ರಾಮನಗರ : ಕರ್ನಾಟಕದಲ್ಲಿ ಬೆಂಗಳೂರು -ಚೆನ್ನೈ ಎಕ್ಸ್ಪ್ರೆಸ್ವೇ ಕಾಮಗಾರಿಯ ವೈಮಾನಿಕ ಸಮೀಕ್ಷೆ ನಡೆಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮಿಸಿದ ಬಗ್ಗೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾಗರೊಂದಿಗೆ ಕೆಂಪೇಗೌಡನ ದೊಡ್ಡಿಯಲ್ಲಿ ಮಾತನಾಡಿದ ಅವರು, ದಶಪಥ ಹೆದ್ದಾರಿಗೆ ಮೂಲ ಭೂತ ಸೌಲಭ್ಯ ಆಗಬೇಕು. ಕೆಲವೆಡೆ ಸರ್ವೀಸ್ ರಸ್ತೆ ಆಗಬೇಕು. ದಶಪಥ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕ ನಿಲುಗಡೆ ಆಗಬೇಕು.
ರಾಮನಗರ, ಚನ್ನಪಟ್ಟಣ ಸೇರಿದಂತೆ ಹಲವು ತಾಲೂಕಿಗೆ ಬರಲು ಜಾಗ ಇಲ್ಲ. ಅಪಘಾತ ಆದಾಗ ಪೊಲೀಸರು, ಅಂಬುಲೆನ್ಸ್ ಬರಲು ಜಾಗ ಇಲ್ಲ. ಪೆಟ್ರೋಲ್ ಖಾಲಿಯಾದ ಸಮಯದಲ್ಲಿ ಇಲ್ಲಿ ಪ್ರಯಾಣಿಕರು ಕಷ್ಟ ಪಡುತ್ತಾರೆ.
.ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಗಮನ ಸೆಳೆಯುತ್ತೇವೆ. ದಶಪಥ ಹೆದ್ದಾರಿಯಲ್ಲಿ ವೈಜ್ಞಾನಿಕವಾಗಿ ರಸ್ತೆ ಬಿಡಬೇಕು. 2 ನೇ ಹಂತದಲ್ಲಿ ಕ್ರಮ ಕೈಗೊಳ್ಳುತ್ತೇವೆ, ಲೋಪದೋಷಗಳ ಬಗ್ಗೆ ಸಚಿವರ ಬಳಿ ಮಾತನಾತ್ತೇವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.