ಬೆಂಗಳೂರು: ಕನ್ನಡದ ಸುಪ್ರಸಿದ್ದ ಆಂಕರ್ ಅನುಶ್ರೀ ವೆಡ್ಸ್ ರೋಷನ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್.28ರಂದು ಬೆಂಗಳೂರಲ್ಲಿ ಮದುವೆ ನಡೆಯಲಿದೆ.
ಅನುಶ್ರೀ ಅವರ ಆಮಂತ್ರಣ ಪತ್ರಿಕೆ ರಿಲೀವ್ ಆಗಿದ್ದು, ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ ಏಕಾಂಗಿ ನಿರೂಪಣೆಯ ನಂತ್ರ ಅರ್ಧಾಂಗಿಯಾಗುವ ಹೊಸ ಮನ್ವಂತರಕ್ಕೆ ಸಮಯ ಬಂದಿದೆ. ಅನುಶ್ರೀ ವೆಡ್ಸ್ ರೋಷನ್ ಮಹೂರ್ತವು ದಿನಾಂಕ 28-08-2025ರ ಗುರುವಾರ ಬೆಳಗ್ಗೆ 10.56ಕ್ಕೆ ನಡೆಯಲಿದೆ ಎಂಬುದಾಗಿ ತಿಳಿಸಿದ್ದಾರೆ.
ಅನುಶ್ರೀ ವೆಡ್ ರೋಷನ್ ಅವರ ಮದುವೆಯು ಆಗಸ್ಟ್.28ರಂದು ಬೆಂಗಳೂರಿನ ಕಗ್ಗಲಿಪುರದ ತಿಟ್ಟೆಹಳ್ಳಿಯ ಸಂಭ್ರಮ ಬೈ ಸ್ಪಾನ್ ಲೈನ್ಸ್ ಸ್ಟುಡಿಯೋಸ್ ನಲ್ಲಿ ನೆರವೇರಲಿದೆ.
ಒಟ್ಟಾರೆಯಾಗಿ ಆಂಕರ್ ಅನುಶ್ರೀ ಅವರ ಮದುವೆಯೂ ಇದೇ ಆಗಸ್ಟ್.28ರಂದು ಬೆಂಗಳೂರಿನ ಕಗ್ಗಲಿಪುರ ಸಮೀಪದ ತಿಟ್ಟೆಹಳ್ಳಿಯಲ್ಲಿ ನೆರವೇರಲಿದೆ. ಅವರ ವಿವಾಹಕ್ಕೆ ಸಿನಿ ರಂಗದ ಗಣ್ಯರು, ಸ್ನೇಹಿತರು ಸೇರಿದಂತೆ ಗಣ್ಯಾತಿ ಗಣ್ಯರು ಭಾಗಿಯಾಗಲಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಗಳ ಕೋರ್ಟ್ ಕೇಸ್ ವಿಲೇಗೆ 7 ಜನ ವಿಶೇಷ ಜಿಲ್ಲಾಧಿಕಾರಿಗಳ ನೇಮಕ
ಅಕ್ರಮ ಗಣಿಗಾರಿಕೆ ವರದಿಗೆ ಸಚಿವ ಸಂಪುಟ ಅನುಮೋದನೆ: ವರದಿಯಲ್ಲಿ ಏನಿದೆ ಗೊತ್ತಾ?