ಹುಬ್ಬಳ್ಳಿ: ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಬಗ್ಗೆ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಭಾರತ್ ಜೋಡೋ ಯಾತ್ರೆ ಮಾಡುವ ಅಗತ್ಯವಿಲ್ಲ. ಇವತ್ತು ಭಾರತ್ ಜೋಡೋ ಆಗಬೇಕಿರುವುದು ಭಾರತದ ಒಳಗೆ ಅಲ್ಲ. ಯಾವ ಕಾಂಗ್ರೆಸ್ ಭಾರತದ ಭಾಗವನ್ನು ಬಿಟ್ಟು ಕೊಟ್ಟಿದ್ದಾರೋ ಆ ಜಾಗದಲ್ಲಿ ಭಾರತ್ ಜೋಡೋ ಆಗಬೇಕು ಎಂದರು.
BIGG NEWS: ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ 112 ರೈತರು ಆತ್ಮಹತ್ಯೆ ; ಬಿಜೆಪಿ ವಿರುದ್ಧ ದಿನೇಶ್ ಗುಂಡೂರಾವ್ ಆಕ್ರೋಶ
ನಗರದಲ್ಲಿ ಮಾತನಾಡಿದ ಅವರು, ರೈಲು ನಿಲ್ದಾಣದಲ್ಲಿ ವಿವಿಧ ಇಲಾಖೆಯಲ್ಲಿ ಉದ್ಯೋಗ ಪಡೆದವರಿಗೆ ಉದ್ಯೋಗಪತ್ರ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಪಾದಯಾತ್ರೆ, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಹಿಮಾಲಯದಲ್ಲಿ ಆಗಬೇಕು. ಭಾರತದ ಕೈ ಕಾಲು ಕತ್ತರಿಸೋ ಪ್ರಯತ್ನಪಟ್ಟಿದಾರೆ. ಆ ಜಾಗದಲ್ಲಿ ನೀವು ಭಾರತ್ ಜೋಡೋ ಮಾಡಿ ಎಂದರು.
BIGG NEWS: ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ 112 ರೈತರು ಆತ್ಮಹತ್ಯೆ ; ಬಿಜೆಪಿ ವಿರುದ್ಧ ದಿನೇಶ್ ಗುಂಡೂರಾವ್ ಆಕ್ರೋಶ
ಇನ್ನು ಕಾಂತಾರ ಸಿನಿಮಾ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ನಮ್ಮದೇ ಶೈಲಿಯಲ್ಲಿ ಭೂತಾರಾಧನೆ ಮಾಡುತ್ತೇವೆ. ನಾನು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಿಂದ ಬಂದವಳು. ಜೊತೆಗೆ ಕೇರಳದಲ್ಲೂ ಇದೇ ರೀತಿಯ ಆರಾಧನೆ ಇದೆ. ನಾವು ನಾಗಾರಾಧನೆಯನ್ನು ಮಾಡುತ್ತೇವೆ. ಯಾರೂ ಭೂತಾರಾಧನೆ ಬಗ್ಗೆ ಮಾತನಾಡಬಾರದು. ಅದು ನಾವು ಆರಾಧನೆ ಮಾಡೋ ಪದ್ಧತಿ. ಅದರಿಂದ ನಮಗೆ ನೆಮ್ಮದಿ ಸಿಕ್ಕಿದೆ. ನೀವು ನಂಬಿಲ್ಲ ಅಂದರೆ ಬಿಟ್ಟು ಬಿಡಿ. ಈ ದೇಶದಲ್ಲಿ ನಾಸ್ತಿಕನಿಗೂ ಜಾಗ ಇದೆ, ಆಸ್ತಿಕನಿಗೂ ಜಾಗ ಇದೆ ಎಂದರು.