ಶಿವಮೊಗ್ಗ : ಸಾಗರದ ಉಪವಿಭಾಗೀಯ ಆಸ್ಪತ್ರೆ ಎದುರು ವೈದ್ಯಾಧಿಕಾರಿಗಳ ಸಂಘ ಹಾಗೂ ಆರೋಗ್ಯ ಇಲಾಖೆ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದಂತ ಶಿವಮೊಗ್ಗ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ನಾಗೇಂದ್ರಪ್ಪ, ಆರೋಗ್ಯ ಇಲಾಖೆಯ ವೈದ್ಯಸಿಬ್ಬಂದಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಈತನಕ 13 ಸಭೆಗಳನ್ನು ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಒಂದು ಬೇಡಿಕೆಯನ್ನು ಸಹ ಸರ್ಕಾರ ಈತನಕ ಈಡೇರಿಸಿಲ್ಲ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು.
ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ಹಾದಿ ಹಿಡಿಯುವುದು ನಮಗೆ ಅನಿವಾರ್ಯವಾಗಿದೆ. ಸರ್ಕಾರ ತಕ್ಷಣ ನಮ್ಮ ಬೇಡಿಕೆ ಈಡೇರಿಸದೆ ಹೋದಲ್ಲಿ ಮಾ.11ರಿಂದ ನಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಸರ್ಕಾರವೇ ಹೊಣೆಯಾಗಿರುತ್ತದೆ ಎಂಬುದಾಗಿ ಎಚ್ಚರಿಸಿದರು.
ಒಟ್ಟು 14 ಬೇಡಿಕೆಗಳನ್ನು ಮುಂದಿಟ್ಟುಕೊoಡು ನಾವು ಪ್ರತಿಭಟನೆ ನಡೆಸುತ್ತಿದ್ದು ಔಷಧಿ ಪೂರೈಕೆ ಪ್ರಮುಖ ಬೇಡಿಕೆಯಾಗಿದೆ. ಒಟ್ಟು 800 ಔಷಧಿಗಳನ್ನು ಕೊಡಬೇಕಾಗಿದ್ದು ನಮಗೆ ಕೇವಲ 140 ಔಷಧಿಗಳನ್ನು ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಹೊರಗೆ ಔಷಧಿ ಬರೆದು ಕೊಟ್ಟರೆ ನಮಗೆ ನೋಟಿಸ್ ಕೊಡುತ್ತಾರೆ. ಪ್ರತಿದಿನ ರೋಗಿಗಳ ಜೊತೆ ಜಗಳ ಮಾಡಿಕೊಳ್ಳಬೇಕಾದ ಸ್ಥಿತಿ ಸರ್ಕಾರ ನಿರ್ಮಾಣ ಮಾಡಿದೆ. ನಮ್ಮ ಬೇಡಿಕೆಗಳು ಸರ್ಕಾರಕ್ಕೆ ಹೊರೆಯಾಗುವಂತಹದ್ದು ಅಲ್ಲವಾಗಿದೆ. ತಕ್ಷಣ ಸರ್ಕಾರ ವೈದ್ಯಸಿಬ್ಬಂದಿಗಳ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಶುಶ್ರೂಷ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷೆ ವಿಜಯಮ್ಮ ಮಾತನಾಡಿ, ಈಗಾಗಲೆ 13 ಬಾರಿ ಆರೋಗ್ಯ ಸಚಿವರಿಗೆ, ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇವೆ. ಭೇಟಿ ಮಾಡಿ ಸಮಸ್ಯೆ ಹೇಳಿದ್ದೇವೆ. ಆದರೆ ನಮ್ಮ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ. ಶ್ರುಶೂಷಕಾಧಿಕಾರಿಗಳಿಗೆ ಪದೋನ್ನತಿ ಕೊಡುತ್ತೇವೆ ಎಂದು ಅನೇಕ ಬಾರಿ ಭರವಸೆ ನೀಡಿದ್ದರು. ಆದರೆ ಭರವಸೆಯಾಗಿಯೆ ಉಳಿದಿದೆ. ಆರ್ಥಿಕ ನಷ್ಟವಿಲ್ಲದ ನಮ್ಮ ಬೇಡಿಕೆಯನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಡಾ. ಶ್ರೀನಿವಾಸ್, ಡಾ. ಸುರೇಶ್, ಡಾ. ಹರೀಶ್, ಡಾ. ದೇವರಾಜ್, ಡಾ. ಶಾಂತಲಾ, ಡಾ. ಸುಮ, ಡಾ. ಆಶಾ, ಡಾ. ಮಹೇಂದ್ರ, ಡಾ. ಗಜೇಂದ್ರ, ಡಾ. ಗಣೇಶ್, ಲೋಹಿತ್, ಮಾ.ಸ.ನಂಜುoಡಸ್ವಾಮಿ, ಜುಬೇದಾ, ಸಹದೇವ್ ಇನ್ನಿತರರು ಹಾಜರಿದ್ದರು.
ಸರ್ಕಾರಿ ಸೇವೆಯಿಂದ ನಿವೃತ್ತರಾದಾಗ ಜನ ಸೇವೆ ಮಾಡಿದ ಆತ್ಮತೃಪ್ತಿಯಿರಬೇಕು: ಸಾಗರದ ಸ್ತ್ರೀರೋಗ ತಜ್ಞ ಡಾ.ನಾಗೇಂದ್ರಪ್ಪ
ರಾಜ್ಯದ ಜನತೆಗೆ ಸಿಹಿ ಸುದ್ದಿ: ಸದ್ಯಕ್ಕಿಲ್ಲ ವಿದ್ಯುತ್ ದರ ಏರಿಕೆ; ಸಿಎಂ ಸ್ಪಷ್ಟನೆ








