಟು ಸಂಖ್ಯೆ, ಕುಟುಂಬದ ಮುಖ್ಯಸ್ಥರ ಹೆಸರು ಮತ್ತು ಲಿಂಗ.

  4. ಸಾಮಾಜಿಕ ಹಿನ್ನೆಲೆ: ಕುಟುಂಬದ ಮುಖ್ಯಸ್ಥರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಥವಾ ಇತರ ವರ್ಗಕ್ಕೆ ಸೇರಿದವರೇ ಎಂಬ ಮಾಹಿತಿ.

  5. ವಾಸದ ಸೌಕರ್ಯ: ಮನೆಯ ಮಾಲೀಕತ್ವದ ಸ್ಥಾನಮಾನ, ವಾಸವಿರುವ ಕೊಠಡಿಗಳ ಸಂಖ್ಯೆ, ಮನೆಯಲ್ಲಿರುವ ವಿವಾಹಿತ ದಂಪತಿಗಳ ಸಂಖ್ಯೆ.

  6. ಮೂಲಭೂತ ಸೌಕರ್ಯ: ಕುಡಿಯುವ ನೀರಿನ ಮೂಲ ಮತ್ತು ಲಭ್ಯತೆ, ಬೆಳಕಿನ ಪ್ರಧಾನ ಮೂಲ (ವಿದ್ಯುತ್ ಇತ್ಯಾದಿ), ಶೌಚಾಲಯದ ಲಭ್ಯತೆ ಮತ್ತು ಅದರ ವಿಧ, ತ್ಯಾಜ್ಯ ನೀರು ಹರಿದುಹೋಗುವ ವ್ಯವಸ್ಥೆ ಮತ್ತು ಸ್ನಾನಗೃಹದ ಸೌಲಭ್ಯ.

  7. ಅಡುಗೆ ಸೌಲಭ್ಯ: ಪ್ರತ್ಯೇಕ ಅಡುಗೆ ಮನೆ ಇದೆಯೇ? ಎಲ್‌ಪಿಜಿ (LPG) ಅಥವಾ ಪಿಎನ್‌ಜಿ (PNG) ಸಂಪರ್ಕವಿದೆಯೇ? ಅಡುಗೆಗೆ ಬಳಸುವ ಪ್ರಧಾನ ಇಂಧನ ಯಾವುದು?

  8. ಆಸ್ತಿ ಮತ್ತು ಸಾಧನಗಳು: ರೇಡಿಯೋ/ಟ್ರಾನ್ಸಿಸ್ಟರ್, ಟೆಲಿವಿಷನ್, ಇಂಟರ್ನೆಟ್ ಸೌಲಭ್ಯ, ಲ್ಯಾಪ್‌ಟಾಪ್/ಕಂಪ್ಯೂಟರ್, ಟೆಲಿಫೋನ್/ಮೊಬೈಲ್/ಸ್ಮಾರ್ಟ್‌ಫೋನ್ ಲಭ್ಯತೆ.

  9. ವಾಹನ ಸೌಕರ್ಯ: ಬೈಸಿಕಲ್, ಸ್ಕೂಟರ್/ಮೋಟಾರ್ ಸೈಕಲ್/ಮೊಪೆಡ್, ಕಾರ್/ಜೀಪ್/ವ್ಯಾನ್ ಹೊಂದಿರುವ ಬಗ್ಗೆ ಮಾಹಿತಿ.

  10. ಆಹಾರ ಮತ್ತು ಸಂಪರ್ಕ: ಕುಟುಂಬವು ಸೇವಿಸುವ ಪ್ರಮುಖ ಧಾನ್ಯ ಯಾವುದು? ಮತ್ತು ಜನಗಣತಿ ಸಂಬಂಧಿತ ವಿಷಯಗಳ ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆ.

ಹೀಗಿವೆ ನಿಮಗೆ ಕೇಳಲಿರುವಂತ 33 ಪ್ರಶ್ನೆಗಳ ಪಟ್ಟಿ

  1. ಕಟ್ಟಡದ ಸಂಖ್ಯೆ (ಮಹಾನಗರ ಪಾಲಿಕೆ ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ಜನಗಣತಿ ಸಂಖ್ಯೆ).
  2. ಜನಗಣತಿ ಮನೆ ಸಂಖ್ಯೆ.
  3. ಜನಗಣತಿ ಮನೆಯ ನೆಲಕ್ಕೆ ಬಳಸಲಾಗಿರುವ ಪ್ರಧಾನ ಸಾಮಗ್ರಿ.
  4. ಜನಗಣತಿ ಮನೆಯ ಗೋಡೆಗೆ ಬಳಸಲಾಗಿರುವ ಪ್ರಧಾನ ಸಾಮಗ್ರಿ.
  5. ಜನಗಣತಿ ಮನೆಯ ಮೇಲ್ಮಾವಣಿಗೆ ಬಳಸಲಾಗಿರುವ ಪ್ರಧಾನ ಸಾಮಗ್ರಿ.
  6. ಜನಗಣತಿ ಮನೆಯನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ.
  7. ಜನಗಣತಿ ಮನೆಯ ಸ್ಥಿತಿ.
  8. ಕುಟುಂಬದ ಸಂಖ್ಯೆ.
  9. ಕುಟುಂಬದಲ್ಲಿ ಸಾಮಾನ್ಯವಾಗಿ ವಾಸಿಸುತ್ತಿರುವ ವ್ಯಕ್ತಿಗಳ ಒಟ್ಟು ಸಂಖ್ಯೆ.
  10. ಕುಟುಂಬದ ಮುಖ್ಯಸ್ಥರ ಹೆಸರು.
  11. ಕುಟುಂಬದ ಮುಖ್ಯಸ್ಥರ ಲಿಂಗ.
  12. ಕುಟುಂಬದ ಮುಖ್ಯಸ್ಥರು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಇತರೆ ವರ್ಗಕ್ಕೆ ಸೇರಿದವರೆ,
  13. ಜನಗಣತಿ ಮನೆಯ ಮಾಲೀಕತ್ವದ ಸ್ಥಾನಮಾನ.
  14. ಕುಟುಂಬದ ಅಧೀನದಲ್ಲಿರುವ ವಾಸದ ಕೊಠಡಿಗಳ ಸಂಖ್ಯೆ.
  15. ಕುಟುಂಬದಲ್ಲಿ ವಾಸಿಸುತ್ತಿರುವ ವಿವಾಹಿತ ದಂಪತಿಗಳ ಸಂಖ್ಯೆ.
  16. 16. ಕುಡಿಯುವ ನೀರಿನ ಪ್ರಧಾನ ಮೂಲ.
  17. ಕುಡಿಯುವ ನೀರಿನ ಮೂಲದ ಲಭ್ಯತೆ.
  18. ಬೆಳಕಿನ ಪ್ರಧಾನ ಮೂಲ.
  19. ಶೌಚಾಲಯದ ಲಭ್ಯತೆ.
  20. ಶೌಚಾಲಯದ ಬಗೆ/ವಿಧ.
  21. ತ್ಯಾಜ್ಯ ನೀರನ್ನು ಹೊರಸಾಗಿಸುವ ವ್ಯವಸ್ಥೆ,
  22. ಸ್ನಾನಗೃಹದ ಲಭ್ಯತೆ,
  23. ಅಡುಗೆ ಮನೆಯ ಮತ್ತು LPG/PNG ಸಂಪರ್ಕದ ಲಭ್ಯತೆ.
  24. ಅಡಿಗೆಗೆ ಬಳಸುವ ಪ್ರಮುಖ ಇಂಧನ.
  25. ರೇಡಿಯೋ/ಟ್ರಾನ್ಸಿಸ್ಟರ್.
  26. ಲ್ಯಾಪ್ಯಾಪ್/ಕಂಪ್ಯೂಟರ್.
  27. ಟೆಲಿವಿಷನ್.
  28. ಇಂಟರ್‌ನೆಟ್‌ ಸಂಪರ್ಕ.
  29. ಟೆಲಿಫೋನ್/ ಮೊಬೈಲ್ ಫೋನ್ /ಸ್ಮಾರ್ಟ್‌ಫೋನ್.
  30. ಬೈಸಿಕಲ್/ಸ್ಕೂಟರ್/ಮೋಟಾರ್ ಸೈಕಲ್ ಮೊಪೆಡ್.
  31. ಕಾರ್/ಜೀಪ್/ವ್ಯಾನ್.
  32. ಕುಟುಂಬವು ಸೇವಿಸುವ ಪ್ರಮುಖ ಧಾನ್ಯಗಳು.
  33. ಮೊಬೈಲ್ ಸಂಖ್ಯೆ (ಜನಗಣತಿ ಸಂಬಂಧಿತ ವಿಷಯ ಸಂಪರ್ಕಕ್ಕೆ ಮಾತ್ರ).

ಗಮನಿಸಬೇಕಾದ ಅಂಶ:

ಈ ಮಾಹಿತಿಯನ್ನು ಕೇವಲ ಜನಗಣತಿ ಉದ್ದೇಶಕ್ಕಾಗಿ ಮಾತ್ರ ಸಂಗ್ರಹಿಸಲಾಗುತ್ತಿದ್ದು, ಜನಗಣತಿ ಕಾಯ್ದೆ 1948ರ ಅಡಿಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅಧಿಕಾರಿಗಳು ಕೇಳುವ 33 ಪ್ರಶ್ನೆಗಳಿಗೆ ನಿಖರ ಮಾಹಿತಿ ನೀಡುವ ಮೂಲಕ ರಾಷ್ಟ್ರದ ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆಗೆ ಸಹಕರಿಸಲು ಕೋರಲಾಗಿದೆ.

BIG Alert: ‘ಆನ್‌ಲೈನ್‌’ನಲ್ಲಿ ‘IPL ಟಿಕೆಟ್’ ಖರೀದಿಗಾಗಿ ಹುಡುಕುತ್ತಿದ್ದೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ.!

Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದ ಆರೋಗ್ಯ ಇಲಾಖೆಯ ‘NHM ಗುತ್ತಿಗೆ ನೌಕರ’ರನ್ನು ‘ಖಾಯಂ’ ಬಗ್ಗೆ ಸಚಿವ ಯು.ಟಿ ಖಾದರ್ ಹೇಳಿದ್ದೇನು ಗೊತ್ತಾ?

2 Mins Read

BREAKING : ಬೆಂಗಳೂರಲ್ಲಿ ಸೆಲ್ಫಿ ವಿಡಿಯೋ ಮಾಡಿ, ಹೋಂ ಗಾರ್ಡ್ ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ!

1 Min Read

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಹತ್ಯೆ : ಅಶ್ಲೀಲ ಮೆಸೇಜ್ ಮಾಡಿದಕ್ಕೆ, ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Mins Read
Recent News

​ರಾಮಮಂದಿರ ದೇಣಿಗೆ ಅಕ್ರಮ ಆರೋಪ: ಎಸ್‌ಐಟಿ ತನಿಖೆಯ ನಿರ್ಧಾರವನ್ನು ಸ್ವಾಗತಿಸಿದ ನೃಪೇಂದ್ರ ಮಿಶ್ರಾ

​ಫಿಫಾ ವಿಶ್ವಕಪ್ 2026: ಟೆಕ್ಸಾಸ್‌ನಲ್ಲಿ ಹೈ-ವೋಲ್ಟೇಜ್ ಥ್ರಿಲ್ಲರ್; ನೆದರ್ಲ್ಯಾಂಡ್ಸ್ ವಿರುದ್ಧ ಸಾಹಸಿಕ ಹೋರಾಟ ನಡೆಸಿ 2-2 ಸಮಬಲ ಸಾಧಿಸಿದ ಜಪಾನ್!

BIG NEWS: ರಾಜ್ಯದ ಆರೋಗ್ಯ ಇಲಾಖೆಯ ‘NHM ಗುತ್ತಿಗೆ ನೌಕರ’ರನ್ನು ‘ಖಾಯಂ’ ಬಗ್ಗೆ ಸಚಿವ ಯು.ಟಿ ಖಾದರ್ ಹೇಳಿದ್ದೇನು ಗೊತ್ತಾ?

BREAKING : ಬೆಂಗಳೂರಲ್ಲಿ ಸೆಲ್ಫಿ ವಿಡಿಯೋ ಮಾಡಿ, ಹೋಂ ಗಾರ್ಡ್ ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ!

State News
KARNATAKA

BIG NEWS: ರಾಜ್ಯದ ಆರೋಗ್ಯ ಇಲಾಖೆಯ ‘NHM ಗುತ್ತಿಗೆ ನೌಕರ’ರನ್ನು ‘ಖಾಯಂ’ ಬಗ್ಗೆ ಸಚಿವ ಯು.ಟಿ ಖಾದರ್ ಹೇಳಿದ್ದೇನು ಗೊತ್ತಾ?

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಮಂಗಳೂರು : “ಸರ್, ನಮಗೆ ಬರುತ್ತಿರುವ ಅಲ್ಪ ಸಂಬಳದಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಕಳೆದ 15 ವರ್ಷಗಳಿಂದ ಕನಿಷ್ಠ ವೇತನದಲ್ಲೇ…

BREAKING : ಬೆಂಗಳೂರಲ್ಲಿ ಸೆಲ್ಫಿ ವಿಡಿಯೋ ಮಾಡಿ, ಹೋಂ ಗಾರ್ಡ್ ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ!

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಹತ್ಯೆ : ಅಶ್ಲೀಲ ಮೆಸೇಜ್ ಮಾಡಿದಕ್ಕೆ, ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

BIG NEWS: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಊರಿನ ಬಡ ರೈತ ಮಹಿಳೆಗೆ ಸಿಗದ ‘ಗಂಗಾ ಕಲ್ಯಾಣ ಬೋರ್ ವೆಲ್’

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.