ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಪೊಲೀಸ್ ದೌರ್ಜನ್ಯದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರೇ ನನ್ನನ್ನು ಕೊಲೆ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಲವತ್ತು ತೋಡಿಕೊಂಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ನಂದೀಶ್ ಕೊಡಗು ಎಂಬುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
‘ನನ್ನ ಮೇಲೆ ಪೊಲೀಸರು ಸುಳ್ಳು ಕೇಸ್ ಹಾಕಿ ಅಮಾನುಷವಾಗಿ ದಂಡಿಸಿದ್ದಾರೆ. ನನ್ನ ಕೊಲೆ ಮಾಡಲು ಕೂಡ ಯತ್ನಿಸುತ್ತಿದ್ದಾರೆ, ನನ್ನ ಮೊಬೈಲ್ ಫೋನ್ ನ್ನು ಕೂಡ ಇಟ್ಟುಕೊಂಡಿದ್ದಾರೆ , ನನ್ನ ಸಾವಿಗೆ ಕೆಲವೇ ಕ್ಷಣಗಳಿದೆ’ ಎಂದು ಪೋಸ್ಟ್ ಮಾಡಿದ್ದಾರೆ. ನವೀನ್ ಎಂಬ ಸಿಬ್ಬಂದಿ ವಿರುದ್ಧ ನಂದೀಶ್ ಕೊಡಗು ಎಂಬುವವರು ಈ ಆರೋಪ ಮಾಡಿದ್ದು, ಪೋಸ್ಟ್ ವೈರಲ್ ಆಗುತ್ತಿದೆ. ನಂದೀಶ್ ಪೋಸ್ಟ್ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಪೊಲೀಸರೇ ಈತನನ್ನು ಸುಖಾ ಸುಮ್ಮನೆ ಟಾರ್ಚರ್ ಮಾಡಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಈ ಬಗ್ಗೆ ಪೊಲೀಸರು ಸರಿಯಾದ ತನಿಖೆ ಮಾಡಿದಾಗಲೇ ನಿಜಾಂಶ ಬಯಲಾಗಲಿದೆ.
ಹೊಯ್ಸಳ ಪೊಲೀಸರ ಸುಲಿಗೆ
ಬೆಂಗಳೂರು ನಗರದಲ್ಲಿ ಹೊಯ್ಸಳ ಪೊಲೀಸರ ವಿರುದ್ಧ ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.
ಈ ಬಗ್ಗೆ ಈಶಾನ್ಯ ವಿಭಾಗ ಪೊಲೀಸರು ಪ್ರತಿಕ್ರಿಯೆ ನೀಡಿ, ಸುಲಿಗೆ ಸಂಬಂಧ ಡಿಸೆಂಬರ್ 8ರಂದು ಸಂತ್ರಸ್ತರು ಟ್ವೀಟರ್ ಮೂಲಕ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. 1000 ಹಣವನ್ನು ಸಂತ್ರಸ್ಥರಿಂದ ಕ್ಯೂ ಆರ್ ಕೋಡ್ ಮೂಲಕ ಪಡೆದಿದ್ದಾರೆ. ಹೀಗಾಗಿ ಸಂಪಿಗೆ ಹಳ್ಳಿ ಠಾಣೆಯ ರಾಜೇಶ್ ಹೆಚ್ ಸಿ, ಪಿಸಿ ನಾಗೇಶ್ ಎಂಬವರನ್ನು ಅಮಾನತು ಮಾಡಿ ಘಟನೆಗೆ ಸಂಬಂದಿಸಿದಂತೆ ಇಲಾಖೆ ತನಿಖೆಗೆ ಆದೇಶಿಸಲಾಗಿದೆ.
ರಾತ್ರಿ ವೇಳೆ ಅನವಶ್ಯಕವಾಗಿ ತಿರುಗಾಡ್ತಿದ್ದೀರಿ ಎಂದು ದಂಡ ವಿಧಿಸುತ್ತಿರುವುದಾಗಿ ಹೇಳಿ ಹಣ ವಸೂಲಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾನ್ಯತಾ ಟೆಕ್ಪಾರ್ಕ್ ಬಳಿ ಕಾರ್ತಿಕ್ ಪೆತ್ರಿ ಮತ್ತು ಅವರ ಪತ್ನಿ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮಧ್ಯರಾತ್ರಿ ವಾಪಸ್ ಆಗುತ್ತಿದ್ದರು.
ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಸ್ಕೇಟಿಂಗ್ ಗ್ರಾಮೀಣ ಮಟ್ಟಕ್ಕೂ ವಿಸ್ತರಣೆ – ಸಿಎಂ ಬೊಮ್ಮಾಯಿ
ಪಕ್ಷ ಸೂಚಿಸಿದ್ರೇ ಸಿದ್ಧರಾಮಯ್ಯ ವಿರುದ್ಧ ಸ್ಪರ್ಧೆಗೆ ಸಿದ್ಧ – ಬಿ.ವೈ ವಿಜಯೇಂದ್ರ | Election 2023
ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಸ್ಕೇಟಿಂಗ್ ಗ್ರಾಮೀಣ ಮಟ್ಟಕ್ಕೂ ವಿಸ್ತರಣೆ – ಸಿಎಂ ಬೊಮ್ಮಾಯಿ