ಬೆಂಗಳೂರು : ನಗರದಲ್ಲಿ ಬಿಕ್ಲು ಶಿವ ಆಲಿಯಾಸ್ ಶಿವಕುಮಾರ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಕ್ಲು ಶಿವ ಹತ್ಯೆಗೆ ಸುಪಾರಿ ಪಡೆದಿದ್ದಂತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಬೆಂಗಳೂರಲ್ಲಿ ರೌಡಿ ಶೀಟರ್ ಶಿವಕುಮಾರ್ ಬರ್ಬರ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ತಾವೇ ಮಾಡಿದ್ದಾಗಿ ಪೊಲೀಸರ ಮುಂದೆ ಆರೋಪಿಗಳು ಶರಣಾಗಿದ್ದಾರೆ.ಈ ಬೆನ್ನಲ್ಲೇ ಬಿಗ್ ಟ್ವಿಸ್ಟ್ ಎನ್ನುವಂತೆ ಬಿಕ್ಲು ಶಿವ ಹತ್ಯೆಗೆ ಸುಪಾರಿ ಪಡೆದಿದ್ದಂತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ಮೂಲದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಎಸಿಪಿ ರಂಗಪ್ಪ ನೇತೃತ್ವದ ತಂಡದಿಂದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಸ್ಪೋಟಕ ವಿಚಾರ ಬಯಲಾಗಿದ್ದು, ಶಿವ ಹತ್ಯೆಗೂ ಮುನ್ನ ಬಾರ್ ನಲ್ಲಿ ಫುಲ್ ಎಣ್ಣೆ ಪಾರ್ಟಿ ಮಾಡಿದ್ದರು ಹಂತಕರು ಎಣ್ಣೆಯ ಮತ್ತಲ್ಲೆ ಕೊಲೆಗೆ ಸ್ಕೆಚ್ ಹಾಕಿದ್ದರು.
ಬಾರ್ ಒಂದರಲ್ಲಿ ಬಿಕ್ಲು ಶಿವನ ಉಸಿರು ನಿಲ್ಲಿಸಲು ಪ್ಲಾನ್ ಮಾಡಿದ್ದರು.ಬಿಕ್ಲು ಶಿವನ ಗುರುತೆ ಸಿಗದಂತೆ ಹೊಡಿಬೇಕು ಎಂದು ಸಕ್ಕತ್ ಪ್ಲಾನ್ ಮಾಡಿಕೊಂಡಿದ್ದರು. ಇಡೀ ಬೆಂಗಳೂರೇ ಬಿಕ್ಲು ಶಿವನ ಕೊಲೆ ನೆನಪಟ್ಟುಕೊಳ್ಳುವ ರೀತಿ ಹೊಡೆದು ಮುಗಿಸಬೇಕು ಅಷ್ಟೊಂದು ಭೀಕರವಾಗಿ ಕೊಲ್ಲಬೇಕು ಎಂದು ಹಂತಕರು ಬಾರ್ ನಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಲೇ ಮಾತನಾಡಿಕೊಂಡಿದ್ದರು.
ಬಿಕ್ಲು ಶಿವನ ಹತ್ಯೆಯ ದಿನ ಹಂತಕರ ಗ್ಯಾಂಗ್ ಒಂದು ಕಡೆ ಸೇರಿತ್ತು. ಕಿರಣ್, ಅರುಣ್, ನವೀನ್ ಸುಪಾರಿ ಪಡೆದಿದ್ದ ನಾಲ್ವರು ವಿಮಲ್, ರಿಕ್ಕಿ ಸ್ಯಾಮುವೆಲ್ ಮಾಡಿದ್ದ ಫುಲ್ ಪಾರ್ಟಿಯಲ್ಲಿ ಸೇರಿದ್ದರು. ರಾಮಮೂರ್ತಿ ನಗರದಲ್ಲಿ ಪಾರ್ಟಿ ಮಾಡುತ್ತಾ ಇವರೆಲ್ಲರೂ ಪ್ಲಾನ್ ಮಾಡಿದ್ದಾರೆ. ಹತ್ಯೆಗೆ ಮೊದಲು ಸ್ಯಾಮುವೆಲ್ ನಿಖರವಾದ ಮಾಹಿತಿ ನೀಡಿದ್ದ. ಸ್ಯಾಮೂವೆಲ್ ಮಾಹಿತಿ ಆಧರಿಸಿ ಗ್ಯಾಂಗ್ ಎಂಟ್ರಿ ಕೊಟ್ಟಿದೆ.ಪುಲಕೇಶಿ ನಗರದಲ್ಲಿ ಭೀಕರವಾಗಿ ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದರು. ಮನೆಯ ಸಮೀಪವೇ ಲಾಂಗು ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ಬಿಕ್ಲು ಶಿವನನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.