ಬೆಂಗಳೂರು: ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಶಿಷ್ಟಾಚಾರದ ಗಲಾಟೆ ಬರೀ ನಾಟಕವಾಗಿದೆ. ತಕರಾರು ತೆಗೆಯಿರಿ ಅಂತ ಸಿದ್ಧರಾಮಯ್ಯಗೆ ಯಡಿಯೂರಪ್ಪ ಹೇಳಿದ್ದರು. ಸೇತುವೆ ಉದ್ಘಾಟನೆಗೆ ಬರಬೇಡಿ ತಕರಾರು ತೆಗೆಯಿರಿ ಅಂತಾ ಹೇಳಿದ್ದರು. ನೀವು ಬಂದರೆ ವಿಜಯೇಂದ್ರ ಕುರ್ಚಿ ಹೋಗುತ್ತೆ ಬರಬೇಡಿ ಎಂದಿದ್ದರು ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜಕೀಯವಾಗಿ ಕುಮಾರ್ ಬಂಗಾರಪ್ಪ ಅವರನ್ನು ಮುಗಿಸಲು ಬಿಎಸ್ ಯಡಿಯೂರಪ್ಪ ಯತ್ನಿಸಿದ್ದಾರೆ ಎಂಬುದಾಗಿ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಸಿದ್ಧರಾಮಯ್ಯ ಹೇಳಿರುವುದರಲ್ಲಿ ಏನೂ ತಪ್ಪಿಲ್ಲ. ಶಿವಮೊಗ್ಗದಲ್ಲಿ ಬಿಎಸ್ ಯಡಿಯೂರಪ್ಪ ಮಕ್ಕಳು ಬಿಟ್ಟರೆ ಬೇರೆ ಯಾರೂ ಬೆಳೆಯಬಾರದು. ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ ಯಾರೂ ಬೆಳೆಯಬಾರದು. ಕುಮಾರ್ ಬಂಗಾರಪ್ಪ ಸ್ವಲ್ಪ ಹೋರಾಟ ಮಾಡಿದ್ದಕ್ಕೆ ರಾಘವೇಂದ್ರ ಗೆದ್ರು. ಇಲ್ಲದಿದ್ದರೇ ಈ ಸಲ ಬಿವೈ ರಾಘವೇಂದ್ರ ಸೋಲುತ್ತಿದ್ದರು ಎಂದರು.
ಸಿದ್ಧರಾಮಯ್ಯ, ಯಡಿಯೂರಪ್ಪ ನಡುವೆ ದೊಡ್ಡ ಅಡ್ಜೆಸ್ಟ್ ಮೆಂಟ್ ಇದೆ. ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಪರ ಬಿಎಸ್ ವೈ ಭಾಷಣ ಮಾಡದೇ ಇಳಿದರು. ಸಿದ್ಧರಾಮಯ್ಯ ಏನು ಉದ್ಧಾರ ಮಾಡಿದ್ದಾರೆ ಅಂತಾ ಅಂದುಕೊಂಡಿದ್ದೀರಾ? ಇವೆಲ್ಲ ಅಡ್ಜಸ್ಟ್ ಮೆಟ್ ಗಿರಾಕಿಗಳು ಎಂಬುದಾಗಿ ವಾಗ್ಧಾಳಿ ನಡೆಸಿದರು.
ಕಾಂಗ್ರೆಸ್ ನಲ್ಲಿ ಸಿಎಂ ಸಿದ್ಧರಾಮಯ್ಯ ಮಗ ಯತೀಂದ್ರ ಉತ್ತರಾಧಿಕಾರಿ. ಬಿಜೆಪಿಯಲ್ಲಿ ಯಡಿಯೂರಪ್ಪ ಮಗ ವಿಜಯೇಂದ್ರ ಉತ್ತರಾಧಿಕಾರಿ. ಇವರಿಬ್ಬರ ಉತ್ತರಾಧಿಕಾರಿಗಳ ಸಲುವಾಗಿ ನಾವೆಲ್ಲ ಬಡಿದಾಡಬೇಕು ಎಂದರು.
LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!