ಕೆಎನ್ ಎನ್ ನ್ಯೂಸ್ ಡೆಸ್ಕ್ : ತೆಂಗಿನಕಾಯಿ ಯಾರು ಮನೆಯಿಲ್ಲ ಹೇಳಿ, ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಅದರಲ್ಲೂ ತೆಂಗಿನ ಎಣ್ಣೆ ಭಾರಿ ಉಪಯುಕ್ತತೆಯನ್ನು ಹೊಂದಿದೆ. ತೆಂಗಿನ ಎಣ್ಣೆಯನ್ನು ಕೂದಲಿಗೆ ಲೇಪಿಸಿದ್ರೆ, ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
BIGG NEWS: ಮಲೆನಾಡಿನಲ್ಲಿ ಭಾರಿ ಮಳೆ; ರಾಗಿಗುಡ್ಡದ ಮನೆಯ ಗೋಡೆ ಕುಸಿತ
ಶುದ್ಧ ತೆಂಗಿನೆಣ್ಣೆಯನ್ನು ಕೂದಲಿಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ ಇದನ್ನು ಹೊರತುಪಡಿಸಿ ತೆಂಗಿನ ಎಣ್ಣೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದರೆ ನೀವು ಖಂಡಿತ ಆಶ್ಚರ್ಯಪಡುತ್ತೀರಿ. ತಲೆಗೆ ಮಾತ್ರವಲ್ಲದೆ ತೆಂಗಿನ ಎಣ್ಣೆಯನ್ನು ಇತರ ಸಮಸ್ಯೆಗಳಿಗೂ ಬಳಸಬಹುದು ಎನ್ನುತ್ತಾರೆ ತಜ್ಞರು.
* ಮಕ್ಕಳಿನ ಚರ್ಮಕ್ಕೆ ಉತ್ತಮ ಮದ್ದು: ತೆಂಗಿನ ಎಣ್ಣೆಯು ಶಿಶುಗಳಿಗೆ ಉತ್ತಮವಾದ ಮಾಯಿಶ್ಚರೈಸರ್ ಆಗಿದೆ. ಇದರಲ್ಲಿ ಯಾವುದೇ ರಾಸಾಯನಿಕಗಳು ಇಲ್ಲವಾದ್ದರಿಂದ ಮಕ್ಕಳಿಗೆ ಬಳಸಲು ಭಯಪಡುವ ಅಗತ್ಯವಿಲ್ಲ. ಅದಕ್ಕಾಗಿಯೇ ಮಕ್ಕಳಿಗೆ ಸ್ನಾನ ಮಾಡುವ ಮೊದಲು ದೇಹವನ್ನು ಮಸಾಜ್ ಮಾಡಲು ತೆಂಗಿನ ಎಣ್ಣೆಯನ್ನು ಬಳಸಲಾಗುತ್ತದೆ.
BIGG NEWS: ಮಲೆನಾಡಿನಲ್ಲಿ ಭಾರಿ ಮಳೆ; ರಾಗಿಗುಡ್ಡದ ಮನೆಯ ಗೋಡೆ ಕುಸಿತ
*ಒಡೆದ ಹಿಮ್ಮಡಿಗಳಿಗೆ ಬಳಸಿ: ಹಿಮ್ಮಡಿ ಒಡೆಯುವುದು ಬಹುತೇಕರ ಸಮಸ್ಯೆಯಾಗಿದೆ. ಅದನ್ನು ನಿರ್ಲಕ್ಷಿಸಿದರೆ ನೋವಿಗೆ ಕೂಡಾ ಕಾರಣವಾಗಬಹುದು. ನಿಮ್ಮ ಹಿಮ್ಮಡಿಗಳ ಸುತ್ತಲಿನ ಚರ್ಮವು ಶುಷ್ಕ ಮತ್ತು ಬಿಗಿಯಾದಾಗ ಪಾದಗಳು ಬಿರುಕು ಬಿಡಬಹುದು. ಆದರೆ ಈ ಸಮಸ್ಯೆಯನ್ನು ಕಡಿಮೆ ಮಾಡಲು ತೆಂಗಿನ ಎಣ್ಣೆಯನ್ನು ಬಳಸಬಹುದು.
*ತುಟಿಗಳಿಗೆ ಪ್ರಯೋಜನಕಾರಿ: ತೆಂಗಿನ ಎಣ್ಣೆಯು ತುಂಬಾ ಹೈಡ್ರೇಟ್ ಗುಣ ಹೊಂದಿರುವ ಕಾರಣ, ಇದು ನಿಮ್ಮ ತುಟಿಗಳನ್ನು ಕಠಿಣ ವಾತಾವರಣದಿಂದ ರಕ್ಷಿಸುತ್ತದೆ.
BIGG NEWS: ಮಲೆನಾಡಿನಲ್ಲಿ ಭಾರಿ ಮಳೆ; ರಾಗಿಗುಡ್ಡದ ಮನೆಯ ಗೋಡೆ ಕುಸಿತ
*ಮೇಕಪ್ ತೆಗೆಯಲು: ತೆಂಗಿನ ಎಣ್ಣೆ ಅತ್ಯುತ್ತಮ ಮೇಕಪ್ ರಿಮೂವರ್ ಕೂಡಾ ಆಗಿದೆ. ಮೇಕಪ್ ತೆಗೆಯಲು ಇತರ ವಸ್ತುಗಳಿಗಿಂತ ತೆಂಗಿನ ಎಣ್ಣೆ ಬೆಸ್ಟ್ ಆಗಿದೆ. ಕಾಟನ್ ಬಾಲ್ಗೆ ತೆಂಗಿನ ಎಣ್ಣೆ ಹಚ್ಚಿ ಮೇಕಪ್ ತೆಗೆಯಬಹುದು. ಇದು ನಿಮ್ಮ ಮೇಕಪನ್ನು ಬಹಳ ಸುಲಭವಾಗಿ ತೆಗೆದುಹಾಕುತ್ತದೆ.