ಬೆಂಗಳೂರು: ತುಮಕೂರು ಬಳಿಯಲ್ಲಿ ಅಗ್ನಿ ಅವಘಡ ಸಂಭವಿಸಿದಂತ ಗೋದಾಮು ತಮ್ಮ ಒಡೆತನದಲ್ಲಿಲ್ಲ. ಅದು ಟೋಲ್ ಲಾಜಿಸ್ಟಿಕ್ಸ್ ಎಂಬ ಸಂಸ್ಥೆಗೆ ಸೇರಿದ್ದು. ಆದರೇ ಅದು ಥರ್ಡ್ ಪಾರ್ಟಿ ಗೋದಾಮು ಎಂಬುದಾಗಿ ಶೆಲ್ ಕಂಪನಿ ದೃಢಪಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕಂಪನಿಯು, ಶೆಲ್ ಕಂಪನಿಯು ಕರ್ನಾಟಕದ ತುಮಕೂರು ಹೆದ್ದಾರಿಯಲ್ಲಿರುವ ತನ್ನ ಥರ್ಡ್ ಪಾರ್ಟಿ ಗೋದಾಮಿನಲ್ಲಿ ಬೆಂಕಿ ಅನಾಹುತ ಸಂಭವಿಸಿರುವುದನ್ನು ದೃಢಪಡಿಸಿದೆ. ಈ ಗೋದಾಮನ್ನು ಟೋಲ್ ಲಾಜಿಸ್ಟಿಕ್ಸ್ ಎಂಬ ಸಂಸ್ಥೆ ನಿರ್ವಹಿಸುತ್ತಿದೆ. ಈ ಗೋದಾಮು ಶೆಲ್ ಕಂಪನಿಯ ಒಡೆತನದಲ್ಲಿ ಇಲ್ಲ ಅಥವಾ ಶೆಲ್ ಕಂಪನಿಯು ಈ ಗೋದಾಮನ್ನು ನಿರ್ವಹಿಸುತ್ತಿರಲಿಲ್ಲ ಎಂಬುದನ್ನು ಕಂಪನಿಯು ಸ್ಪಷ್ಟ ಪಡಿಸಿದ್ದು, ಈ ಗೋದಾಮಿನಲ್ಲಿ ಲೂಬ್ರಿಕೆಂಟ್ ಉತ್ಪನ್ನಗಳ ಸಂಗ್ರಹಣೆ ಮಾಡಲಾಗುತ್ತಿತ್ತು ಎಂಬುದಾಗಿ ತಿಳಿಸಿದೆ.
ಈ ಘಟನೆಯಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂಬುದಾಗಿ ವರದಿಯು ನಮಗೆ ತಿಳಿಸಿದೆ. ತುರ್ತು ಸೇವಾ ವ್ಯವಸ್ಥೆ ಸ್ಥಳದಲ್ಲಿ ಲಭ್ಯವಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರುವ ಎಲ್ಲಾ ಪ್ರಯತ್ನಗಳು ಭರದಿಂದ ಸಾಗುತ್ತಿದೆ ಎಂಬುದಾಗಿ ಹೇಳಿದೆ.
ನಮ್ಮ ಉದ್ಯೋಗಿಗಳು, ಪಾಲುದಾರರು ಮತ್ತು ಸುತ್ತಮುತ್ತಲಿನ ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಈ ಘಟನೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಮತ್ತು ಈ ಪ್ರದೇಶವನ್ನು ಸುರಕ್ಷಿತಗೊಳಿಸಲು ನಾವು ಟೋಲ್ ಲಾಜಿಸ್ಟಿಕ್ಸ್ ಮತ್ತು ಸ್ಥಳೀಯ ಅಧಿಕಾರಿಗಳ ಜೊತೆ ಕೆಲಸ ಮಾಡುತ್ತಿದ್ದೇವೆ. ಬೆಂಕಿ ಅಪಘಾತಕ್ಕೆ ಕಾರಣ ಮತ್ತು ಬೆಂಕಿ ಅಪಘಾತದ ವ್ಯಾಪ್ತಿಯನ್ನು ತಿಳಿಯುವ ಪ್ರಯತ್ನ ಜಾರಿಯಲ್ಲಿದೆ ಎಂದಿದೆ.
ಪರಿಸ್ಥಿತಿಯನ್ನು ನಾವು ಹತ್ತಿರದಿಂದ ನಿಗಾವಹಿಸುತ್ತಿದ್ದೇವೆ ಮತ್ತು ಹೆಚ್ಚಿನ ಮಾಹಿತಿ ಲಭ್ಯವಾದಂತೆ ಈ ಕುರಿತು ಮಾಹಿತಿ ನೀಡುವುದಾಗಿ ಎಂದು ಹೇಳಿದೆ.
ಆಪರೇಷನ್ ಸಿಂಧೂರ್ ಸೇನೆಯ ಅಭಿಯಾನವಲ್ಲ, ಭಾರತದ ನೀತಿ, ನಿಯತ್ತು ಆಗಿದೆ: ಪ್ರಧಾನಿ ಮೋದಿ
ಆಪರೇಷನ್ ಕೆಲ್ಲರ್: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ಎನ್ ಕೌಂಟರ್ ಗೆ ಮೂವರು ಉಗ್ರರು ಬಲಿ