ಮೈಸೂರು : ಬಾಗಲಕೋಟೆಯಲ್ಲಿ ಮಹಿಳೆ ಹಣ ಎಸೆದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಯಾರು ಶಾಂತಿ ಕದಡುತ್ತಿದ್ದಾರೋ ಅವರು ಗಮನಿಸಬೇಕು. ರಾಜ್ಯದಲ್ಲಿ ಶಾಂತಿ ವಿಚಾರದ ಬಗ್ಗೆ ಸಿಎಂರನ್ನು ಪ್ರಶ್ನಿಸಿ. ʻಈಗ ಮುಸ್ಲಿಂ ಮಹಿಳೆಯರು ಶಾಂತಿ ಕೇಳುವುದರಲ್ಲಿ ತಪ್ಪಿಲ್ಲʼ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಾದಾಮಿಯ ಕೆರೂರು ಗುಂಪು ಘರ್ಷಣೆ ವೇಳೆ ಕೆಲ ಜನರಿಗೆ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿಜುಲೈ 15 ರಂದು, ಇಂದು ಸಿದ್ದರಾಮಯ್ಯ ಸಾಂತ್ವನ ಹೇಳಿ ಪರಿಹಾರ ನೀಡುವ ಸಲುವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಮಹಿಳೆಯೊಬ್ಬರಿಗೆ 2 ಲಕ್ಷ ನೀಡಿ ಸಂದರ್ಭದಲ್ಲಿ ನನಗೆ ಹಣಬೇಡ ನನಗೆ ಶಾಂತಿ, ನಮಗೆ ನ್ಯಾಯ ಕೊಡಿ ಎಂದು ಸಿದ್ದರಾಮಯ್ಯ ಅವರು ನೀಡಿದ ಹಣವನ್ನು ಏಕಾಏಕಿ ಕಾರಿನ ಮೇಲೆ ಎಸೆದು ಹೈಡ್ರಾಮವನ್ನೇ ಸೃಷ್ಟಿಸಿದ್ದರು.