Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಏರ್ ಇಂಡಿಯಾ ವಿಮಾನ ದುರಂತ: ತನಿಖೆ ಅಂತಿಮ ಹಂತದಲ್ಲಿದೆ:ಊಹಾಪೋಹಗಳಿಗೆ ಕಿವಿಗೊಡದಂತೆ ಸಾರ್ವಜನಿಕರಲ್ಲಿ AAIB ಮನವಿ!

​ವಿಶ್ವಸಂಸ್ಥೆಯ ಆಘಾತಕಾರಿ ವರದಿ: 2030 ರ ವೇಳೆಗೆ ಬರೋಬ್ಬರಿ 130 ಕೋಟಿ ಜನರ ಕುಡಿಯುವ ನೀರಿಗೆ ಕಂಟಕ ತರಲಿದೆ ‘AI’ ತಂತ್ರಜ್ಞಾನ!

​ಪ್ರಯಾಣಿಕರೇ ಎಚ್ಚರ! ಹೋಟೆಲ್ ರೂಂಗಳಲ್ಲಿ ಅಡಗಿರುವ ‘ಹಿಡನ್ ಕ್ಯಾಮೆರಾ’ ಪತ್ತೆಹಚ್ಚುವುದು ಹೇಗೆ? ನಿಮ್ಮ ಪ್ರೈವೆಸಿ ರಕ್ಷಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಗತ್ತಿನಲ್ಲಿ ಸಹನೆಗಿಂತ ದೊಡ್ಡ ಅಸ್ತ್ರ ಇಲ್ಲ : ರಾಮಚಂದ್ರಾಪುರ ಶ್ರೀ
KARNATAKA

ಜಗತ್ತಿನಲ್ಲಿ ಸಹನೆಗಿಂತ ದೊಡ್ಡ ಅಸ್ತ್ರ ಇಲ್ಲ : ರಾಮಚಂದ್ರಾಪುರ ಶ್ರೀ

By ಅವಿನಾಶ್‌ ಆರ್‌ ಭೀಮಸಂದ್ರ

ಶಿವಮೊಗ್ಗ: ಕರ್ಮದಿಂದ ಅಲ್ಲ ತ್ಯಾಗದಿಂದ ಮಾತ್ರ ಶ್ರೇಷ್ಟತೆ ಪಡೆಯುವುದಕ್ಕೆ ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಸಾಗರದ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದಲ್ಲಿ ಏರ್ಪಡಿಸಿರುವ ನವರಾತ್ರ ಸಮಸ್ಯಾದ ಎರಡನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು.

ನಮ್ಮಲ್ಲಿ ಸ್ವಾರ್ಥ ಇಲ್ಲದೆ, ನಮ್ಮಲ್ಲಿರುವ ಸಮಸ್ತವನ್ನು ಸಮರ್ಪಿಸುವ ಮನೋಭಾವ ಇದ್ದಾಗ ದೇವರ ಒಲುಮೆ ಸಾಧ್ಯ. ಅಂತಹ ಒಲುಮೆ ಪಡೆಯಬೇಕಾದರೆ ನಮ್ಮಲ್ಲಿರುವ ನಾನು ನನ್ನದು ಎನ್ನುವ ಮೋಹ ತ್ಯಜಿಸಬೇಕು. ಅದೇ ತ್ಯಾಗ ಎಂದ ಅವರು, ನಿತ್ಯ ಬೇರೆಬೇರೆ ರೀತಿಯ ವಸ್ತು ವಿಷಯವನ್ನು ಬಯಸುವುದು ಮನುಷ್ಯನ ಕ್ರಿಯೆಯಾದರೆ, ನಾನಾ ಅವತಾರದಲ್ಲಿ ನಮಗೆ ದರ್ಶನದ ಭಾಗ್ಯ ನೀಡುವುದು ಭಗವಂತನ ಸ್ವಭಾವ. ಅಂತಯೇ ಭಗವಂತನಲ್ಲಿ ನಾವು ಅಪೇಕ್ಷೆಗಳ ಪಟ್ಟಿಯನ್ನು ಇಟ್ಟು ಕೇಳುತ್ತೇವೆ ಆದರೆ ನಿಜವಾಗಿ ನಮಗೇನು ಬೇಕು ಎಂದು ಭಗವಂತನೇ ಅರಿತಿರುವಾಗ ಕೇಳುವ ಅಗತ್ಯ ಇರುವುದೇ ಇಲ್ಲ. ಹಾಗಾಗಿಯೇ ದೇವಿ ಅವತಾರವಾಗುವಾಗ ದೇವೇಂದ್ರ ತಾಯಿಗೆ ಶರಣಾಗಿ ಎಲ್ಲವೂ ತಿಳಿದಿರುವ ನೀನು ರಕ್ಷಿಸಬೇಕು ಎಂದು ಯಾಚಿಸಿದ. ಅದೇ ರೀತಿ ನಮ್ಮ ಬದುಕಿನಲ್ಲಿಯೂ ಎಲ್ಲ ತಿಳಿದಿರುವ ತಾಯಿಯಲ್ಲಿ ಮೊರೆ ಇಡಬೇಕು ಅಷ್ಟೆ ಬಯಕೆಗಳನ್ನು ಕೇಳುವುದು ತರವಲ್ಲ ಎಂದರು.

ಸಮಾಜ ಸಂಭ್ರಮ : ಮೋಗವೀರ, ಗಂಗಾಮತಸ್ಥ, ಬಂಟ ಯಾನೆ ನಾಡವ, ರಾಮಕ್ಷತ್ರೀಯ ಸಮಾಜಕ್ಕೆ ಸಮಿತಿಯವತಿಯಿಂದ ಸಮಾಜ ಸಂಭ್ರಮದ ಅಂಗವಾಗಿ ಗೌರವ ನೀಡಲಾಯಿತು. ಕ್ರಮವಾಗಿ ಆಯಾ ಸಮಾಜದ ಅಧ್ಯಕ್ಷರಾದ ಸತೀಶ್ ಮೊಗವೀರ, ಶಿವಾನಂದ,ಸುಧೀರ್ ಶೆಟ್ಟಿ, ಗಣೇಶ್ ಗೌರವ ಸ್ವೀಕರಿಸಿದರು. ಶ್ರೀಕ್ಷೇತ್ರ ವರದಹಳ್ಳಿಯ ಅಧ್ಯಕ್ಷರಾದ ಎಂ.ಜಿ. ಕೃಷ್ಣಮೂರ್ತಿಯವರು ಶ್ರೀಶ್ರೀಧರ ಸೇವಾ ಮಂಡಳಿಗೆ ಕೊಡ ಮಾಡಿದ ಗೌರವವನ್ನು ಸ್ವೀಕರಿಸಿದರು. ಹೊಸನಗರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಮಾ ಸುಬ್ರಮಣ್ಯ ಮತ್ತಿತರರು ಆಶೀರ್ವಾದ ಪಡೆದರು.

ಇದಕ್ಕೂ ಮುನ್ನ ಬೆಳಗ್ಗೆ ಮಹಾಕಾಳಿ ಹವನ, ಚಂಡೀಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ , ಭಜನೆ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ನೆರವೇರಿತು.

There is no greater weapon in the world than tolerance: Ramachandrapura Sri ಜಗತ್ತಿನಲ್ಲಿ ಸಹನೆಗಿಂತ ದೊಡ್ಡ ಅಸ್ತ್ರ ಇಲ್ಲ : ರಾಮಚಂದ್ರಾಪುರ ಶ್ರೀ
Share. Facebook Twitter LinkedIn WhatsApp Email

Related Posts

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿ.ಕೆ ಶಿವಕುಮಾರ್; ಕರ್ನಾಟಕದ ಪೊಲೀಸ್ ಸಾಮರ್ಥ್ಯ ಸುಧಾರಣೆ ನೆರವಿಗೆ ಮನವಿ

3 Mins Read

ಮ್ಯಾಗಿ, ಕೆಎಫ್‌ಸಿ ಉತ್ಪನ್ನಗಳಲ್ಲಿ ಗುಣಮಟ್ಟದ ಕೊರತೆ ಆರೋಪ: ನೆಸ್ಲೆ ಇಂಡಿಯಾ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ FSSAI ನೋಟಿಸ್

3 Mins Read

ಇಂದಿನಿಂದಲೇ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಆರಂಭ: KSRTC ಮಾಹಿತಿ

2 Mins Read
Recent News

​ಏರ್ ಇಂಡಿಯಾ ವಿಮಾನ ದುರಂತ: ತನಿಖೆ ಅಂತಿಮ ಹಂತದಲ್ಲಿದೆ:ಊಹಾಪೋಹಗಳಿಗೆ ಕಿವಿಗೊಡದಂತೆ ಸಾರ್ವಜನಿಕರಲ್ಲಿ AAIB ಮನವಿ!

​ವಿಶ್ವಸಂಸ್ಥೆಯ ಆಘಾತಕಾರಿ ವರದಿ: 2030 ರ ವೇಳೆಗೆ ಬರೋಬ್ಬರಿ 130 ಕೋಟಿ ಜನರ ಕುಡಿಯುವ ನೀರಿಗೆ ಕಂಟಕ ತರಲಿದೆ ‘AI’ ತಂತ್ರಜ್ಞಾನ!

​ಪ್ರಯಾಣಿಕರೇ ಎಚ್ಚರ! ಹೋಟೆಲ್ ರೂಂಗಳಲ್ಲಿ ಅಡಗಿರುವ ‘ಹಿಡನ್ ಕ್ಯಾಮೆರಾ’ ಪತ್ತೆಹಚ್ಚುವುದು ಹೇಗೆ? ನಿಮ್ಮ ಪ್ರೈವೆಸಿ ರಕ್ಷಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ವಾಹನ ಅಪಘಾತ ಪರಿಹಾರ ವಿಲೇವಾರಿಗೆ ವಿಪರೀತ ವಿಳಂಬ: ಸುಪ್ರೀಂ ಕೋರ್ಟ್ ಕಳವಳ, ಶೀಘ್ರ ಇತ್ಯರ್ಥಕ್ಕೆ ಹೊಸ ಮಾರ್ಗಸೂಚಿ ಪ್ರಕಟ

State News
KARNATAKA

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿ.ಕೆ ಶಿವಕುಮಾರ್; ಕರ್ನಾಟಕದ ಪೊಲೀಸ್ ಸಾಮರ್ಥ್ಯ ಸುಧಾರಣೆ ನೆರವಿಗೆ ಮನವಿ

By ವಸಂತ ಬಿ ಈಶ್ವರಗೆರೆ KARNATAKA 3 Mins Read

ನವದೆಹಲಿ : ಎರಡು ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ (IRBs) ಸೃಷ್ಟಿ, ಪೊಲೀಸ್ ಇಲಾಖೆ ಚಟುವಟಿಕೆಗಳಿಗೆ ಸಿಎಸ್ಆರ್ ನಿಧಿ ಬಳಕೆ,…

ಮ್ಯಾಗಿ, ಕೆಎಫ್‌ಸಿ ಉತ್ಪನ್ನಗಳಲ್ಲಿ ಗುಣಮಟ್ಟದ ಕೊರತೆ ಆರೋಪ: ನೆಸ್ಲೆ ಇಂಡಿಯಾ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ FSSAI ನೋಟಿಸ್

ಇಂದಿನಿಂದಲೇ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಆರಂಭ: KSRTC ಮಾಹಿತಿ

BIG NEWS: ರಾಜ್ಯದ ಗ್ರಾಮ ಪಂಚಾಯ್ತಿಯ ಎಲ್ಲ ಸರ್ಕಾರಿ ಆಸ್ತಿ ‘ಜಿಯೋಟ್ಯಾಗ್’ಗೆ ಸಚಿವ ಈಶ್ವರ ಖಂಡ್ರೆ ಸೂಚನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.