ದಕ್ಷಿಣಕನ್ನಡ : ಲೋಕಸಭಾ ಕ್ಷೇತ್ರ ಟಿಕೆಟ್ ವಂಚಿತರಾಗಿರುವಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಒಬ್ಬರು.ಇದೀಗ ಅವರು ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದು ರಾಜ್ಯದಲ್ಲಿ ನಾನು ಎಂದು ಕೂಡ ಗುಂಪುಗಾರಿಕೆ ರಾಜಕಾರಣ ಮಾಡಿಲ್ಲ. ವಿಧಾನಸಭೆ ಚುನಾವಣೆ ವೇಳೆ ಪಕ್ಷದಲ್ಲಿ ಗುಂಪುಗಾರಿಕೆ ಇತ್ತು ಎಂಬ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
BREAKING : ದೆಹಲಿಯ ನರೇಲಾದ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ : ಹಲವು ಕಾರ್ಮಿಕರು ಸಿಲುಕಿರುವ ಶಂಕೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲವೂ ಕೊಟ್ಟಿದೆ.ನಾನು ಪಕ್ಷಕ್ಕೆ ಏನಾದ್ರು ಮಾಡಬೇಕು ಮೋದಿ ಮತ್ತೆ ಪ್ರಧಾನಿ ಮಾಡಬೇಕು ಅನ್ನುವುದು ನನ್ನ ಸಂಕಲ್ಪ. ನಾನು ಎಂದು ಕೂಡ ಗುಂಪುಗಾರಿಕೆ ರಾಜಕಾರಣ ಮಾಡಿಲ್ಲ. ವಿಧಾನಸಭೆ ಚುನಾವಣೆ ವೇಳೆ ಪಕ್ಷದಲ್ಲಿ ಗುಂಪುಗಾರಿಕೆ ಇತ್ತು ಎಂದು ತಿಳಿಸಿದರು.
ಒಂದು ಗುಂಪೂ ದೆಹಲಿ ಮತ್ತೊಂದು ಗುಂಪು ಕರ್ನಾಟಕದಲ್ಲಿ ಇತ್ತು.ನಾವೆಲ್ಲ ಬಿಜೆಪಿ ಗುಂಪಿನಲ್ಲಿ ಇದ್ದೇವು. ಬಿಜೆಪಿ ಗುಂಪಿನವರಿಗೆ ದೊಡ್ಡ ಗೌರವ ಸಿಕ್ಕಿಲ್ಲ.ಜನರು ಕೂಡ ಗುಂಪುಗಾರಿಕೆಗೆ ವೋಟ್ ಕೊಡಲ್ಲ ಅಂದ್ರು.ಪಾಪ ಮಾಡಿದವರು ಎಲ್ಲ ಕೊನೆಗೆ ಶುದ್ಧೀಕರಣ ಆಗುತ್ತಾರೆ. ಮುಂದಿನ ದಿನಗಳಲ್ಲಿ ಇದೆಲ್ಲ ಆಗಲಿದೆ ಎಂದರು.
ನಾವು ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತ: ಸಿ.ಎಂ.ಸಿದ್ದರಾಮಯ್ಯ
ನಮ್ಮಲ್ಲಿ ಪ್ರಧಾನಿ ಮೋದಿ ಪರಿಕಲ್ಪನೆಯ ಸಂಘಟನೆ ಇದೆ. ಸ್ವಾರ್ಥ ರಹಿತ ರಾಜಕಾರಣವನ್ನು ಮುಂದುವರಿಸಿಕೊಂಡು ಹೋಗಬೇಕು.ಪ್ರಧಾನಿ ಮೋದಿ ಹೇಳಿದಂತೆ ಪರಿವಾರದಿಂದ ಮುಕ್ತರಾಗಬೇಕು.ಭ್ರಷ್ಟಾಚಾರ ಜಾತಿವಾದದಿಂದ ಮುಕ್ತರಾಗಿ ರಾಜನೀತಿ ಪಾಲಿಸಬೇಕು.ಈ ಚುನಾವಣೆಯಲ್ಲಿ ಅದು ಆಗಬೇಕಿತ್ತು.ಆದರೆ ರಾಜ್ಯದಲ್ಲಿ ಜವಾಬ್ದಾರಿ ಹೊತ್ತವರು ಈ ಮೂರರಿಂದ ಹೊರತಾಗಿಲ್ಲ ಎಂದರು.
ಕರ್ನಾಟಕದಲ್ಲಿ ಪ್ರಾಮಾಣಿಕತೆ ಶಬ್ದಕ್ಕೆ ಅರ್ಥ ಇಲ್ಲವಾಗಿದೆ.ಇದು ಮನಸ್ಸಿಗೆ ನೋವುಂಟು ಮಾಡುವ ಸಂಗತಿ.ಚುನಾವಣೆಯವರೆಗೂ ನೋವನ್ನು ನುಂಗಿಕೊಳ್ಳಬೇಕು ಎಂದು ಬಿಜೆಪಿ ನಾಯಕರು ವಿರುದ್ಧ ಡಿವಿ ಸದಾನಂದ ಗೌಡ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ನಾನು ರೈಲು ಬಿಡೋರನ್ನು ನೋಡಿದ್ದೀನಿ. ಆದರೆ ಮೋದಿ, ಬಿಜೆಪಿಯವರಷ್ಟು ರೈಲು ಬಿಡೋರನ್ನು ನೋಡೇ ಇಲ್ಲ: ಸಿ.ಎಂ.ಸಿದ್ದರಾಮಯ್ಯ