ನವದೆಹಲಿ : ನವೆಂಬರ್, ಡಿಸೆಂಬರ್, ಜನವರಿ ಯಾವ ಕ್ರಾಂತಿಯು ಆಗಲ್ಲ. ಆದರೆ 2028ಕ್ಕೆ ಕ್ರಾಂತಿ ಹಾಗೆ ಆಗುತ್ತೆ. 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದೇ ಕ್ರಾಂತಿ ಅಧಿಕಾರಕ್ಕೆ ವಾಪಸ್ ಬರುವ ಮೂಲಕ ಕ್ರಾಂತಿ ಆಗಲಿದೆ ಮುಂದಿನ ಬಾರಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಸಂಪುಟ ಪುನಾರಚನೆಯ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಯಾವಾಗ ಏನ್ ಬೇಕು ಹೈಕಮಾಂಡ್ ಮಾಡುತ್ತಾರೆ. ಎಂದು ನವದೆಹಲಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 2028ಕ್ಕೆ ಕ್ರಾಂತಿ ಆಗಲಿದೆ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ವಾಪಸ್ ಬರುವ ಮೂಲಕ ಕ್ರಾಂತಿ ಆಗಲಿದೆ 2025-26 ಕ್ಕೆ ಯಾವುದೇ ಕ್ರಾಂತಿ ಆಗಲ್ಲ ಮುಂದಿನ ಬಾರಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಆಕಾಂಕ್ಷಿಗಳಿಗೆ ಏನು ಹೇಳಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರ ಎನ್ನುವ ವಿಚಾರವಾಗಿ ನಾಯಕತ್ವ ಬದಲಾವಣೆಯ ಬಗ್ಗೆ ಸಿಎಂ ಹೇಳಿದ್ರಾ ಅಥವಾ ನಾನು ಹೇಳಿದ್ನ? ಪಕ್ಷ ಹೇಗೆ ಹೇಳುತ್ತೋ ಹಾಗೆ ಕೇಳಿಕೊಂಡು ಹೋಗುತ್ತೇನೆ. ಐದು ವರ್ಷ ಹತ್ತು ವರ್ಷ ಹದಿನೈದು ವರ್ಷ ಸಿಎಂ ಆಗಬೇಕು ಎಷ್ಟು ವರ್ಷ ಸಿಎಂ ಆಗಿರಬೇಕು ಎಂದು ಹೈಕಮಾಂಡ್ ಹೇಳುತ್ತದೆ. ನಮಗೆ ಹೇಳಿದ ಕೆಲಸವನ್ನು ನಾವು ಮಾಡ್ಕೊಂಡು ಹೋಗಬೇಕು. ದೆಹಲಿಯಲ್ಲಿ ಯಾರನ್ನು ಭೇಟಿ ಮಾಡಲ್ಲ ಪಕ್ಷ ಸಂಘಟನೆಯ ಬಗ್ಗೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ ಪಕ್ಷದ ಚೌಕಟ್ಟು ಬಿಟ್ಟು ನಾನು ಎಲ್ಲಿಯೂ ಹೋಗಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದರು.








