ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ತುಂಬೆ ಹೂವು ಶಿವನಿಗೆ ಪ್ರಿಯವಾದದ್ದು. ಶಿವನ ಪೂಜೆಗೆ ಈ ಹೂವು ತುಂಬಾ ಶ್ರೇಷ್ಠ ಎಂಬ ನಂಬಿಕೆ ಇದೆ. ಇದೇ ಹೂವಿನಲ್ಲಿ ಅನೇಕ ಔಷಧಿ ಗುಣ ಸಮೃಧ್ಧವಾಗಿದೆ. ಅಂದಹಾಗೆ ಈ ಸಸಿ ಅಲ್ಲಲ್ಲಿ ಬೇಲಿಗಳಲ್ಲಿ ತನ್ನಂತಾನೆ ಬೆಳೆಯುತ್ತದೆ. ಹೀಗೆ ಬೇಲಿಗಳಲ್ಲಿ, ಹೊಲದ ಬದಿಗಳಲ್ಲಿ ಬೆಳೆಯುವ ಈ ತುಂಬೆ ಹೂವಿನಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಬಹುದು. ತುಂಬೆ ಹೂವಿನಲ್ಲಿರುವ ಅದ್ಭುತ್ವಾದ ಶಕ್ತಿಯನ್ನು ತಿಳಿದುಕೊಳ್ಳೋಣ.
ಕಾಮಾಲೆ ರೋಗಕ್ಕೆ ತುಂಬೆ ಹೂವು ರಾಮಬಾಣವಾಗಿದೆ. ಕಾಮಾಲೆ ರೋಗ ಮನುಷ್ಯನನ್ನು ತುಂಬಾ ಬಾದಿಸುತ್ತದೆ. ಕೆಲವರು ಈ ರೋಗಕ್ಕೆ ಕೆಲವೊಬ್ಬರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಲಿವರ್ ಹಾಗು ಯಕೃತ್‌ಗೆ ಏನಾದರು ಸಮಸ್ಯೆಯಾದಾಗ ಅಥವಾ ಇವೆರಡೂ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಕಾಮಾಲೆ ರೋಗಲಕ್ಷಣಗಳು ಕಾಣಸಿಕೊಳ್ಳುತ್ತವೆ.
ಲಿವರ್‌ಗೆ ಸಂಬಂಧಿಸಿದ ಎಲ್ಲ ಸಮ್ಯೆಗಳಿಗೆ ತುಂಬೆಗಿಡದ ಎಲೆಗಳು ಚಿಕಿತ್ಸೆಯಾಗುತ್ತವೆ. ಲಿವರ್ ಸಂಬಂಧಿಸಿದ ಹಾಗು ಕಾಮಾಲೆ ರೋಗಕ್ಕೆ ಈ ಗಿಡದ ಎಲೆಗಳನ್ನು ಹೇಗೆ ಬಳಸಬೇಕೆಂದರೆ, ತುಂಬೆ ಗಿಡದ ಎಲೆಗಳನ್ನು ಕಿತ್ತು ಚೆನ್ನಾಗಿ ತೊಳೆದು ಅವುಗಳನ್ನು ಮೆಣಸಿನ ಕಾಳಿನ ಜೊತೆಗೆ ಚೆನ್ನಾಗಿ ಜಜ್ಜಿಕೊಂಡ ರಸವನ್ನು ಬೇರ್ಪಡಿಸಿಕೊಳ್ಳಿ. ಈ ರಸಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ನೆಕ್ಕಬೇಕು. ಹೀಗೆ ಸುಮಾರು ಎಂಟು ದಿನಗಳ ಕಾಲ ನಿರಂತರವಾಗಿ ಬೆಳಗ್ಗೆ ಸೇವಿಸಬೇಕು. ಹೀಗೆ ಮಾಡಿದರೆ ಲಿವರ್‌ಗೆ ಸಂಬಂಧಿಸಿದ ಕಾಯಿಲೆ ಅಥವಾ ಜಾಂಡಿಸ್ ಸಹ ಗುಣಮುಖವಾಗುತ್ತದೆ. ಇಂತಹ ದೊಡ್ಡ ಸಮಸ್ಯೆಗೆ ಈ ಸಣ್ಣ ಮತ್ತು ಸುಲಭವಾದ ಮದ್ದು ತುಂಬಾ ಪರಿಣಾಮಕಾರಿಯಾಗಿದೆ.
ಮದುಮೇಹ ರೋಗಕ್ಕೂ ಸಹ ತುಂಬೆ ಗಿಡದ ಎಲೆಗಳು ಔಷಧಿಯಾಗಿದೆ. ಈ ಎಲೆಗಳನ್ನು ಕೈಯಲ್ಲಿ ಹಿಸುಕಿ ಹಿಂಡಿ ರಸ ತೆಗೆಯಬೇಕು. ಈ ರಸಕ್ಕೆ ಒಂದು ಚಮಚ ಕಾಳುಮೆಣಸಿನ ಪುಡಿ ಸೇರಿಸಿ ಹೊಟ್ಟೆಗೆ ತೆಗೆದುಕೊಳ್ಳಬೇಕು. ಹೀಗೆ ಸುಮಾರು ಒಂದು ತಿಂಗಳು ಮಾಡಿದರೆ ರಕ್ತದಲ್ಲಿ ಸಕ್ಕರೆ ಅಂಶ ಕಡಿಯಾಗುತ್ತಾ ಬರುತ್ತದೆ.
ನಗಡಿ ಕೆಮ್ಮು ಜ್ವರದಂತಹ ಸಾಮಾನ್ಯ ರೋಗಗಳಿಗೂ ತುಂಬೆ ಗಿಡದ ಎಲೆ ಅದ್ಭುತವಾದ ಔಷಧಿ. ಇನ್ನು ಸೈನಸ್ ತೊಂದರೆ ಇದ್ದವರು ಇದರ ರಸವನ್ನು ತೆಗೆದು ಚೆನ್ನಾಗಿ ಸೋಸಿ ಎರಡೂ ಮೂಗಿನ ಹೊಳ್ಳಕ್ಕೆ ಹಾಕಿಕೊಳ್ಳುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.
ಚರ್ಮದ ತುರಿಕೆ, ಗಜಕರ್ಣ ಕೆರೆತ ಇದ್ದಲ್ಲಿ ತುಂಬೆ ಗಿಡ ಎಲೆಯ ರಸ ಹಚ್ಚಿಕೊಳ್ಳಬಹುದು. ತಲೆ ಹೊಟ್ಟು ಇದ್ದವರು ಈ ಎಲೆಯ ರಸವನ್ನು ವಾರದಲ್ಲಿ ಎರಡು ಬಾರಿ ಹಚ್ಚಿಕೊಳ್ಳಬಹುದು.