ಮೈಸೂರು : ಜೆಡಿಎಸ್ ವರಿಷ್ಠ ದೇವೇಗೌಡರು ಕುಮಾರಸ್ವಾಮಿ ಅವರಿಗೆ ಅಧಿಕಾರ ಕೊಟ್ಟರು ಈಗ ಜೆಡಿಎಸ್ ಅನ್ನು ಎಚ್ ಡಿ ಕುಮಾರಸ್ವಾಮಿ ಬಿಜೆಪಿಯವರಿಗೆ ಮಾರಿಬಿಟ್ಟಿದ್ದಾರೆ ಎಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜೆಡಿಎಸ್ ಹಾಗೂ ಎಚ್ ಡಿ ಕುಮಾರಸ್ವಾಮಿ ಕುರಿತು ಲೇವಡಿ ಮಾಡಿದರು.
ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಯಾವ ಮೋದಿ ಅಲೆಯೂ ಇಲ್ಲ. ರಾಜ್ಯದಲ್ಲಿ ಶೇಕಡ 82 ರಷ್ಟು ಮಹಿಳೆಯರು ಕಾಂಗ್ರೆಸ್ ಪರ ಇದ್ದಾರೆ. ಇನ್ನು ಮುಂದೆ ದಳ ಇರಲ್ಲ ಕುಮಾರಣ್ಣ ನಿಮ್ಮ ಪಾರ್ಟಿ ಮಾರಿ ಆಗೋಯ್ತು. ಜನತಾ ಪಕ್ಷವನ್ನು ಹೆಚ್ ಡಿ ಕುಮಾರಸ್ವಾಮಿ ಅಡಮಾನ ಇಟ್ಟಾಯ್ತು. ಜನತಾದಳ ಕಾರ್ಯಕರ್ತರು ಕಾಂಗ್ರೆಸ್ ಸೇರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ನಾನು ವಿಷ ಹಾಕಿದ್ದೇನೆ ಅಂತ ಎಚ್ ಡಿ ಕುಮಾರಸ್ವಾಮಿ ಹೇಳುತ್ತಾರೆ. ತಮ್ಮ ಸರ್ಕಾರ ಬೀಳಿಸಿದವರನ್ನೇ ಆದಿಚುಂಚನಗಿರಿ ಮಠಕ್ಕೆ ಕರೆದೊಯ್ದಿದ್ದಾರೆ.ನಿಮಗೆ ಮಾನ ಮರ್ಯಾದೆ ಬೇಡವಾ ಎಂದು ಎಚ್ಡಿಕೆ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಸೂರ್ಯ ಮುಳುಗುವುದು ನಿಶ್ಚಿತ ಹೇಗೋ ಕಮಲ ಬಾಡುವುದು ಖಚಿತ ಎಂದು ಇದೆ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭವಿಷ್ಯ ನುಡಿದರು.