ಬೆಂಗಳೂರು : ಈಗಾಗಲೇ ರಾಜು ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ ಅಲ್ಲದೆ ಇಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರು ಈವರೆಗೆ ಒಟ್ಟು 500 ಕೋಟಿ ಪ್ರಯಾಣ ಮಾಡಿದರು. 500ನೇ ಕೋಟಿಯ ಟಿಕೆಟ್ ಅನ್ನು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ವಿತರಣೆ ಮಾಡಿದರು.
ಇದೀಗ ಸಾರಿಗೆ ಇಲಾಖೆ ಕೆಎಸ್.ಆರ್.ಟಿ.ಸಿ ಲಗೇಜ್ ರೂಲ್ಸ್ ನಲ್ಲಿ ಒಂದಿಷ್ಟು ಹೊಸ ಮಾರ್ಪಾಡು ಮಾಡಿದೆ. ದೂರದೂರಿಗೆ ಸರ್ಕಾರಿ ಬಸ್ಸುಗಳಲ್ಲಿ ತೆರಳುವ ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ಇದೀಗ ಪ್ರಯಾಣಿಕರ ಜೊತೆಗೆ ಪ್ರಾಣಿ ಪಕ್ಷಿ ಸಾಗಿಸಲೂ ಅವಕಾಶ ನೀಡಿ ಸಾರಿಗೆ ಇಲಾಖೆ ಅವಕಾಶ ಮಾಡಿದೆ.
ಹೌದು ನಿರ್ದಿಷ್ಟ ಹಣ ಪಾವತಿಸಿದರೆ ಪ್ರಾಣಿ ಪಕ್ಷಿ, ಟಯರ್, ಟ್ಯೂಬ್, ಫ್ರಿಡ್ಜ್, ವಾಷಿಂಗ್ ಮಿಷಿನ್ ಸಾಗಿಸುವುದಕ್ಕೂ ಕೂಡ ಸಾರಿಗೆ ಇಲಾಖೆ ಅವಕಾಶ ಮಾಡಿದೆ. 30 ಕೆಜಿಯವರೆಗೆ ಯಾವುದೇ ಹಣ ಪಾವತಿ ಮಾಡುವಂತಿಲ್ಲ. ಅದಕ್ಕಿಂತ ಮೇಲಿನ ಲಗೇಜ್ ಗೆ ಪ್ರಯಾಣಿಕರು ಹಣ ಪಾವತಿ ಮಾಡಲೇಬೇಕಿದೆ. 40 ಕೆಜಿ ತೂಕವಿರುವ ವಾಷಿಂಗ್ ಮಿಷಿನ್, ಫ್ರಿಡ್ಜ್ KSRTC ಬಸ್ ನಲ್ಲಿ ಸಾಗಿಸಬಹುದಾಗಿದೆ.
ಇನ್ನು, 25 ಕೆಜಿ ತೂಕದ ಖಾಲಿ ಕಂಟೈನರ್ ನಲ್ಲಿ ಸಾಗಿಸಲೂ ಅವಕಾಶ ಒದಗಿಸಿದ್ದು, ಕಬ್ಬಿಣ ಪೈಪ್ ಮೋಟಾರ್ ಗಳನ್ನೂ ಬಸ್ ನಲ್ಲಿ ಸಾಗಿಸಬಹುದು. ಮೊಲ, ನಾಯಿ ಮರಿ, ಬೆಕ್ಕು, ಪಕ್ಷಿಯನ್ನೂ ಕೆಎಸ್. ಆರ್. ಟಿ. ಸಿ ಬಸ್ಸಿನಲ್ಲಿ ಸಾಗಿಸಬಹುದು. ಲಗೇಜ್ ಅನ್ನ ಸರಿಯಾಗಿ ತೂಕ ಮಾಡಿಸಿಕೊಂಡು ಬರಬೇಕು. ಯಂತ್ರದ ತೂಕವಿಲ್ಲದಿದ್ದರೆ ಅಂದಾಜು ತೂಕದ ಲಗೇಜ್ ಅನ್ನು ಪರಿಗಣಿಸಬೇಕು. ವಯಸ್ಕರು 30 ಕೆಜಿ, ಮಕ್ಕಳು 15 ಕೆಜಿ ತೂಕದ ಲಗ್ಗೇಜ್ ಬಸ್ಸಿನಲ್ಲಿ ಕೊಂಡೊಯ್ಯಬಹುದೆಂದು ಸಾರಿಗೆ ಇಲಾಖೆ ಹೇಳಿದೆ.