ವಿಜಯಪುರ : ರಾಜ್ಯದಲ್ಲಿ ಯಾವಾಗ ಸಿಎಂ ಸಿದ್ದರಾಮಯ್ಯ ಕೊರಳಿಗೆ ಮುಡಾ ಹಗರಣ ಸಿಲುಕಿತೋ, ಆಗ ರಾಜ್ಯದ ಕಾಂಗ್ರೆಸ್ ಪಕ್ಷದ ಹಿರಿಯ ಮತ್ತು ಕಿರಿಯ ನಾಯಕರಿಗೆ ಸಿಎಂ ಕುರ್ಚಿಯ ಮೇಲೆ ಕಣ್ಣು ಬಿದ್ದಿದೆ. ಅಲ್ಲದೆ ಕಾಂಗ್ರೆಸ್ ಸಚಿವರು ದಿನಕ್ಕೊಬ್ಬರು ನಾನು ಸಿಎಂ ಆಗಬಹುದು ಎಂಬ ಹೇಳಿಕೆ ನೀಡುತ್ತಿದ್ದಾರೆ. ಈ ಕುರಿತು ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರು ಕೂಡ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಎಂಬ ಜಿ ಪರಮೇಶ್ವರ ಟೀಂ ಕೂಡ ಒಂದು ಇದೆ ಎಂದು ತಿಳಿಸಿದರು.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಫೈಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಎಂಬಿ ಪಾಟೀಲ್ ಅಷ್ಟೇ ಯಾಕೆ ಎಲ್ಲರೂ ಸಿಎಂ ಆಗಬೇಕು ಎನ್ನುತ್ತಾರೆ. ಅವರ ಒಗ್ಗಟ್ಟು ಹೇಗಿದೆ ಎಂದು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ಸಿಎಂ ಸ್ಥಾನಕ್ಕೆ ಶಿವಾನಂದ ಪಾಟೀಲ್ ಎಂಬಿ ಪಾಟೀಲ್ ಕೋಟಿ ವಿಚಾರವಾಗಿ ಅದೆಲ್ಲಾ ನಡೆಯೋದೇ ಎಲ್ಲರೂ ಸಿಎಂ ಆಗಬೇಕೆಂದು ಹೇಳುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕೆಂದು ಪರಮೇಶ್ವರ್ ತಂಡ ಇದೆ. ಗೃಹ ಸಚಿವ ಜಿ ಪರಮೇಶ್ವರ್ ಪರ ಕೂಡ ಒಂದು ತಂಡ ಇದೆ ಎಂದು ಅವರು ಸ್ಫೋಟಕವದಂತ ಹೇಳಿಕೆಯನ್ನು ನೀಡಿದರು.
ಸಿಎಂ ಸ್ಥಾನಕ್ಕೆ ಡಿಕೆ ಹೆಸರಿದೆ ಆದರೆ ಅವರನ್ನು ಮೂಲೆಗೆ ಕೂರಿಸಿದ್ದಾರೆ. ಡಿಕೆ ಶಿವಕುಮಾರ್ ಹೆಸರನ್ನು ಯಾರು ಪ್ರಸ್ತಾಪಿಸುತ್ತಿಲ್ಲ.ಇತ್ತ ಇನ್ನೊಂದು ಕಡೆಗೆ ಹಿಂದುಳಿದ ವರ್ಗದ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎನ್ನುತ್ತಾರೆ ಎಂದು ವಿಜಯಪುರದಲ್ಲಿ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೇಳಿಕೆ ನೀಡಿದರು.