ನವದೆಹಲಿ: ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ‘ರಾವಣ’ ಅಪಹಾಸ್ಯವನ್ನು ಉಲ್ಲೇಖಿಸಿ, ತಮ್ಮ ವಿರುದ್ಧ ಯಾರು ಅತ್ಯಂತ ನಿಂದನಾತ್ಮಕ ಪದಗಳನ್ನು ಬಳಸುತ್ತಾರೆ ಎಂಬ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಸ್ಪರ್ಧೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಅಹ್ಮದಾಬಾದ್ ನಗರದ ಬೆಹ್ರಾಂಪುರ ಪ್ರದೇಶದಲ್ಲಿ ಸೋಮವಾರ ರಾತ್ರಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಎಲ್ಲಾ ಚುನಾವಣೆಗಳಲ್ಲಿ “ತಮ್ಮ ಮುಖವನ್ನು ನೋಡಿ” ಮತ ಚಲಾಯಿಸುವಂತೆ ಪ್ರಧಾನಿ ಜನರನ್ನು ಕೇಳುತ್ತಾರೆ ಎಂದು ಹೇಳಿದರು. “ನೀನು ರಾವಣನಂತೆ ನೂರು ತಲೆಯವನೇ?” ಎಂದು ಕೇಳಿದ್ದರು.
ಈ ನಡುವೆ ಗುಜರಾತ್ನ ಪಂಚಮಹಲ್ ಜಿಲ್ಲೆಯ ಕಲೋಲ್ ಪಟ್ಟಣದಲ್ಲಿ ಗುರುವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, “ಮೋದಿಗಾಗಿ ಯಾರು ಹೆಚ್ಚು ನಿಂದನಾತ್ಮಕ ಪದಗಳನ್ನು ಬಳಸುತ್ತಾರೆ ಎಂಬುದರ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಸ್ಪರ್ಧೆ ಇದೆ” ಎಂದು ಹೇಳಿದರು. “ಭಗವಾನ್ ರಾಮನ ಅಸ್ತಿತ್ವವನ್ನು ಎಂದಿಗೂ ನಂಬದವರು ಈಗ ರಾಮಾಯಣದಿಂದ (ರಾಕ್ಷಸ ರಾಜ) ‘ರಾವಣ’ವನ್ನು ತಂದಿದ್ದಾರೆ ಅಂಥ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.