ಬೆಂಗಳೂರು: ಚೀನಾದಲ್ಲಿ ಕಾಣಿಸಿಕೊಂಡಿರುವಂತ ಹೆಚ್ ಎಂ ಪಿ ವಿ ವೈರಸ್ ಕರ್ನಾಟಕದಲ್ಲೂ ಕಾಣಿಸಿಕೊಂಡಿದೆ. ಸೋಂಕಿತ ಮಗು ನಾರ್ಮಲ್ ಆಗಿದೆ. ಹೆಚ್ ಎಂ ಪಿ ವಿ ವೈರಸ್ ಜೀವಕ್ಕೆ ಅಪಾಯವಿಲ್ಲ. ಯಾರೂ ಆತಂಕ ಪಡಬೇಡಿ ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟ ಪಡಿಸಿದ್ದಾರೆ.
ಇಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕರ್ನಾಟಕದಲ್ಲಿ ಹೆಚ್ ಎಂ ಪಿ ಎಸ್ ವೈರಸ್ ನಿಯಂತ್ರಣ ಸಂಬಂಧ ಮಹತ್ವದ ಸಭೆ ನಡೆಸಿದರು. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಕರ್ನಾಟಕದಲ್ಲಿ 2 ಹೆಚ್ ಎಂ ಪಿಎಸ್ ಕೇಸ್ ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಮಗುವೊಂದಕ್ಕೂ ಕಾಣಿಸಿಕೊಂಡಿದ್ದು, ನಾರ್ಮಲ್ ಇದೆ ಎಂದರು.
ಕೊರೋನಾ ವೈರಸ್ ಅಷ್ಟು ಹೆಚ್ ಎಂ ಪಿ ವಿ ವೈರಸ್ ಭಯಾನಕವಲ್ಲ. ಯಾರೂ ಆತಂಕ ಪಡಬೇಡಿ. ಇದು ಮಾರಣಾಂತಿಕವೂ ಅಲ್ಲ. ಮಾಸ್ಕ್ ಬಳಕೆಯ ಅವಶ್ಯಕತೆಯಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಮನವಿ ಮಾಡಿದರು.
BIG UPDATE : ಕರ್ನಾಟಕದಲ್ಲಿ 2 ‘HMPV’ ಸೋಂಕು ಧೃಡ : ‘ICMR’ ಸ್ಪಷ್ಟನೆ | HMPV VIRUS
‘HMPV ವೈರಸ್’ ಎಂದರೇನು? ಅದರ ಲಕ್ಷಣಗಳು ಯಾವುವು? ಇಲ್ಲಿದೆ ಮಾಹಿತಿ | HMPV virus