ದಾವಣಗೆರೆ : ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಸಾಕು ಲೋಡ್ ಹೆಡಿಂಗ್ ಕಾಮಗಾರಿ ಅಂತ ಹೆಸರು ಹೇಳಿ ಪದೇ ಪದೇ ಕರೆಂಟ್ ತೆಗೆಯುತ್ತಿದ್ದರು ಆದರೆ ಈ ಬಾರಿ ಎಲ್ಲೂ ಕೂಡ ಹಾಗೆ ಇಲ್ಲ. ರಾಜ್ಯದಲ್ಲಿ ಎಲ್ಲೂ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಇಂಧನ ಖಾತೆಯ ಸಚಿವ ಕೆಜೆ ಜಾರ್ಜ್ ಅವರು ಸ್ಪಷ್ಟಪಡಿಸಿದರು.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲೂ ಕೂಡ ಲೋಡ್ ಶೆಡ್ಡಿಂಗ್ ಇಲ್ಲ ಕೆಲವು ಕಡೆಗಳಲ್ಲಿ ನಿರ್ವಹಣೆ ಇದ್ದಾಗ ತೊಂದರೆಯಾಗಿರಬಹುದು ಅಷ್ಟೇ. ಅದು ಬಿಟ್ಟು ಎಲ್ಲೂ ಲೋಡ್ ಶೆಡ್ಡಿಂಗ್ ಎನ್ನುವ ಮಾತೇ ಇಲ್ಲ ಎಂದು ಅವರು ತಿಳಿಸಿದರು.
ಇನ್ನು ವಿದ್ಯುತ್ ದರ ಏರಿಕೆಯಾಗುತ್ತೆ ಎನ್ನುವುದರ ಕುರಿತು, ವಿದ್ಯುತ್ ದರ ಏರಿಕೆಯಾದ ತಕ್ಷಣ ಗೃಹಜ್ಯೋತಿ ಯೋಜನೆ ನಿಲ್ಲಿಸಲ್ಲ. ಗೃಹಜ್ಯೋತಿ ಯೋಜನೆಗೂ ವಿದ್ಯುತ್ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಇಂಧನ ಇಲಾಖೆ ಸಚಿವ ಜಯ ಜಾರ್ಜ್ ಹೇಳಿಕೆ ನೀಡಿದರು.