ದಾವಣಗೆರೆ : ಅಧಿಕಾರ ಹಂಚಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಹೇಳಿಕೆ ನೀಡಿದ್ದು ಅಧಿಕಾರ ಹಂಚಿಕೆಯ ನಿರ್ಧಾರದ ಕುರಿತು ಹೈಕಮಾಂಡ್ ಸ್ಪಷ್ಟನೆ ನೀಡಬೇಕು. ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲೇಬೇಕು ಎಂಬ ನಿಲುವು ನನ್ನದಾಗಿದೆ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲೇ ಬೇಕಾ ಎಂಬ ನಿಲುವು ಇದೆ ನಾನು ಅವರ ಹೆಸರಿನಿಂದಲೇ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ ಆದರೆ ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ಕೂಡಲೇ ಸ್ಪಷ್ಟನೆ ನೀಡಬೇಕು ಅಧಿವೇಶನ ಮುಕ್ತಾಯವಾಗಲಿದೆ ಎರಡು ದಿನಗಳಲ್ಲಿ ದೆಹಲಿಗೆ ಕರೆಯಬಹುದು.
ಡಿಸೆಂಬರ್ ಆಯ್ತು, ಸಂಕ್ರಾಂತಿ ಆಯ್ತು, ಈಗ ಬಜೆಟ್ ಬರುತ್ತಿದೆ. ಹೀಗೆ ನಾವೇ ಪದೇ ಪದೇ ಹೇಳಿಕೆ ನೀಡುವುದು ಸೂಕ್ತ ಅಲ್ಲ. ಸಿದ್ದರಾಮಯ್ಯರೆ ಸಿಎಂ ಆಗಿ ಮುಂದುವರೆಯುತ್ತಾರೆ ಅಂತ ಹೇಳಿದರೆ ಸ್ವಾಗತಿಸುತ್ತೇವೆ ಎಂದು ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆ ನೀಡಿದರು.








