ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಡುಗೆಮನೆಯಲ್ಲಿರುವ ಅನೇಕ ಪದಾರ್ಥಗಳು ಅನೇಕ ರೋಗಗಳಿಗೆ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ, ಪ್ರತಿಯೊಬ್ಬರ ಮನೆಯಲ್ಲಿರುವ ಬೇಳೆಕಾಳುಗಳು ಅನೇಕ ಆರೋಗ್ಯ ಸಮಸ್ಯೆಗಳನ್ನ ಮತ್ತು ದೀರ್ಘಕಾಲೀನ ರೋಗಗಳನ್ನ ಸಹ ಕಡಿಮೆ ಮಾಡಬಹುದು. ನೀವು ಬೀನ್ಸ್ʼನ್ನ ಸ್ವಲ್ಪ ನೆನೆಸಿ ಮೊಳಕೆಯೊಡೆದ ನಂತ್ರ ತಿಂದರೆ ಲಭ್ಯವಿರುವ ಎಲ್ಲಾ ಪೋಷಕಾಂಶಗಳು ಸಿಗುತ್ವೆ. ಆಯುರ್ವೇದ ವೈದ್ಯರು ಮಧುಮೇಹದಿಂದ ಬಳಲುತ್ತಿರುವವರಿಗೆ ಈ ಮೊಳಕೆ ಕಾಳುಗಳನ್ನ ಶಿಫಾರಸು ಮಾಡುತ್ತಾರೆ, ಇದು ಅವು ಎಷ್ಟು ಪ್ರಯೋಜನಕಾರಿ ಎಂದು ತೋರಿಸುತ್ತದೆ.
ಮಧುಮೇಹ ಹೊಂದಿರುವ ಜನರು ಇನ್ಸುಲಿನ್ ಮಟ್ಟವನ್ನ ಸಮತೋಲನಗೊಳಿಸಲು ನಿಯಮಿತವಾಗಿ ಮೊಳಕೆ ಕಾಳುಗಳನ್ನ ತಿನ್ನಬೋದು. ಮೊಳಕೆಯಲ್ಲಿರುವ ಪೋಷಕಾಂಶಗಳು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತವೆ. ಆದ್ದರಿಂದ, ಸಕ್ಕರೆ ರೋಗವು ಕಾಲಾನಂತರದಲ್ಲಿ ನಿಯಂತ್ರಣಕ್ಕೆ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ. ಇನ್ನು ಅಧಿಕ ತೂಕದಿಂದ ಬಳಲುತ್ತಿರುವ ಜನರಿಗೆ ಇದು ಪ್ರಯೋಜನಕಾರಿ ಎನ್ನುತ್ತಾರೆ.