ಬೆಂಗಳೂರು: ರಾಜ್ಯ ಸರ್ಕಾರದಿಂದ ನಗಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರ ಹುದ್ದೆಗೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ಸೂಚನೆಯನ್ನು ಕೂಡ ನೀಡಿದೆ.
ಈ ಕುರಿತಂತೆ ಅಧಿಸೂಚನೆಯನ್ನು ಹೊರಡಿಸಿರುವಂತ ರಾಜ್ಯ ಸರ್ಕಾರವು, ರಾಜ್ಯದಲ್ಲಿನ 61 ನಗರಸಭೆ, 123 ಪುರಸಭೆ ಸೇರಿದಂತೆ 117 ಪಟ್ಟಣ ಪಂಚಾಯಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿರುವಂತ ಪಟ್ಟಿಯಲ್ಲಿ ನಗರಸಭೆಯಾದಂತ ಅಫಜಲಪುರಕ್ಕೆ ಅಧ್ಯಕ್ಷ ಸ್ಥಾನ ಬಿಸಿಬಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಜನರಲ್, ಆನೇಕಲ್ ಗೆ ಅಧ್ಯಕ್ಷ ಸ್ಥಾನ ಜನರಲ್ ಮಹಿಳೆ, ಉಪಾಧ್ಯಕ್ಷ ಸ್ಥಾನ ಜನರಲ್, ಅಂಕೋಲಾಕ್ಕೆ ಅಧ್ಯಕ್ಷ ಸ್ಥಾನ ಜನರಲ್, ಉಪಾಧ್ಯಕ್ಷ ಸ್ಥಾನ ಜನರಲ್ ಮಹಿಳೆಗೆ ಮೀಸಲಿರಿಸಲಾಗಿದೆ. ಆ ಪಟ್ಟಿ ಈ ಕೆಳಗಿನಂತಿದೆ.
ಇನ್ನೂ ಪುರಸಭೆಯಾಗಿರುವಂತ ಅರಸೀಕೆರೆಗೆ ಅಧ್ಯಕ್ಷರ ಹುದ್ದೆಗೆ ಜನರಲ್, ಉಪಾಧ್ಯಕ್ಷರ ಹುದ್ದೆಯನ್ನು ಎಸ್ಸಿಗೆ, ಬಾಗಲಕೋಟೆಯ ಅಧ್ಯಕ್ಷರ ಹುದ್ದೆ ಜನರಲ್ ಮಹಿಳೆ, ಉಪಾಧ್ಯಕ್ಷರ ಹುದ್ದೆಯನ್ನು ಜನರಲ್, ಬಸವಕಲ್ಯಾಣ ಪುರಸಭೆಯ ಅಧ್ಯಕ್ಷರ ಹುದ್ದೆ ಜನರಲ್, ಉಪಾಧ್ಯಕ್ಷರ ಹುದ್ದೆ ಜನರಲ್ ಮಹಿಳೆಗೆ ಮೀಸಲಿರಿಸಲಾಗಿದೆ. ಆ ಪಟ್ಟಿ ಈ ಕೆಳಗಿನಂತಿದೆ.
ಪಟ್ಟಣ ಪಂಚಾಯ್ತಿಯಾಗಿರುವಂತ ಅಜ್ಜಂಪುರಕ್ಕೆ ಅಧ್ಯಕ್ಷರ ಹುದ್ದೆಗೆ ಬಿಸಿಎ, ಉಪಾಧ್ಯಕ್ಷರ ಸ್ಥಾನಕ್ಕೆ ಎಸ್ಸಿಗೆ ಮೀಸಲಾತಿ ನಿಗದಿ ಮಾಡಿದೆ. ಆನವಟ್ಟಿ ನಗರಸಭೆಯ ಅಧ್ಯಕ್ಷರ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಿರಿಸಲಾಗಿದೆ. ಆ ಪಟ್ಟಿ ಈ ಕೆಳಗಿನಂತಿದೆ.
BREAKING: ಶೀಘ್ರವೇ ಬೆಂಗಳೂರಲ್ಲಿ 2ನೇ ಏರ್ಪೋರ್ಟ್ ನಿರ್ಮಾಣ: ಸಚಿವ ಎಂ.ಬಿ ಪಾಟೀಲ್ | Bengaluru Airport
ನನ್ನ ಆಸ್ತಿ ಲೆಕ್ಕ ಕೇಳ್ತಾ ಇದ್ದೀಯಾ? ಎಲ್ಲಾ ಕೊಡ್ತೀನಿ, ಮೊದಲು ನಿನ್ನ ಸಹೋದರನ ಲೆಕ್ಕ ಕೊಡು: HDKಗೆ ಡಿಕೆಶಿ ಪ್ರಶ್ನೆ