ಬೆಂಗಳೂರು : ಸಂಪುಟದಿಂದ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರನ್ನು ಮಜಾಗೊಳಿಸಿದ l ವಿಚಾರವಾಗಿ ಇಂದು ಸದನದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
2013 ರಿಂದ 2018ರ ವರೆಗೆ ಇದ್ದ ಸಿದ್ದರಾಮಯ್ಯ ಇವಾಗ ಇಲ್ಲ ಹೀಗೆಂದು ನಿಮ್ಮ ಪಕ್ಷದ ಶಾಸಕರು ಹೇಳುತ್ತಿದ್ದಾರೆ ಎಂದು ಅಶೋಕ್ ಹೇಳಿದಾಗ, ನಾನು ಅಲ್ಲಪ್ಪ ನೀನು ವಿಪಕ್ಷ ನಾಯಕ ಆಗಿರೋದೇ ಸರಿ ಇಲ್ಲ ಹೀಗೆ ನಿಮ್ಮವರೇ ಹೇಳುತ್ತಿದ್ದಾರೆ ಎಂದು ಆರ್.ಅಶೋಕ್ ಗೆ ಸಿಎಂ ರಾಮಯ್ಯ ತಿರುಗೇಟು ನೀಡಿದರು. ಆ ರೀತಿ ಯಾರು ಹೇಳಿಲ್ಲ ಸರ್ ಎಂದು ಬಿಜೆಪಿ ಸದಸ್ಯರು ಇದೆ ವೇಳೆ ಸಿಎಂ ಸಿದ್ದರಾಮಯ್ಯಗೆ ಪ್ರತಿಕ್ರಿಯಿಸಿದರು.
ನಾವಲ್ಲ ಸರ್ ನೀವು ನಿನ್ನೆಯಿಂದ ಬೇಜಾರಾಗಿದ್ದೀರಿ ರಾಜಣ್ಣ ಅವರ ರಾಜೀನಾಮೆಯಿಂದ ನೀವು ಬೇಸರ ಆಗಿದ್ದೀರಿ ಎಂದು ಸತೀಶ್ ರೆಡ್ಡಿ ತಿಳಿಸಿದಾಗ, ನಾನು ಯಾವತ್ತೂ ಬೇಜಾರು ಆಗಿಲ್ಲ, ಆಗುವುದಿಲ್ಲ ನಾನು ಯಾವಾಗಲೂ ಸಮಚಿತ್ತದಿಂದ ಇರುತ್ತೇನೆ. ನಾವು ಹೇಳಿದ್ದು ನಿಮ್ಮ ಒಳ್ಳೆಯದಕ್ಕಾಗಿಯೇ ಎಂದು ಅಶೋಕ್ ಇದೆ ವೇಳೆ ತಿಳಿಸಿದರು.
ನಾನು ಕಲಿಯುವುದು ಇನ್ನೂ ಬಹಳ ಇದೆ ಈ ಸೀಟ್ನಲ್ಲಿ ನೀವು ಎರಡು ಬಾರಿ ಕುಳಿತಿದ್ದೀರಿ. ನಾನು ಇವಾಗ ಬಂದಿದ್ದೇನೆ ಇನ್ನು ಕಲಿಯುತ್ತಿದ್ದೇನೆ ಎಂದು ಅಶೋಕ್ ಇದೆ ವೇಳೆ ತಿಳಿಸಿದರು. ಬೃಹಸ್ಪತಿಗಳು ಯಾರು ಇಲ್ಲ ಸಾಯುವವರೆಗೂ ಕಲಿಯಬೇಕು ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ರಾಜಣ್ಣ ನಿಮ್ಮ ಬಲಗೈ ಬಂಟ ಅವರು ನಿಮ್ಮ ಮುಖವಾಣಿ ಅವರನ್ನು ತೆಗೆಯಿರಿ ಅಂತ ಹೇಳೋ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ಈಗ ಹಾಗೆ ಆಗಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.