ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಕಳ್ಳನೊಬ್ಬ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದು, ಈತನ ಹಿಸ್ಟರಿ ಕೇಳಿದ್ರೆ ನೀವು ಒಂದು ಕ್ಷಣ ಶಾಕ್ ಆಗ್ತೀರಿ.
ಹೌದು. ಶ್ರೀಮಂತರ ಮನೆ ಹುಡುಕಿ ಕನ್ನ ಹಾಕುವ ಕಳ್ಳ ಬಂದ ಹಣದಿಂದ ಐಶಾರಾಮಿ ಜೀವನ ನಡೆಸುತ್ತಾ ಉಳಿದ ಹಣದಿಂದ ದಾನ ಧರ್ಮ ನೀಡುತ್ತಾ ಬದುಕುತ್ತಿದ್ದ ವಿಚಿತ್ರ ಕಳ್ಳ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಬಂಧಿತ ಆರೋಪಿಯನ್ನು ಜಾನ್ ಮೆಲ್ಟಿನ್ ಎಂದು ಗುರುತಿಸಲಾಗಿದೆ. ಐಷಾರಾಮೀ ಜಿವನಕ್ಕಾಗಿ ಶ್ರೀಮಂತರ ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ಆರೋಪಿ ಬಂದ ಹಣದಿಂದ ತನ್ನ ಐಷಾರಾಮಿ ಜೀವನ ನಡೆಸಿ ಉಳಿದ ಹಣವನ್ನು ಚರ್ಚ್, ದೇವಾಲಯಗಳ ಹುಂಡಿಗೆ ಹಾಕುತ್ತಿದ್ದನು.
ಹಲವು ಬಾರಿ ಬಂಧನವಾದ ವ್ಯಕ್ತಿ ನಂತರ ಜಾಮೀನು ಮೇಲೆ ಹೊರಗೆ ಬರುತ್ತಿದ್ದನು. ಕೆಲವು ದಿನಗಳ ಕಾಲ ಯಾವ ಕಳ್ಳತನಕ್ಕೂ ಇಳಿಯದೇ ಇದ್ದ ವ್ಯಕ್ತಿ ಮತ್ತೆ ತನ್ನ ಚಾಳಿ ಮುಂದುವರೆಸಿ ಪೊಲೀಸರ ಅತಿಥಿಯಾಗಿದ್ದಾನೆ. ಈತನ ವಿರುದ್ಧ ಕೆಂಗೇರಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 50 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.