ಹರಿದ್ವಾರ: ಕೊತ್ವಾಲಿ ರಾಣಿಪುರ ಪ್ರದೇಶದ ಶಿವಲೋಕ ಕಾಲೋನಿಯ ಹೊರಭಾಗದಲ್ಲಿ ನಿನ್ನೆ ಸಂಜೆ ಗಂಡನನ್ನು ಪತ್ನಿಯೊಬ್ಬಳು ನಡುರಸ್ತೆಯಲ್ಲೇ ಚಪ್ಪಲಿಯಿಂದ ಥಳಿಸಿರುವ ಘಟನೆ ನಡೆದಿದೆ.
ತನ್ನ ಗಂಡ ನಪುಂಸಕನ ಜೊತೆ ಸ್ಕೂಟರ್ನಲ್ಲಿ ಹೋಗುತ್ತಿರುವುದನ್ನು ಕಂಡು ಪತ್ನಿ ರಸ್ತೆಯಲ್ಲಿ ಗಲಾಟೆ ಮಾಡಿದ್ದಾಳೆ. ಅಷ್ಟೇ ಅಲ್ಲದೇ, ಪತ್ನಿ ಚಪ್ಪಲಿ ತೆಗೆದು ಪತಿಗೆ ಥಳಿಸಿದ್ದಾಳೆ.
ಏನಿದು ಘಟನೆ?
ಸಿಕ್ಕಿರುವ ಮಾಹಿತಿ ಪ್ರಕಾರ, ಭಗತ್ ಸಿಂಗ್ ಚೌಕ್ನಿಂದ ಬಿಎಚ್ ಇಎಲ್ ಗೆ ಹೋಗುವ ರಸ್ತೆಯಲ್ಲಿ ಮಹಿಳೆಯೊಬ್ಬರು ಏಕಾಏಕಿ ವ್ಯಕ್ತಿಯೊಬ್ಬನ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಆ ವ್ಯಕ್ತಿಯೊಂದಿಗೆ ಸ್ಕೂಟರ್ನಲ್ಲಿ ನಪುಂಸಕನೂ ಕುಳಿತಿದ್ದ. ಸಾರ್ವಜನಿಕರು ಥಳಿಸುತ್ತಿರುವುದನ್ನು ಕಂಡು ಜನರು ಕೂಡ ಸ್ಥಳದಲ್ಲಿ ಜಮಾಯಿಸಿದರು. ವಿಚಾರಣೆ ನಡೆಸಿದಾಗ ಇಬ್ಬರೂ ಗಂಡ-ಹೆಂಡತಿ ಎಂಬುದು ಗೊತ್ತಾಯಿತು.
ಮಹಿಳೆ ಮತ್ತು ಆಕೆಯ ಪತಿ ಕಂಖಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಜಗಜಿತ್ಪುರ ನಿವಾಸಿಗಳು. ಇಬ್ಬರಿಗೂ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ಆದರೆ ಮದುವೆಯ ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.
ಆದ್ರೆ, ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ದೂರು ದಾಖಲಾದರೆ ಕ್ಮ ಕೈಗೊಳ್ಳಲಾಗುವುದು ಎಂದು ರಾಣಿಪುರ ಕೊತ್ವಾಲಿ ಉಸ್ತುವಾರಿ ಅಮರ್ ಚಂದ್ ಶರ್ಮಾ ಹೇಳಿದ್ದಾರೆ.
Good News : ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಆಗಸ್ಟ್ 6 ರಂದು ಶಿವಮೊಗ್ಗದಲ್ಲಿ `ಮಿನಿ ಉದ್ಯೋಗ ಮೇಳ’