ಉಡುಪಿ: ರಾಜ್ಯದ 17750 ಸರ್ಕಾರಿ ಶಾಲೆಗಳ ಭೂಮಿಗೆ ಸಂಬಂದಿಸಿದಂತೆ ಯಾವುದೇ ಹಕ್ಕು ವಿತರಣೆಯಾಗಿಲ್ಲ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 17750 ಸರ್ಕಾರಿ ಶಾಲೆಗಳ ಭೂಮಿಗೆ ಸಂಬಂದಿಸಿದಂತೆ ಯಾವುದೇ ಹಕ್ಕು ವಿತರಣೆಯಾಗಿಲ್ಲ. ಹಕ್ಕುಪತ್ರ ವಿತರಣೆ ಆದಲ್ಲಿ ಮಾತ್ರ ಸರ್ಕಾರಿ ಶಾಲೆಗಳ ಜಮೀನು ಉಳಿಯಲಿದೆ ಎಂದು ಹೇಳಿದ್ದಾರೆ.
ಹಕ್ಕುಪತ್ರವಿಲ್ಲದ ಹಲವಾರು ಶಾಲೆಗಳ ಜಮೀನನ್ನು ಈಗಾಗಲೇ ಕಬ್ಬಾ ಮಾಡಿಕೊಳ್ಳಲಾಗಿದೆ. ಒಂದಷ್ಟು ಶಾಲೆಗಳೇ ಮುಚ್ಚುವ ಪರಿಸ್ಥಿತಿಯಿದ್ದು, ಹಾಗಾದಾಗ ಹಕ್ಕುಪತ್ರವಿಲ್ಲದಿದ್ದರೆ ಜಮೀನು ಪರಭಾರೆಯಾಗುವ ಅಪಾಯವಿದೆ ಇದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದ್ದಾರೆ.