ಧಾರವಾಡ : ಸಿದ್ದರಾಮಯ್ಯ ಜೀವನಪೂರ್ತಿ ರಾಜಕೀಯದಲ್ಲಿರಬೇಕು ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಆಗಬಾರದು. ಸಿದ್ದರಾಮಯ್ಯ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಬೇಕು ಸಿಎಂ ಸಿದ್ದರಾಮಯ್ಯ ಅವರ ಅವಶ್ಯಕತೆ ರಾಜ್ಯಕ್ಕೆ ಬಹಳವಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.
ಕಲಘಟಗಿಯಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಸಹಜ ಪ್ರಕ್ರಿಯೆ ಅದರಲ್ಲಿ ಯಾವುದೇ ಕ್ರಾಂತಿ ಇಲ್ಲ. ಪುನಾರಚನೆ ಅಂದರೆ ಕೆಲವರನ್ನು ತೆಗೆಯಬೇಕು ಮತ್ತೆ ಕೆಲವರನ್ನು ಸೇರಿಸಿಕೊಳ್ಳಬೇಕು. ಎಲ್ಲರೂ ಎಲ್ಲಾ ತ್ಯಾಗಕ್ಕೂ ಸಿದ್ಧರಿರಬೇಕು ಸಿಎಂ ಹೈಕಮಾಂಡ್ ನಿರ್ಧಾರ ಅಂದಮೇಲೆ ಅದರಲ್ಲಿ ಗೊಂದಲ ಎಲ್ಲಿದೆ? ಕೇಂದ್ರ ಸರ್ಕಾರದಲ್ಲಿ ಯಾಕೆ ಬದಲಾವಣೆ ಆಗಬಾರದು? ನಿತಿನ್ ಗಡ್ಕರಿ ಯಾಕೆ ಪ್ರಧಾನಿ ಆಗಬಾರದು?ಎಂದು ಧಾರವಾಡ ಜಿಲ್ಲೆಯ ಕಲಘಟಕಿಯಲ್ಲಿ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದರು.








