ಜಾಗತಿಕ ರಂಗದಲ್ಲಿ ಭಾರತದ ಉದಯವು ಪರಿವರ್ತಕ ಮಾತ್ರವಲ್ಲದೆ ವಿಶ್ವದಾದ್ಯಂತ ವಿವಿಧ ನಾಯಕರು, ಅರ್ಥಶಾಸ್ತ್ರಜ್ಞರು ಮತ್ತು ಜಾಗತಿಕ ಸಂಸ್ಥೆಗಳಿಂದ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ. ಇದು ಒಂದು ದಶಕದ ನಿರಂತರ ಪ್ರಯತ್ನ, ಕಾರ್ಯತಂತ್ರದ ಯೋಜನೆ ಮತ್ತು ದೂರದೃಷ್ಟಿಯ ಪರಿಕಲ್ಪನೆ ಹೊಂದಿದ ನಾಯಕತ್ವದ ಪರಿಣಾಮವಾಗಿದೆ. ಪ್ರಧಾನಮಂತ್ರಿ ಮೋದಿಯವರ ದೂರದೃಷ್ಟಿಯ ನಾಯಕತ್ವದಿಂದ ಮಾರ್ಗದರ್ಶನ ಪಡೆದ ಭಾರತವು ಜಾಗತಿಕ ಶಕ್ತಿ ಕೇಂದ್ರವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 2024 ರಲ್ಲಿ, ಬೆಳವಣಿಗೆಯ “ಎಂಜಿನ್”, ತಾಂತ್ರಿಕ “ಆವಿಷ್ಕಾರಕ” ಮತ್ತು ಸುಸ್ಥಿರತೆಯ ನಾಯಕನೊಂದಿಗೆ ಭಾರತವು ಮುನ್ನುಗ್ಗುತ್ತಿದ್ದು, ಭಾರತದ ಪ್ರಮುಖ ಪಾತ್ರವನ್ನು ಇಡೀ ಜಗತ್ತು ಹೆಚ್ಚು ಹೆಚ್ಚು ಒಪ್ಪಿಕೊಳ್ಳುವುದನ್ನು ನಾವು ನೋಡಿದ್ದೇವೆ. ಜಾಗತಿಕ ತಜ್ಞರು, ಉದ್ಯಮ ನಾಯಕರು ಮತ್ತು ಸಂಸ್ಥೆಗಳು ನಿರಂತರವಾಗಿ ದೇಶದ ಸಾಧನೆಗಳನ್ನು ಪ್ರಶಂಸಿಸಿದ್ದಾರೆ ಹಾಗೂ ನಾನಾ ರೀತಿಯಲ್ಲಿ ಎತ್ತಿ ತೋರಿಸಿದ್ದಾರೆ.
ಈ ಯಶಸ್ಸು ಕೇವಲ 2024 ರಲ್ಲಿ ಮಾತ್ರ ಸ್ಪಷ್ಟವಾಗಿರುವುದಲ್ಲ, ಇತ್ತೀಚೆಗೆ ಮಾತ್ರ ಗೋಚರಿಸಿರುವುದಲ್ಲ, ಬದಲಾಗಿ, ಕಳೆದ ಕೆಲವು ವರ್ಷಗಳಲ್ಲಿನ ಜಾಗತಿಕ ಹೇಳಿಕೆಗಳಲ್ಲಿ ಸ್ಪಷ್ಟವಾಗಿ ಪ್ರತಿಧ್ವನಿಸಿದೆ. ಉದಾಹರಣೆಗೆ, 2021 ರಲ್ಲಿ, ಫಸ್ಟ್ ಸೋಲಾರ್ ನ ಸಿಇಒ ಮಾರ್ಕ್ ವಿಡ್ಮಾರ್, “ಹವಾಮಾನ ಬದಲಾವಣೆ ವ್ಯವಸ್ಥೆಯ ಪ್ರಕ್ರಿಯೆಯೊಂದಿಗೆ ಭಾರತ ಏನು ಇಂದು ಮಾಡುತ್ತಿದೆಯೋ ಅದನ್ನು ಪ್ರತಿ ದೇಶವೂ ಮಾಡಬೇಕು” ಎಂದು ಹೇಳಿದರು. 2017 ರಲ್ಲಿ ಜೆಪಿ ಮೋರ್ಗಾನ್ ಸಿಇಒ ಜೇಮೀ ಡಿಮನ್ ಅವರು “ಪ್ರಧಾನಮಂತ್ರಿ ಮೋದಿ ಯಾವಾಗಲೂ ತುಂಬಾ ಗ್ರಹಣ ಶಕ್ತಿ ಉಳ್ಳವರು. ಅವರು ಮುಕ್ತ ಮನಸ್ಸಿನವರು, ಅವರು ತುಂಬಾ ಸ್ಮಾರ್ಟ್” ಎಂದು ಹೇಳಿದರು. 2023 ರಲ್ಲಿ ಹಾಸನ ಅಲ್ಲಂ ಹೋಲ್ಡಿಂಗ್ಸ್ ಸಿಇಒ ಹಸನ್ ಅಲ್ಲಂ ಅವರು “ಪ್ರಧಾನಮಂತ್ರಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ಪ್ರಧಾನಮಂತ್ರಿ ಮೋದಿಯವರ ನಾಯಕತ್ವದಲ್ಲಿ ಭಾರತದ ಖಾಸಗಿ ವಲಯವು ವಿಶೇಷವಾಗಿ ಮೂಲಸೌಕರ್ಯ, ಎಂಜಿನಿಯರಿಂಗ್, ಉತ್ಪಾದನೆಯ ಪ್ರಪಂಚದಲ್ಲಿ ಮಹತ್ತರವಾಗಿ ಬೆಳೆದಿದೆ” ಎಂದು ಹೇಳಿದರು. ಜಾಗತಿಕವಾಗಿ ವಿವಿಧ ಕ್ಷೇತ್ರದ ತಜ್ಞರು ಮತ್ತು ಉದ್ಯಮದ ನಾಯಕರು ಭಾರತದ ತ್ವರಿತ ಪ್ರಗತಿ ಮತ್ತು ಪ್ರಧಾನಮಂತ್ರಿ ಮೋದಿಯವರ ನಾಯಕತ್ವವನ್ನು ಸತತವಾಗಿ ಹಲವಾರು ವಿಧಾನಗಳಲ್ಲಿ ಎತ್ತಿ ತೋರಿಸಿದ್ದಾರೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ.
ಒಟ್ಟಾರೆಯಾಗಿ, ಈ ಧ್ವನಿಗಳು ಜಾಗತಿಕ ಒಮ್ಮತವನ್ನು ಪ್ರತಿಬಿಂಬಿಸುತ್ತವೆ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತವು ತ್ವರಿತ ಪ್ರಗತಿಯನ್ನು ಸಾಧಿಸುತ್ತಿದೆ ಮಾತ್ರವಲ್ಲದೆ ಪ್ರಪಂಚದ ಉಳಿದ ಭಾಗಗಳಿಗೆ ಅನುಸರಿಸಲು ನೂತನ ಮಾನದಂಡಗಳನ್ನು ಹೊಂದಿಸುತ್ತಿದೆ.
ಭಾರತ ಮತ್ತು ಭಾರತದ ಪ್ರಗತಿಪಥದ ಕುರಿತು ಹೇಳಿಕೆಗಳು
ಸುಜುಕಿ ಮೋಟಾರ್ಸ್ ಅಧ್ಯಕ್ಷ ಶ್ರೀ ತೊಶಿಹಿರೊ ಸುಜುಕಿ ಅವರು ಪ್ರಧಾನಮಂತ್ರಿ ಮೋದಿಯವರ ಪ್ರಬಲ ನಾಯಕತ್ವವನ್ನು ಶ್ಲಾಘಿಸಿದ್ದಾರೆ ಮತ್ತು “ಕಳೆದ 10 ವರ್ಷಗಳಲ್ಲಿ, ಪ್ರಧಾನಮಂತ್ರಿ ಮೋದಿಯವರ ಬಲವಾದ ನಾಯಕತ್ವ ಮತ್ತು ನಿರಂತರ ಬೆಂಬಲದಲ್ಲಿ, ಉತ್ಪಾದನಾ ಘಟಕಗಳಿಗೆ, ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹ ಸಿಗುತ್ತಿದೆ. ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯು ಸ್ಥಿರವಾಗಿ ವಿಸ್ತರಿಸುತ್ತಿದೆ. ಇದರ ಪರಿಣಾಮವಾಗಿ, ಭಾರತವು ವಿಶ್ವದ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿದೆ. ಪ್ರಗತಿಯನ್ನು ಚಾಲನೆ ಮಾಡುವಲ್ಲಿ ಆಡಳಿತ ಮತ್ತು ದೃಷ್ಟಿಕೋನ ಹೇಗೆ ಕೈಜೋಡಿಸುತ್ತದೆ ಎಂಬುದನ್ನು ತೋರಿಸುತ್ತದೆ. ಪ್ರಧಾನಮಂತ್ರಿ ಶ್ರೀ ಮೋದಿಯವರ ಪ್ರಗತಿಪರ ಧೋರಣೆ ಮತ್ತು ಭಾರತದ ಬೆಳವಣಿಗೆಗೆ ಧನ್ಯವಾದಗಳು” ಎಂದು ಸುಜುಕಿ ಮೋಟಾರ್ಸ್ ಅಧ್ಯಕ್ಷ ಶ್ರೀ ತೊಶಿಹಿರೊ ಸುಜುಕಿ ಅವರು ತಮ್ಮ ಅಭಿಪ್ರಾಯವನ್ನು ಈ ಹಿಂದೆಯೇ ತಿಳಿಸಿದ್ದರು.
ಡಬ್ಲ್ಯೂ.ಇ.ಎಫ್. ಅಧ್ಯಕ್ಷ ಬೋರ್ಗೆ ಬ್ರೆಂಡೆ ಅವರು ಭಾರತದ ಪ್ರಗತಿಯ ಪಥದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಭಾರತದ ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಆರ್ಥಿಕತೆ ಮತ್ತು ಅದರ ಬೆಳವಣಿಗೆಯ ಹಾಗೂ ಉತ್ಕರ್ಷದ ಸೇವೆಗಳ ರಫ್ತುಗಳನ್ನು ಅವರು ಎತ್ತಿ ತೋರಿಸಿದ ಅವರು “ಮುಂಬರುವ ದಶಕದಲ್ಲಿ, ಕನಿಷ್ಠ ಎರಡು ದಶಕಗಳಲ್ಲಿ ನಾವು 10 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಬಗ್ಗೆ ಮಾತನಾಡಬಹುದು ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.
“ಡಿಜಿಟಲ್ ಆರ್ಥಿಕತೆ ಮತ್ತು ಡಿಜಿಟಲ್ ಸೇವೆಗಳ ವ್ಯವಸ್ಥೆಗಳ ರಫ್ತಿನ ಕಾರಣದಿಂದಾಗಿ ಭಾರತವು ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಇದು ಭಾರತಕ್ಕೆ ಅತ್ಯಂತ ಸಿಹಿ ತಾಣವಾಗಿದೆ. ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜಾಗತಿಕವಾಗಿ, ಎಲ್ಲರಿಗೂ ಈಗ ಭಾರತದಲ್ಲಿ ಬಹಳಷ್ಟು ಆಸಕ್ತಿಯಿದೆ” ಎಂದು ಹೇಳಿದ್ದಾರೆ.
ತಂತ್ರಜ್ಞಾನ ಮತ್ತು ಹಣಕಾಸು ಕ್ಷೇತ್ರದಲ್ಲಿನ ನಾಯಕರು ಭಾರತದ ಪ್ರಗತಿಯನ್ನು ಗುರುತಿಸಿದ್ದಾರೆ. ಮಾಸ್ಟರ್‌ಕಾರ್ಡ್ ಸಂಸ್ಥೆಯ ಇಂಟರ್‌ನ್ಯಾಶನಲ್ ಮಾರ್ಕೆಟ್ ವಿಭಾಗದ ಅಧ್ಯಕ್ಷ ಲಿಂಗ್ ಹೈ, “ತನ್ನ ಬೆಳೆಯುತ್ತಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ (ಎಸ್.ಎಂ.ಇ.) ವಲಯದ ಹಿನ್ನಲೆಯಲ್ಲಿ ಭಾರತದ ಬೆಳವಣಿಗೆಯ ಯಶೋಗಾಥೆಯ ಬಗ್ಗೆ ಆಶಾವಾದಿಯಾಗಿದ್ದಾರೆ ಏಕೆಂದರೆ ಸರ್ಕಾರವು ಡಿಜಿಟಲೀಕರಣ ಮತ್ತು ಹಣಕಾಸು ಸೇರ್ಪಡೆಯ ವ್ಯವಸ್ಥೆ ಮತ್ತು ಪ್ರಯತ್ನಗಳನ್ನು ದ್ವಿಗುಣಗೊಳಿಸುತ್ತದೆ. ನೀವು ಜನಸಂಖ್ಯೆ (ಜನಸಂಖ್ಯಾಶಾಸ್ತ್ರ), ಹಣದುಬ್ಬರವನ್ನು ತಗ್ಗಿಸುವುದು, ಖರ್ಚು ಮಾಡುವ ಶಕ್ತಿ, ರಫ್ತು, ಸೇವಾ ವಲಯದಂತಹ ಮೂಲಭೂತ ಅಂಶಗಳನ್ನು ಗಮನಿಸಿದರೆ, ಭಾರತಕ್ಕೆ ಸಾಕಷ್ಟು ವಿಷಯಗಳು ಬಲವಾಗಿರುತ್ತವೆ” ಎಂದು ಅವರು ಹೇಳಿದರು.
ಮಾರ್ಕ್ ಬೆನಿಯೋಫ್, ಸಿಇಒ, ಸೇಲ್ಸ್‌ಫೋರ್ಸ್: “ಜಗತ್ತು ‘ಭಾರತೀಯ ಯುಗ’ಕ್ಕೆ ಚಲಿಸುತ್ತಿದೆ ಮತ್ತು ದೇಶವು ಅತ್ಯಾಕರ್ಷಕ ಅವಕಾಶಗಳನ್ನು ಒದಗಿಸುತ್ತದೆ. ಮತ್ತು ಇದು ಬಹಳ ರೋಮಾಂಚಕಾರಿ ಅವಕಾಶ ಎಂದು ನಿಮಗೆ ತಿಳಿದಿದೆ”
ಥಾಮಸ್ ಡೊಹ್ಮ್ಕೆ, ಸಿಇಒ, ಗಿಟ್‌ಹಬ್: “ನಾನು ಭಾರತವನ್ನು ಅಂದು ಮತ್ತು ಇಂದು ನಡುವೆ ಹೋಲಿಸಿದಾಗ, ಭಾರತದಲ್ಲಿ ಇಂದು ನಂಬಲಾಗದ ಶಕ್ತಿಯನ್ನು ಗುರುತಿಸಬಹುದು; ಭಾರತದಲ್ಲಿ ವಸ್ತುಗಳು ಚಲಿಸುತ್ತಿವೆ ಮತ್ತು ವಿಕಸನಗೊಳ್ಳುತ್ತಿವೆ. ಭಾರತದಲ್ಲಿ ಆಗ ಮೆಟ್ರೋ ಇರಲಿಲ್ಲ, ಈಗ ಭಾರತದಲ್ಲಿ ಬಹುವಿಧದ ಮಾರ್ಗ ವ್ಯವಸ್ಥೆಗಳಿವೆ. ವಿಮಾನ ನಿಲ್ದಾಣವು ಅದ್ಭುತ, ಆಧುನಿಕ ಮತ್ತು ಸ್ವಚ್ಛವಾಗಿದೆ. ಇದು ಸಾಫ್ಟ್‌ವೇರ್ ಉದ್ಯಮದಲ್ಲಿ ಏನಾಗುತ್ತಿದೆ ಎಂಬುದರ ಪ್ರತಿಬಿಂಬವಾಗಿದೆ ಎಂದು ನಾನು ಭಾವಿಸುತ್ತೇನೆ. ಭಾರತದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯ ಸಾಫ್ಟ್‌ವೇರ್ ಡೆವಲಪರ್‌ಗಳಿದ್ದಾರೆ”
ಜೇಮೀ ಡಿಮನ್, ಸಿಇಒ, ಜೆಪಿ ಮೋರ್ಗಾನ್: “ಅವರು(ಭಾರತ) ಈ ಅದ್ಭುತ ಪ್ರವೃತ್ತಿಯನ್ನು ಪ್ರಾರಂಭಿಸಿದ್ದಾರೆ, ಅಲ್ಲಿ ಪ್ರತಿಯೊಬ್ಬ ನಾಗರಿಕನು ಕೈ, ಕಣ್ಣುಗುಡ್ಡೆ ಅಥವಾ ಬೆರಳಿನಿಂದ ಗುರುತಿಸಲ್ಪಡುತ್ತಾನೆ(ಆಧಾರ್). ಅವರು 700 ಮಿಲಿಯನ್ ಜನರಿಗೆ ಬ್ಯಾಂಕ್ ಖಾತೆಗಳನ್ನು (ಜನಧನ್) ತೆರೆದಿದ್ದಾರೆ ಮತ್ತು ಪಾವತಿಗಳನ್ನು (ಡಿಜಿಟಲ್) ಸರಾಗವಾಗಿ ಪ್ರಕ್ರಿಯೆಗೊಳಿಸಲಾಗುತ್ತಿದೆ. ಅವರ ಶಿಕ್ಷಣ ವ್ಯವಸ್ಥೆ ಮತ್ತು ಮೂಲಸೌಕರ್ಯವು ಗಮನಾರ್ಹವಾಗಿದೆ. ಒಬ್ಬ ನ್ಯಾಯಯುತ ಮತ್ತು ಕಠಿಣ ಪರಿಶ್ರಮದ ವ್ಯಕ್ತಿಯ ನಾಯಕತ್ವದ ಕಾರಣದಿಂದಾಗಿ ಇಡೀ ದೇಶವನ್ನು ಮೇಲಕ್ಕೆತ್ತಲ್ಪಟ್ಟಿದೆ”.
ಜಾರ್ಜ್ ಕಾಪ್ಷ್, ಕ್ಯಾಪ್ಶ್ ಗ್ರೂಪ್ ನ ಅಧ್ಯಕ್ಷ ಮತ್ತು ಗ್ಲೋಬಲ್ ಸಿಇಒ: “ಭಾರತವು ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ನಾವು ಮಾರುಕಟ್ಟೆಯನ್ನು ಪ್ರವೇಶಿಸಲು ಉತ್ಸುಕರಾಗಿದ್ದೇವೆ. ನಾವು ಹಲವಾರು ವರ್ಷಗಳ ಹಿಂದೆ ಪ್ರಯತ್ನಿಸಿದ್ದೇವೆ ಮತ್ತು ಅದು ಯಶಸ್ವಿಯಾಗಲಿಲ್ಲ, ಆದರೆ ಈ ಬಾರಿ ಇದು ಸರಿಯಾದ ಹಾದಿಯಲ್ಲಿದೆ, ಪ್ರಗತಿ ಪಥದಲ್ಲಿ ಮುನ್ನುಗ್ಗುತ್ತಿದೆ. ಸರಿಯಾದ ಪಾಲುದಾರರೊಂದಿಗೆ ಸರಿಯಾದ ಕ್ಷಣ ಎಂದು ನಾವು ನಂಬುತ್ತೇವೆ”
ಎಸ್4 ಕ್ಯಾಪಿಟಲ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಮಾರ್ಟಿನ್ ಸೊರೆಲ್ ಅವರು, ಪ್ರಧಾನಮಂತ್ರಿ ಮೋದಿಯವರ ಕೌಶಲ್ಯಪೂರ್ಣ ಬ್ರ್ಯಾಂಡಿಂಗ್ ಅನ್ನು“ಭಾರತವನ್ನು ಜಾಗತಿಕ ನಾಯಕ” ಎಂದು ಶ್ಲಾಘಿಸಿದರು. “ಪ್ರಧಾನಮಂತ್ರಿ ಮೋದಿ ಅವರು ಬ್ರ್ಯಾಂಡಿಂಗ್ ಮತ್ತು ಬ್ರ್ಯಾಂಡಿಂಗ್ ದೇಶಗಳ ಅಂತಿಮ ಮಾಸ್ಟರ್. ಅವರು ಭಾರತವನ್ನು ವ್ಯವಸ್ಥಿತವಾಗಿ ಮೌಲ್ಯವರ್ಧಿತ ಹಾಗೂ ಸ್ಥಾನಿಕಗೊಳಿಸುವಲ್ಲಿ ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಪ್ರಗತಿಪಥದಲ್ಲಿ ಅತಿ ವೇಗದಲ್ಲಿ ಮುನ್ನುಗ್ಗುತ್ತಿರುವ ಭಾರತದ ಬೆಳವಣಿಗೆಯ ಕಥೆಯನ್ನು ಶ್ಲಾಘಿಸಿದ ‘ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಫೌಂಡೇಶನ್‘ ಸಂಸ್ಥೆಯ ಅಧ್ಯಕ್ಷ ಕ್ರಿಸ್ಟೋಫರ್ ಜೆ. ಎಲಿಯಾಸ್ ಅವರು “ಇತರ ರಾಷ್ಟ್ರಗಳು ತಮ್ಮ ಆರೋಗ್ಯ ಮತ್ತು ಇತರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ಭಾರತದ ಯಶಸ್ವಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ತಮ್ಮ ತಮ್ಮ ದೇಶಗಳ್ಲಿ ಒಂದು ಮಾದರಿಯನ್ನಾಗಿ ಬಳಸಬಹುದು” ಭಾರತದ ಡಿಪಿಐ ಪ್ರಗತಿಯನ್ನು ಎತ್ತಿ ಹಿಡಿದ ಅವರು, “ಭಾರತದಲ್ಲಿನ ನಿರ್ದಿಷ್ಟ ಸಾಧನೆಯ ಒಂದು ಕ್ಷೇತ್ರವು ವಿಶ್ವಕ್ಕೆ ಅನುಸರಿಸಲು ಉತ್ತಮ ಮಾದರಿಯಾಗಿದೆ ಎಂದು ನಾನು ಭಾವಿಸುತ್ತೇನೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಹಣಕಾಸು ಸೇವೆಗಳು, ಆರೋಗ್ಯ ಇತ್ಯಾದಿಗಳಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲು ಸಹಾಯ ಮಾಡಿದೆ” ಎಂದು ಹೇಳಿದ್ದಾರೆ.
ಬಿಲ್ ಗೇಟ್ ಅವರು “ಭಾರತದ ಭವಿಷ್ಯದ ಬಗ್ಗೆ ಆಸಕ್ತಿಯಲ್ಲಿದ್ದೇನೆ” ಎಂದು ಹೇಳಿದರು. ಡಿಜಿಟಲ್ ಪಬ್ಲಿಕ್ ಇನ್ಫ್ರಾ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಪರಿವರ್ತಿಸುವಲ್ಲಿ ಪ್ರಧಾನಮಂತ್ರಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ಅವರು, “ಆಧಾರ್ ಮತ್ತು ನೀವು ಡಿಜಿಟಲ್ ಆಗಿ ನಿರ್ವಹಿಸುವ ಬ್ಯಾಂಕ್ ಖಾತೆಗಳೊಂದಿಗೆ ಪ್ರಾರಂಭವಾಗುವ ಡಿಜಿಟಲ್ ಸಂಪರ್ಕಗಳ ಈ ಕಲ್ಪನೆಯು ತೀವ್ರಗತಿಯಲ್ಲಿ ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಿದೆ. ಹೀಗಾಗಿ ಭಾರತದಲ್ಲಿ ರೈತರನ್ನು ನೋಂದಣಿ ಮಾಡಿಸಿ ಮುಂಗಡ ಸೂಚನೆ ನೀಡುತ್ತಿರುವುದನ್ನು ಈಗ ಕೃಷಿ ಕ್ಷೇತ್ರದಲ್ಲಿ ಕಾಣುತ್ತಿದ್ದೇವೆ. ಹಾಗಾಗಿ ಭಾರತೀಯ ನಾಯಕತ್ವದಿಂದ ಇತರ ದೇಶಗಳು ಪ್ರಯೋಜನ ಪಡೆಯಬೇಕು”
‘ಚಿಪ್ ವಾರ್’ ಲೇಖಕ ಕ್ರಿಸ್ ಮಿಲ್ಲರ್ ಅವರು “ಭಾರತದ ಆಕರ್ಷಣೆಯನ್ನು ಚೀನಾಕ್ಕೆ ಆಕರ್ಷಕ ಪರ್ಯಾಯ”ವೆಂದು ಗುರುತಿಸಿದ್ದಾರೆ. ಭಾರತದ ಬೆಳವಣಿಗೆಯ ಕಥೆಯನ್ನು ಶ್ಲಾಘಿಸಿದ ಅವರು, ಭಾರತದಲ್ಲಿ ಚಿಪ್ ಉದ್ಯಮದ ಬಗ್ಗೆ ಹೆಚ್ಚಿನ ಉತ್ಸಾಹ ಮತ್ತು ಗಮನವಿದೆ ಎಂದು ನಾನು ಭಾವಿಸುತ್ತೇನೆ, ಕೇಂದ್ರ ಸರ್ಕಾರವು ನೀತಿಗಳನ್ನು ಹೊಂದಿದೆ. ವಿದೇಶಿ ಕಂಪನಿಗಳು ಭಾರತವನ್ನು ಆಕರ್ಷಕ ಸ್ಥಳವಾಗಿ ನೋಡುತ್ತಿವೆ. ಒಳ್ಳೆಯ ಸುದ್ದಿ ಏನೆಂದರೆ ಭಾರತದಲ್ಲಿನ ಪರಿಸರ ವ್ಯವಸ್ಥೆಯ ದೇಶದಾದ್ಯಂತ ಪ್ರತಿಯೊಂದು ಭಾಗವೂ ಬೆಳೆಯುತ್ತಿದೆ, ಅಭಿವೃದ್ಧಿ ಹೊಂದುತ್ತಿದೆ” ಎಂದು ಹೇಳಿದ್ದಾರೆ.
ಯು.ಎನ್.ಜಿ.ಎ. ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರು ಕ್ಷಿಪ್ರ ಅಭಿವೃದ್ಧಿಗೆ ಡಿಜಿಟಲ್ ವಿಧಾನಗಳನ್ನು ಬಳಸುತ್ತಿರುವ ಭಾರತವನ್ನು ಹೊಗಳಿದರು. “ಭಾರತದ ಗ್ರಾಮೀಣ ಪ್ರದೇಶದ ಜನರಿಗೆ ಬೆರಳ ತುದಿಯಲ್ಲಿ, ಸ್ಮಾರ್ಟ್‌ಫೋನ್ ಸ್ಪರ್ಶದಲ್ಲಿ ಹೇಗೆ ಪಾವತಿಗಳನ್ನು ಮಾಡಲು ಮತ್ತು ಬಿಲ್‌ಗಳನ್ನು ಪಾವತಿಸಲು ಸಾಧ್ಯವಾಗುತ್ತದೆ” ಎಂಬುದನ್ನು ಎತ್ತಿ ಹಿಡಿದ ಡೆನ್ನಿಸ್ ಫ್ರಾನ್ಸಿಸ್ ಅವರು, “ಕಳೆದ ಐದು ಅಥವಾ ಆರು ವರ್ಷಗಳಲ್ಲಿ ಕೇವಲ ಸ್ಮಾರ್ಟ್ಫೋನ್ ಬಳಕೆಯಿಂದ ಭಾರತವು 800 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತಲು ಸಾಧ್ಯವಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಎಂದಿಗೂ ಸಂಬಂಧವನ್ನು ಹೊಂದಿರದ ಭಾರತದ ಗ್ರಾಮೀಣ ಲಕ್ಷಾಂತರ ರೈತರು ಈಗ ತಮ್ಮ ಎಲ್ಲಾ ವ್ಯವಹಾರಗಳನ್ನು ತಮ್ಮ ಸ್ಮಾರ್ಟ್‌ಫೋನ್ ನಲ್ಲಿ ಬ್ಯಾಂಕು ವಹಿವಾಟು ಮಾಡಲು ಸಮರ್ಥರಾಗಿದ್ದಾರೆ” ಎಂದು ಅವರು ಹೇಳಿದರು.
“ಅವರು ತಮ್ಮ ಬಿಲ್‌ಗಳನ್ನು ಪಾವತಿಸುತ್ತಾರೆ ಮತ್ತು ಅವರು ಆದೇಶಗಳಿಗಾಗಿ ಪಾವತಿಗಳನ್ನು ಸ್ವೀಕರಿಸುತ್ತಾರೆ. 800 ಮಿಲಿಯನ್ ಜನರು ಬಡತನದಿಂದ ಹೊರಬಂದಿದ್ದಾರೆ ಏಕೆಂದರೆ ಭಾರತದಲ್ಲಿ ಹೆಚ್ಚಿನ ಮಟ್ಟದ ಇಂಟರ್ನೆಟ್ ಲಭ್ಯತೆಯ ಅವಕಾಶವಿದೆ ಮತ್ತು ಬಹುತೇಕ ಎಲ್ಲರೂ ಸೆಲ್‌ಫೋನ್ ಹೊಂದಿದ್ದಾರೆ” ಎಂದು ಹೇಳಿದರು.
ವಿಯೆಟ್ನಾಂ ಪ್ರಧಾನಮಂತ್ರಿ ಫಾಮ್ ಮಿನ್ ಚಿನ್ಹ್ ಅವರು “ಕಳೆದ 10 ವರ್ಷಗಳಲ್ಲಿ, ಪ್ರಧಾನಮಂತ್ರಿ ಮೋದಿಯವರ ನಾಯಕತ್ವದಲ್ಲಿ, ಭಾರತವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಗುರುತಿಸಲ್ಪಟ್ಟಿದೆ. ಮಹತ್ವದ ಜಾಗತಿಕ ಪಾತ್ರವನ್ನು ಹೊಂದಿರುವ ಉನ್ನತ ಶಕ್ತಿಗಳಲ್ಲಿ ಒಂದಾಗಿದೆ ಮತ್ತು ಅದನ್ನು ಸಾಧಿಸಿದೆ” ಎಂದು ಹೇಳಿದ್ದಾರೆ.
ಐಎಂಎಫ್ ನ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಅವರು ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಸಹ ಗಹನವಾಗಿ ಗಮನ ಹರಿಸಿದ್ದಾರೆ. “ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಶೀಘ್ರದಲ್ಲೇ ಅಗ್ರ ಮೂರು ಜಾಗತಿಕ ಆರ್ಥಿಕ ಶಕ್ತಿಗಳಲ್ಲಿ ಒಂದಾಗಲಿದೆ” ಎಂದು ಹೇಳಿದರು. “2027 ರ ವೇಳೆಗೆ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆ ಇದೆ” ಎಂದು ಅವರು ಹೇಳಿದರು.
ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರಾದ ಪಾಲ್ ರೋಮರ್ ಅವರು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು (ಡಿಪಿಐ) ಶ್ಲಾಘಿಸಿದ್ದಾರೆ. ಅವರು ಹೇಳಿದರು, “ಆಧಾರ್ ಪ್ರಸ್ತುತ ವಿಶ್ವದ ಅತ್ಯಂತ ಪ್ರಮುಖ ತಾಂತ್ರಿಕ ವ್ಯವಸ್ಥೆಯಾಗಿದೆ. ಡಿಜಿಟಲ್ ಸೌತ್‌ನಲ್ಲಿರುವ ಇತರ ದೇಶಗಳು ತಮ್ಮಲ್ಲಿಯೇ ಹೇಳಿಕೊಳ್ಳಬೇಕಾದ ಮೊದಲ ವಿಷಯವೆಂದರೆ, ಭಾರತವು ಇಷ್ಟು ಕಿರು ಅವಧಿಯಲ್ಲಿ ಅದನ್ನು ಮಾಡಲು ಸಾಧ್ಯವಾದರೆ, ನಾವೂ ಅದನ್ನು ಮಾಡಬಹುದು ಎಂದು ನಾನು ಭಾವಿಸುತ್ತೇನೆ. ಆಧಾರ್ ಸಂಖ್ಯೆಯನ್ನು ರಚಿಸುವ ಮೂಲಕ ಭಾರತವು ಮಾಡಿದ ರೀತಿಯಲ್ಲಿ ಹಲವು ವಿಷಯಗಳನ್ನು ಕಲಿಯಬಹುದಾಗಿದೆ. ಈ ಹಿಂದೆ ಪ್ರಯತ್ನಿಸದ ಯಾವುದನ್ನಾದರೂ ಪ್ರಯತ್ನಿಸುವ ಬಗ್ಗೆ ವಿಶ್ವಾಸ ಮತ್ತು ಮಹತ್ವಾಕಾಂಕ್ಷೆಯನ್ನು ಭಾರತವನ್ನು ನೋಡಿಯಾದರೂ ಇತರ ಎಲ್ಲಾ ದೇಶಗಳು ಹೊಂದಿರಬೇಕು” ಎಂದು ಅವರು ಹೇಳಿದ್ದಾರೆ.
ಆಪಲ್ ಸಂಸ್ಥೆಯ ಸಿಇಒ ಟಿಮ್ ಕುಕ್ ಅವರು, “ಇತ್ತೀಚಿನ ವರ್ಷಗಳಲ್ಲಿ, ಆಪಲ್ ಹೊಸ ಆದಾಯ ಮಾನದಂಡಗಳನ್ನು ಸ್ಥಾಪಿಸಿದ ಬೆರಳೆಣಿಕೆಯ ದೇಶಗಳು ಮತ್ತು ಪ್ರದೇಶಗಳಲ್ಲಿ ಭಾರತ ಒಂದಾಗಿದೆ. ಮೊದಲ ಐಫೋನ್ ಅನ್ನು ಅನಾವರಣಗೊಳಿಸಿದ ನಂತರ 15 ವರ್ಷಗಳ ನಂತರ, ಸಾಧನವು ಭಾರತದಲ್ಲಿ ವೈಯಕ್ತಿಕ ತಂತ್ರಜ್ಞಾನದಲ್ಲಿ ಅತ್ಯಂತ ಅಪೇಕ್ಷಿತ ಬ್ರ್ಯಾಂಡ್ ಆಗಿ ಉಳಿದಿದೆ”.
ಎನ್ವಿಡಿಯಾದ ಸಿಇಒ ಜೆನ್ಸನ್ ಹುವಾಂಗ್ ಅವರು ಭಾರತದ ತಾಂತ್ರಿಕ ಸಾಮರ್ಥ್ಯಗಳನ್ನು ಹೊಗಳಿದ್ದಾರೆ. “ಭಾರತವು ವಿಶ್ವದ ಕೆಲವು ಶ್ರೇಷ್ಠ ಕಂಪ್ಯೂಟರ್ ವಿಜ್ಞಾನಿಗಳ ತವರೂರಾಗಿದೆ. ಆದ್ದರಿಂದ, ಇದು ಉತ್ತಮ ಅವಕಾಶ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೂಡ ಒಂದು ಹೊಸ ಉದ್ಯಮವಾಗಿದೆ. ಹೊಸ ಉತ್ಪಾದನಾ ಉದ್ಯಮವು ಬಹಳ ಮುಖ್ಯವಾಗಿದೆ ಮತ್ತು ಅದನ್ನು ಸಾಧ್ಯವಾಗಿಸಲು ನಾನು ಭಾರತದೊಂದಿಗೆ ಅತ್ಯಂತ ಆಳವಾದ ರೀತಿಯಲ್ಲಿ ಪಾಲುದಾರಿಕೆಗಾಗಿ ಎದುರು ನೋಡುತ್ತಿದ್ದೇನೆ” ಎಂದು ಅವರು ಹೇಳಿದರು
ಡಿಪಿ ವರ್ಲ್ಡ್ ಅಧ್ಯಕ್ಷ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಅವರು ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಭಾರತದ ಬೆಳವಣಿಗೆಯನ್ನು ಶ್ಲಾಘಿಸಿದರು ಮತ್ತು “2023 ರಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ, ಈ ಬೆಳವಣಿಗೆಯು ಪ್ರಧಾನಮಂತ್ರಿ ಮೋದಿಯವರ ಬಲವಾದ ನಾಯಕತ್ವದಲ್ಲಿ ಮುಂದುವರಿಯುತ್ತದೆ” ಎಂದು ಹೇಳಿದರು.
ಭೂತಾನ್‌ನ ಪ್ರಧಾನ ಮಂತ್ರಿ ದಾಶೋ ತ್ಶೆರಿಂಗ್ ಟೋಬ್‌ಗೇ ಅವರು ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪ್ರಮುಖ ಪಾತ್ರಕ್ಕಾಗಿ ಭಾರತದ ಸಹಕಾರಿಗಳನ್ನು ಶ್ಲಾಘಿಸಿದ್ದಾರೆ. ಅವರು ಹೀಗೆ ಹೇಳಿದ್ದಾರೆ: “ಸಾಮೂಹಿಕ ಉಪಕ್ರಮದ ವ್ಯವಸ್ಥೆ-ಪ್ರಕ್ರಿಯೆಯ ಅಗಾಧವಾದ ಪರಿವರ್ತನಾ ಶಕ್ತಿಯನ್ನು ಉದಾಹರಿಸುವ ಉತ್ತಮ ದೇಶ ಭಾರತವಲ್ಲದೆ ಇನ್ನೊಂದಿಲ್ಲ. ಇದೇ ಕಾರಣಕ್ಕಾಗಿ, ಸಹಕಾರಿ ಸಂಘಟನೆಗಳ ಅಂತರರಾಷ್ಟ್ರೀಯ ವರ್ಷದ ಪ್ರಾರಂಭವು ಭಾರತದಲ್ಲಿ ನಡೆಯುತ್ತಿರುವುದು ಸೂಕ್ತವಾಗಿದೆ. ಭಾರತೀಯ ಸಹಕಾರಿ ಆಂದೋಲನವು ಅದ್ಭುತವಾಗಿ ಯಶಸ್ವಿಯಾಗಿದೆ. ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿದೆ ಮತ್ತು ಅವರ ಏಳಿಗೆಯನ್ನು ಹೆಚ್ಚಿಸಿದೆ”
ಭಾರತದ ನಾಯಕತ್ವದ ಕುರಿತು ಜಾಗತಿಕ ನಾಯಕರ ಹೇಳಿಕೆಗಳು
ಜಾನ್ ಚೇಂಬರ್ಸ್, ಅಧ್ಯಕ್ಷರು-ಯು.ಎಸ್.ಐ.ಎಸ್.ಪಿ.ಎಫ್. ಅವರು ‘ಪ್ರಧಾನಮಂತ್ರಿ ಮೋದಿಯವರ 3 ನೇ ಅವಧಿಯು ಶತಮಾನದ ದೃಷ್ಟಿಕೋನವನ್ನು ಹೊಂದಿಸುತ್ತದೆ. ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಲು ಸಿದ್ಧವಾಗಿದೆ. ಇದು ಚೀನಾಕ್ಕಿಂತ ಎರಡು ಪಟ್ಟು ದೊಡ್ಡದಾಗಿದೆ ಮತ್ತು ಯು.ಎಸ್. ಗಿಂತ 30-40% ದೊಡ್ಡದಾಗಿದೆ’
ಡಿಪಿ ವರ್ಲ್ಡ್‌ನ ಸಿಇಒ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಅವರು ಹೀಗೆ ಹೇಳೀದ್ದಾರೆ : “ಈ ವ್ಯಕ್ತಿ (ಪ್ರಧಾನಮಂತ್ರಿ ನರೇಂದ್ರ ಮೋದಿ) ಅದ್ಭುತ. ಅವರ ಶಕ್ತಿ, ಅವರ ದೂರದೃಷ್ಟಿಯು ನಮ್ಮನ್ನು ಪ್ರೇರೇಪಿಸುತ್ತದೆ ಮತ್ತು ಅವರ ಪರಿಕಲ್ಪನೆ ನಮ್ಮನ್ನು ಪ್ರೇರೇಪಿಸುತ್ತದೆ. ಪ್ರಧಾನಮಂತ್ರಿ ಮೋದಿಯವರ ನೀತಿಗಳು ನಮಗೆ ಸ್ಫೂರ್ತಿ ನೀಡುತ್ತಿವೆ ಮತ್ತು ಭಾರತದಲ್ಲಿ ಇನ್ನೂ ಹೆಚ್ಚಿನದನ್ನು ಮಾಡಲು ಅವಕಾಶ ನೀಡುತ್ತಿವೆ”
ಕೀತ್ ಸ್ವೆಂಡ್ಸೆನ್, ಸಿಇಒ ಎಪಿ ಮೊಲ್ಲರ್-ಮಾರ್ಸ್ಕ್ ಅವರು ಹೇಳಿದರು: “ದೇಶಕ್ಕಾಗಿ ಅವರ 2047 ರ ದೃಷ್ಟಿಕೋನ ಮತ್ತು ಪರಿಕಲ್ಪನೆ ಅದ್ಭುತ. ಅದು ಕಡಲ ವಲಯಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದರ ಕುರಿತು ಪ್ರಧಾನಮಂತ್ರಿ ಅವರೊಂದಿಗೆ ಚರ್ಚೆ ನಡೆಸಲು ಅವಕಾಶವನ್ನು ಹೊಂದಿರುವುದು ನನ್ನ ಪಾಲಿಗೆ ಒಂದು ದೊಡ್ಡ ಗೌರವವಾಗಿದೆ. ಪ್ರಧಾನಮಂತ್ರಿಯವರೊಂದಿಗೆ ಚರ್ಚಿಸಲು ಅವಕಾಶ ಸಿಕ್ಕಿರುವುದು ತುಂಬಾ ಉತ್ತೇಜನಕಾರಿಯಾಗಿದೆ. ತುಂಬಾ ಸ್ಪೂರ್ತಿದಾಯಕವಾಗಿದೆ. ನಮ್ಮ ಉದ್ಯಮ ಕ್ಷೇತ್ರದ ವಿವರಗಳ ಬಗ್ಗೆ ಅವರ ಜ್ಞಾನದಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ.
ಗಯಾನಾ ಅಧ್ಯಕ್ಷ ಇರ್ಫಾನ್ ಅಲಿ ಅವರು, ಪ್ರಧಾನಮಂತ್ರಿ ಮೋದಿಯವರನ್ನು “ನಾಯಕರ ನಡುವೆ ದೊಡ್ಡ ಚಾಂಪಿಯನ್” ಎಂದು ಶ್ಲಾಘಿಸಿದ್ದಾರೆ ಮತ್ತು “ನೀವು ಇಲ್ಲಿಗೆ ಬಂದಿರುವುದು ನಮ್ಮ ದೊಡ್ಡ ಗೌರವವಾಗಿದೆ. ಮೋದಿಯವರೇ, ನೀವು ನಾಯಕರಲ್ಲಿ ಚಾಂಪಿಯನ್ ಆಗಿದ್ದೀರಿ. ನೀವು ಮಹತ್ವಾಕಾಂಕ್ಷಿ ನಾಯಕತ್ವವನ್ನು ಹೊಂದಿದ್ದೀರಿ “ಅಭಿವೃದ್ಧಿಶೀಲ ಜಗತ್ತಿಗೆ ನಂಬಲಾಗದ ಬೆಳಕು ಆಗಿದ್ದೀರಿ. ನೀವು ಅಭಿವೃದ್ಧಿಶೀಲ ಜಗತ್ತಿಗೆ ಬೆಳಕನ್ನು ತೋರಿಸಿದ್ದೀರಿ ಮತ್ತು ಅನೇಕರು ತಮ್ಮದೇ ದೇಶದಲ್ಲಿ ಅಳವಡಿಸಿಕೊಳ್ಳುತ್ತಿರುವ ಅಭಿವೃದ್ಧಿ ಮಾಪನಗಳು ಮತ್ತು ಚೌಕಟ್ಟುಗಳನ್ನು ನೀವು ರಚಿಸಿ ಕೊಟ್ಟಿದ್ದೀರಿ” ಎಂದು ಹೇಳಿದರು.
ಅಧ್ಯಕ್ಷ ಪುಟಿನ್ ಪ್ರಧಾನಮಂತ್ರಿ ಮೋದಿಯವರನ್ನು ಶ್ಲಾಘಿಸಿದರು ಮತ್ತು “ಜಾಗತಿಕವಾಗಿ ಭಾರತದ ಸ್ಥಾನವನ್ನು ಬಲಪಡಿಸಲು ಪ್ರಧಾನಮಂತ್ರಿ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಉಪಕ್ರಮದಿಂದ ಪ್ರಭಾವಿತನಾಗಿದ್ದೇನೆ” ಎಂದು ಹೇಳಿದರು.
” ಭಾರತದಲ್ಲಿಯೂ ಉತ್ಪಾದನಾ ತಾಣಗಳು, ಹೈಟೆಕ್ ಸೇರಿದಂತೆ ರಷ್ಯಾದ ಒಕ್ಕೂಟದ ಎಲ್ಲಾ ಕ್ಷೇತ್ರಗಳಲ್ಲಿ, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ರಫ್ತು ಮಾಡಲು ಅವಕಾಶಗಳನ್ನು ವಿಸ್ತರಿಸುವ ಅವಶ್ಯಕತೆಯಿದೆ” ಎಂದು ಭಾವಿಸಿದ್ದೇನೆ. “ಪ್ರಧಾನಮಂತ್ರಿ ಮೋದಿ ಅವರು ಭಾರತದಲ್ಲಿ ಇದೇ ರೀತಿಯ ಅತ್ಯುತ್ತಮ ಕಾರ್ಯಕ್ರಮವನ್ನು ಹೊಂದಿದ್ದಾರೆ ಮತ್ತು ಇದು ನಮ್ಮ ಕಾರ್ಯಕ್ರಮಕ್ಕೆ ಹೋಲುತ್ತದೆ ಮತ್ತು ನಾವು ಅದನ್ನು ಹೊಂದಿಸಿ ಇಲ್ಲಿಯೂ ಕೂಡಾ ಅನುಷ್ಠಾನ ಮಾಡಲು ಸಿದ್ಧರಿದ್ದೇವೆ”
ಅಮೇರಿಕಾ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಮಂತ್ರಿ ಮೋದಿಯವರನ್ನು “ಅತ್ಯಂತ ಒಳ್ಳೆಯ ಮನುಷ್ಯ” ಎಂದು ಕರೆದರು ಮತ್ತು “ಪ್ರಧಾನಮಂತ್ರಿ ಮೋದಿ (ಭಾರತ), ಅವರು ನನ್ನ ಸ್ನೇಹಿತ ಮತ್ತು ಒಳ್ಳೆಯ ಮನುಷ್ಯ. ಅವರು ಪ್ರಧಾನಮಂತ್ರಿಯಾಗಿ ನೇಮಕಗೊಳ್ಳುವ ಮೊದಲು, ಭಾರತವು ತುಂಬಾ ಅಸ್ಥಿರವಾಗಿತ್ತು. ಹೊರನೋಟಕ್ಕೆ ಅವರು ನಿಮ್ಮ ಹಿರಿಯವರಂತೆ(ತಂದೆಯಂತೆ) ಕಾಣುತ್ತಾರೆ. ಅವರು ಅತ್ಯುತ್ತಮ ಸಾಧಕ ವ್ಯಕ್ತಿ ಮತ್ತು ಸಾಧನೆಯ ಹಾದಿಯಲ್ಲಿ ಸಂಪೂರ್ಣ ಛಲಗಾರ”
ವಿಯೆಟ್ನಾಂ ಪ್ರಧಾನಮಂತ್ರಿ ಫಾಮ್ ಮಿನ್ಹ್ ಚಿನ್ಹ್ ಅವರು ಪ್ರಧಾನಮಂತ್ರಿ ಮೋದಿಯವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು “ಪ್ರಧಾನಮಂತ್ರಿ ಮೋದಿ ಅವರ ನಾಯಕತ್ವದಲ್ಲಿ, ಸತತ ಮೂರನೇ ಅವಧಿಯಲ್ಲಿ, ಭಾರತೀಯ ಜನರಿಗೆ ಹೆಚ್ಚಿನ ಪ್ರಯೋಜನಗಳನ್ನು ತರಲು, ಭಾರತವು ಮುಂದುವರಿಯುತ್ತದೆ ಮತ್ತು ಭವಿಷ್ಯದಲ್ಲಿ ಯಶಸ್ಸು ಮತ್ತು ವಿಕಸಿತ ಭಾರತ 2047 ಅನ್ನು ಕೂಡಾ ಸಾಧಿಸಲಿದೆ. ಭಾರತವು ಇನ್ನಷ್ಟು ವೈಭವವನ್ನು ಸಾಧಿಸುತ್ತದೆ ಎಂದು ನಾವು ನಂಬುತ್ತೇವೆ. “ಎಂದು ಹೇಳಿದ್ದಾರೆ
ಅಧ್ಯಕ್ಷ ಜೋ ಬಿಡೆನ್ ಅವರು ಹೀಗೆ ಹೇಳಿದ್ದಾರೆ: “ಭಾರತದೊಂದಿಗಿನ ಯುನೈಟೆಡ್ ಸ್ಟೇಟ್ಸ್ ನ ಪಾಲುದಾರಿಕೆಯು ಇತಿಹಾಸದಲ್ಲಿ ಯಾವುದೇ ಸಮಯಕ್ಕಿಂತ ಬಲವಾಗಿದೆ. ಈಗ ಸಂಬಂಧ, ಬಹಳ ಹತ್ತಿರ ಮತ್ತು ಹೆಚ್ಚು ಕ್ರಿಯಾತ್ಮಕವಾಗಿದೆ. ಪ್ರಧಾನಮಂತ್ರಿ ಮೋದಿ, ನಾವು ಪ್ರತಿ ಬಾರಿ ಕುಳಿತುಕೊಳ್ಳುವಾಗ, ಸಹಕಾರದ ಹೊಸ ಕ್ಷೇತ್ರಗಳನ್ನು ಕಂಡುಕೊಳ್ಳುವ ಅವರ ಸಾಮರ್ಥ್ಯದಿಂದ , ಅವರ ಪರಿಕಲ್ಪನಾ ಶಕ್ತಿಯಿಂದ ನಾನು ಹಲವು ಭಾರಿ ಆಶ್ಚರ್ಯ ಚಕಿತನಾಗಿದ್ದೇನೆ. ಅವರು, ಇಂದು ಕೂಡಾ ಬೇರೆಯಾಗಿರಲಿಲ್ಲ”
ಬ್ರಿಡ್ಜ್‌ವಾಟರ್ ಅಸೋಸಿಯೇಟ್ಸ್ ನ ಮುಖ್ಯ ಹೂಡಿಕೆ ಅಧಿಕಾರಿ ರೇ ಡಾಲಿಯೊ ಅವರು “ಭಾರತವು ಹಲವಾರು ಕಾರಣಗಳಿಗಾಗಿ ಬಹಳ ವಿಶೇಷವಾದ ಕ್ಷಣದಲ್ಲಿದೆ. ವಿಶೇಷವಾಗಿ ಇದು ಹೆಚ್ಚಿನ ಪ್ರಮಾಣದ ಸಾಲದಿಂದ ಹೊರೆಯಾಗದ ಕಾರಣದಿಂದ ಪ್ರಗತಿಯಲ್ಲಿ ಮುನ್ನುಗ್ಗುತ್ತಿದೆ ಮತ್ತು ಅದು ಈಗ ಟೇಕ್ ಆಫ್ ಹಂತದಲ್ಲಿದೆ. ನನ್ನ ಅಭಿಪ್ರಾಯದಲ್ಲಿ ನೀವು (ಭಾರತವಾಸಿ) ಪ್ರಧಾನಮಂತ್ರಿ ಮೋದಿ ಒಬ್ಬ ಶ್ರೇಷ್ಠ ನಾಯಕನನ್ನು ಹೊಂದಿದ್ದೀರಿ” ಎಂದು ಹೇಳಿದ್ದಾರೆ
ಭೂತಾನ್ ಪ್ರಧಾನಮಂತ್ರಿ ದಾಶೋ ತ್ಶೆರಿಂಗ್ ತೊಬ್ಗೇ ಅವರು ಪ್ರಧಾನಮಂತ್ರಿ ಮೋದಿಯನ್ನು “ಬಡೆ ಭಾಯ್” ಎಂದು ಕರೆದರು. “ನನಗೆ ಸಂತೋಷವಾಗಿದೆ ಏಕೆಂದರೆ ನಾನು ಭಾರತಕ್ಕೆ ಬಂದಾಗಲೆಲ್ಲಾ ನನ್ನ “ಬಡೆ ಭಾಯ್” (ಬಿಗ್ ಬ್ರದರ್) ಪ್ರಧಾನಮಂತ್ರಿ ಮೋದಿಯನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ” ಎಂದು ಹೇಳಿದ್ದಾರೆ
ಜಾಗತಿಕ ರಾಷ್ಟ್ರಗಳ ಮುಖ್ಯಸ್ಥರಿಂದ ಹಿಡಿದು ತಂತ್ರಜ್ಞಾನ ಮತ್ತು ವ್ಯವಹಾರದಲ್ಲಿ ವಿವಿಧ ಕ್ಷೇತ್ರಗಳ ನಾನಾ ನಾಯಕರವರೆಗೆ ಒಮ್ಮತವು ಸ್ಪಷ್ಟವಾಗಿದೆ: ಭಾರತದ ಜಾಗತಿಕ ಚಿತ್ರಣವನ್ನು ಮರುವ್ಯಾಖ್ಯಾನಿಸುವಲ್ಲಿ, ಅಂತರಾಷ್ಟ್ರೀಯ ಪಾಲುದಾರಿಕೆಗಳನ್ನು ಬೆಳೆಸುವಲ್ಲಿ ಮತ್ತು ರಾಷ್ಟ್ರವನ್ನು ಉಜ್ವಲ ಭವಿಷ್ಯದತ್ತ ಮುನ್ನಡೆಸುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವವು ಪ್ರಮುಖವಾಗಿದೆ.
ALERT : `iOS’ ಡಿವೈಸ್ ಗಳು` ಹ್ಯಾಕಿಂಗ್‌ಗೆ ಹೆಚ್ಚು ಗುರಿಯಾಗುತ್ತವೆ : ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ ಬಹಿರಂಗ.!