ಸೋಮವಾರಪೇಟೆ : ಮದುವೆ ಊಟದಲ್ಲಿ ಸಿಹಿ ತಿಂಡಿ ನೀಡಿಲ್ಲ ಎಂಬ ಕಾರಣಕ್ಕೆ ಮದುವೆಯನ್ನು ರದ್ದು ಮಾಡಿರುವ ಘಟನೆ ಕೊಡಗಿನ ಸೋಮವಾರಪೇಟೆಯ ಕಲ್ಯಾಣಮಂಟಪದಲ್ಲಿ ನಡೆದಿದೆ.
ಮದುವೆ ಹಿಂದಿನ ದಿನದ ರಾತ್ರಿಯ ಊಟಕ್ಕೆ ಸಿಹಿ ತಿಂಡಿ ನೀಡಿಲ್ಲ ಎಂಬ ಕಾರಣಕ್ಕೆ ಮದುವೆಯನ್ನೇ ರದ್ದು ಮಾಡಲಾಗಿದೆ. ಹಾನಗಲ್ಲು ಗ್ರಾಮದ ಯುವತಿಯ ವಿವಾಹ ತುಮಕೂರು ಜಿಲ್ಲೆಯ ಯುವಕನೊಂದಿಗೆ ನಿಶ್ಚಯವಾಗಿತ್ತು. ಊಟದಲ್ಲಿ ಸಿಹಿ ತಿಂಡಿ ಇಲ್ಲ ಎಂಬ ಕಾರಣಕ್ಕೆ ಎರಡೂ ಕಡೆಯವರ ಮಧ್ಯೆ ಜಗಳ ನಡೆದಿದೆ. ಬಳಿಕ ಮದುವೆಯೇ ಬೇಡ ಎಂದು ವರ ಉಂಗುರ ಬಿಚ್ಚಿ ಕೊಟ್ಟಿದ್ದ.
ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು. ಆದರೆ ಯುವಕ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ ಈ ಘಟನೆಯಿಂದ ಬೇಸತ್ತ ಯುವತಿ ನನಗೆ ಈ ಮದುವೆಯೇ ಬೇಡ ಎಂದು ಹೇಳಿದ್ದಾಳೆ ಇದರಿಂದಾಗಿ ಮದುವೆ ಮುರಿದು ಬಿದ್ದಿದೆ.