ಬೆಂಗಳೂರು : ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ಹೇಳಿ ಐಶ್ವರ್ಯಗೌಡ ವಂಚನೆ ಎಸಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಿವಾಸದ ಮೇಲೆ ದಾಳಿ ಮಾಡಿದ್ದರು. ಇದೀಗ ಈ ಒಂದು ದಾಳಿಯ ಕುರಿತು ವಿನಯ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದು, ED ದಾಳಿಯಿಂದ ನನಗೆ ಕಿರುಕುಳ ನೀಡಲಾಗುತ್ತಿದೆ. ಕಿರುಕುಳಕ್ಕೂ ಒಂದು ಮಿತಿ ಇರುತ್ತೆ, ನನಗೆ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಮನೆಯಲ್ಲಿ ವಿಡಿಯೋ ಅಧಿಕಾರಿಗಳು ನಿನ್ನೆಯಿಂದ ಶೋಧ ನಡೆಸಿದ್ದರು. ಇಂದು ಪರಿಶೀಲನೆ ಅಂತ್ಯಗೊಳಿಸಿ ತೆರಳಿದರು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ವಿನಯ್ ಕುಲಕರ್ಣಿ ನನ್ನ ಮನೆಯ ಮೇಲೆ ಇಡಿ ಅಧಿಕಾರಿಗಳ ದಾಳಿ ರಾಜಕೀಯ ಪ್ರೇರಿತವಾಗಿದೆ. ವಿಡಿಯೋ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ ಎಂದು ತಿಳಿಸಿದರು.
ಮನೆಯಲ್ಲಿ ದಾಖಲೆ ಪರಿಶೀಲನೆ ವೇಳೆ ಇಡೀ ಅಧಿಕಾರಿಗಳಿಗೆ ಏನು ಸಿಕ್ಕಿಲ್ಲ ಹೈಕೋರ್ಟ್ ನಲ್ಲಿ ನಾನು ಸಾಕ್ಷಿದಾರನಾಗಿದ್ದೇನೆ. ಕೆಲವು ಪ್ರಕರಣಗಳಿಗೆ ಅಡ್ಡಿಪಡಿಸಲು ನನ್ನ ವಿರುದ್ಧ ಷಡ್ಯಂತರ ನಡೆಸಿದ್ದಾರೆ. ಕಾಲಿಗೆ ಬಿದ್ದು ಇಡಿ ಅಧಿಕಾರಿಗಳ ಜೊತೆ ಹೋಗುವುದು ಬಾಕಿ ಇದೆ. ಕಳೆದ ಒಂದು ತಿಂಗಳಿಂದ ನನಗೆ ಕಿರುಕುಳ ನೀಡಲಾಗುತ್ತಿದೆ. ಶಾಸಕನಾಗಿ ನನ್ನ ಕ್ಷೇತ್ರಕ್ಕೆ ಹೋಗಲಾಗುತ್ತಿಲ್ಲ.
ಯಾರೇ ಆಗಲಿ ಜನರಿಗೆ ಮೋಸ ಮಾಡುವುದು ಒಳ್ಳೆಯ ಕೆಲಸವಲ್ಲ. ಐಶ್ವರ್ಯ ಗೌಡ ಖಾತೆಗೆ ಹಣ ವರ್ಗವಾಗಿದ್ದರೆ ಸಿಕ್ಕೇ ಸಿಗುತ್ತದೆ. ಪ್ರತಿಯೊಂದುಕ್ಕೂ ನಾನೇ ಟಾರ್ಗೆಟ್ ಆಗಿದ್ದೇನೆ. ಕಿರುಕುಳಕ್ಕೂ ಒಂದು ಮಿತಿ ಇರುತ್ತದೆ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಹೇಳಿಕೆ ನೀಡಿದರು.