ಬೆಂಗಳೂರು: ಬೆಳಗಾವಿಯ ಕಿತ್ತೂರು ಕೋಟೆ ಆವರಣದಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 30 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕಿತ್ತೂರು ಕೋಟೆ ಆವರಣದಲ್ಲಿ ರೂ.30 ಕೋಟಿ ವೆಚ್ಚದ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕಿತ್ತೂರು ಕೋಟೆ ಆವರಣದಲ್ಲಿ ರೂ.30 ಕೋಟಿ ವೆಚ್ಚದ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.#CabinetDecisions pic.twitter.com/BmqeUhXKhR
— DIPR Karnataka (@KarnatakaVarthe) July 17, 2025
ಗ್ರೇಟರ್ ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ “ಎ” ಮತ್ತು “ಬಿ” ಖಾತಾ ನೀಡುವುದನ್ನು ನಿಯಂತ್ರಿಸಲು ಸಚಿವ ಸಂಪುಟ ನಿರ್ಣಯವನ್ನು ಕೈಗೊಂಡಿತು.
ಮಲಪ್ರಭಾ ನದಿಗೆ ಅಡ್ಡಲಾಗಿರುವ ಮುನವಳ್ಳಿ ಆರ್‌ಬಿಸಿಗೆ ನವಿಲುತೀರ್ಥ ಆಣೆಕಟ್ಟಿನ ಚೈನೇಜ್. 0+098 ರಿಂದ ಚೈನೇಜ್ 0+433 ವರೆಗೆ ಅಕ್ವಾಡಕ್ಟ್ ಅನ್ನು ಎಂಎಸ್ ಪೈಪ್‌ನೊಂದಿಗೆ ನಿರ್ಮಿಸುವ ಕಾಮಗಾರಿಯನ್ನು ರೂ.19.05 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಅಂತರ್ಜಲ ಬಳಕೆಗೆ ನಿರಾಕ್ಷೇಪಣಾ ನೀಡುವ ಸಂಬAಧ ಕೇಂದ್ರಿಯ ಅಂತರ್ಜಲ ಪ್ರಾಧಿಕಾರ ಇವರು ಹೊರಡಿಸಿರುವ ಮಾರ್ಗಸೂಚಿಯನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿತು.
BIG NEWS: ಮೈಸೂರು ವಿವಿಯಲ್ಲಿ ಡಾ.ಬಿಆರ್ ಅಂಬೇಡ್ಕರ್ ಸಂವಿಧಾನ ಪೀಠ ಸ್ಥಾಪನೆ: ರಾಜ್ಯ ಸಚಿವ ಸಂಪುಟದ ತೀರ್ಮಾನ
LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!