ದಕ್ಷಿಣಕನ್ನಡ : ಬಿಜೆಪಿ, ಆರ್‌ಎಸ್‌ಎಸ್‌ನಂತಹ ಕಿಡ್ನ್ಯಾಪಿಂಗ್ ಟೀಂ ಬೇರೊಂದಿಲ್ಲ. ಭಗತ್ ಸಿಂಗ್‌ನನ್ನು ಕಿಡ್ನ್ಯಾಪ್ ಮಾಡಿದರು. ಪಟೇಲ್‌ರನ್ನು ಕಿಡ್ನ್ಯಾಪ್ ಮಾಡಿ ಮೂರ್ತಿ ಮಾಡಿ ನಿಲ್ಲಿಸಿದ್ದಾರೆ. ಈಗ ಕೋಟಿ ಚೆನ್ನಯರನ್ನು ಕಿಡ್ನಾಪ್ ಮಾಡಲು ಟ್ರೈ ಮಾಡಿದ್ದಾರೆ. ಆದರೆ ಅದಕ್ಕೆ ಸರಿಯಾದ ಉತ್ತರವನ್ನು ಸಮಾವೇಶದ ಸಂದರ್ಭ ನೀಡಲಾಗಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
‘ಕಾಂಗ್ರೆಸ್ ಕಾರ್ಯಕರ್ತ’ರಿಗೆ ಗುಡ್ ನ್ಯೂಸ್: 40 ‘ನಿಗಮ-ಮಂಡಳಿ ಅಧ್ಯಕ್ಷ’ರ ಪಟ್ಟಿಗೆ ‘ಸಿಎಂ ಸಿದ್ಧರಾಮಯ್ಯ’ ಅನುಮೋದನೆ
ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದ ತೊಕ್ಕೊಟ್ಟು ಕಲ್ಲಾಪು ಯುನಿಟಿ ಸಭಾಂಗಣದ ಬಳಿ ಡಿವೈಎಫ್ ನೇತೃತ್ವದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ೧೨ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿ ಪ್ರಧಾನಿ ವಿರುದ್ಧ ತೀವ್ರ ಕಿಡಿಕಾರಿದರು. ಶ್ರದ್ಧೆಯಿಲ್ಲದ ಭಕ್ತಿಯಿಂದ ಎಲ್ಲ ಧರ್ಮಗಳಲ್ಲೂ ಅಂಧ ಭಕ್ತರಿದ್ದಾರೆ. ಮುಸ್ಲಿಂ, ಕ್ರೈಸ್ತ, ಹಿಂದೂ ಧರ್ಮಗಳಲ್ಲೂ ಈ ರೀತಿಯ ಭಕ್ತರಿರುವುದರಿಂದ ದೇಶದಲ್ಲಿ ಸಮಸ್ಯೆಯಿದೆ ಎಂದು ತಿಳಿಸಿದರು.
ಅಲಹಾಬಾದ್ ಸೇರಿ ಇತರ ಕಡೆಗಳಿಗೆ ರೈಲ್ವೇ ಸಂಚಾರ ಆರಂಭಿಸಿದರೂ ಒಂದು ರೈಲು ಕೂಡಾ ಮಣಿಪುರಕ್ಕೆ ತೆರಳದೇ ಇರುವುನ್ನು ಟ್ವೀಟ್‌ನಲ್ಲಿ ಪ್ರಶ್ನಿಸಿದರೆ, ಅದನ್ನೇ ಡಿಲೀಟ್ ಮಾಡುತ್ತಾರೆ.ನನ್ನದು ಯಾವ ಪಕ್ಷವೂ ಅಲ್ಲ, ಜನರ ಪಕ್ಷ. ಎಲ್ಲ ಧರ್ಮ, ಭಾಷೆಯ ಸಹೃದಯಿಗಳಿಂದ ನಾನು ಬದುಕನ್ನು ಕಟ್ಟಿಕೊಂಡಿದ್ದೇನೆ. ಅದಕ್ಕಾಗಿ ಜನರಿಗೆ ಸಮಸ್ಯೆಗಳು ಬಂದಾಗ ಅವರ ಪರ ನಿಲ್ಲಬೇಕು ಎಂಬುದಷ್ಟೇ ಆಶಯ ಎಂದರು.
ದೇಶದ್ರೋಹಿಗಳನ್ನು ರಕ್ಷಿಸುವುದು ಕಾಂಗ್ರೆಸ್‌ನ ಆರನೇ ‘ಗ್ಯಾರಂಟಿ’ : ಬಿವೈ ವಿಜಯೇಂದ್ರ
ದೇಶವನ್ನು ಆಳುವಾತ ೨೦೧೯ರಲ್ಲಿ ಗುಹೆ ಸೇರಿಕೊಂಡರು, ೨೦೨೪ರಲ್ಲಿ ನೀರಿನಡಿ ಹೋಗಿಬಿಟ್ಟರು, ಮುಂದಿನ ಚುನಾವಣೆ ನಂತರ ಚಂದಿರನ ಮೇಲೆ ನಿಂತು ಪೋಸ್ ಕೊಡುವುದಂತು ಸತ್ಯ. ವಂದೇ ಭಾರತ್ ರೈಲು ಉದ್ಘಾಟನಾ ಸಂದರ್ಭದಲ್ಲಿ ರೈಲ್ವೇ ಸ್ಟೇಷನ್ ಮಾಸ್ಟರ್ ಕೂಡಾ ಬಾವುಟಗಳನ್ನು ತೋರಿಸದಷ್ಟು ಈ ವ್ಯಕ್ತಿ ತೋರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.