ಬೆಂಗಳೂರು : ಇಷ್ಟು ದಿನ ಕಾಂಗ್ರೆಸ್ ನಲ್ಲಿ ಸೆಪ್ಟೆಂಬರ್, ಅಕ್ಟೊಬರ್ ನವೆಂಬರ್ ನಲ್ಲಿ ಕ್ರಾಂತಿ ಆಗಲಿದೆ ಎಂದು ಕಾಂಗ್ರೆಸ್ ನಾಯಕರು ಸೇರಿ ಬಿಜೆಪಿ ನಾಯಕರು ಹೇಳಿದ್ದೆ ಹೇಳಿದ್ದು, ಇದೀಗ ಶಾಸಕ ಪ್ರದೀಪ್ ಈಶ್ವರ್ ರಾಜ್ಯ ಬಿಜೆಪಿಯಲ್ಲಿ ಅಕ್ಟೊಬರ್ ಕ್ರಾಂತಿ ಆಗಲಿದೆ ಎಂದು ಸ್ಫೋಟಕವಾದ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಅಕ್ಟೊಬರ್ ಕ್ರಾಂತಿ ಆಗುತ್ತದೆ. ಆರ್.ಅಶೋಕ್ ವಿಪಕ್ಷ ಸ್ಥಾನಕ್ಕೆ ಕಂಟಕವಿದೆ. ಆರ್.ಅಶೋಕ್ ಔಟ್ ಗೊಯಿಂಗ್ ವಿಪಕ್ಷ ನಾಯಕ. ಸುನೀಲ್ ಕುಮಾರ್ ಇನ್ ಕಮಿಂಗ್ ವಿಪಕ್ಷ ನಾಯಕ ಎಂದು ಪದ್ಮನಾಭನಗರದ ಜ್ಯೋತಿಷ್ಯಾಲಯ ಸುಳ್ಳು ಹೇಳುತ್ತದೆ. ಹೀಗಾಗಿ ಬೇರೆ ಜ್ಯೋತಿಷ್ಯಾಲಯಕ್ಕೆ ಹೋಗಿದ್ದೆ. ಆರ್.ಅಶೋಕ್ ಚೇರ್ ಅಕ್ಟೊಬರ್ ತಿಂಗಳಲ್ಲಿ ಅಲ್ಲಾಡುತ್ತೆ ಬಿಜೆಪಿಯ ಮನೆ ಒಡೆದು ನೂರು ಬಾಗಿಲು ಆಗಿದೆ ಎಂದರು.