ಬೆಂಗಳೂರು : ಧರ್ಮಸ್ಥಳದಲ್ಲಿ ನಿಗೂಢವಾಗಿ ನಡೆದಿರುವ ಕೊಳೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ಹೊರಡಿಸಿತು ಇದೀಗ ಇದೆ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದು ಸದ್ಯದಲ್ಲೇ ಧರ್ಮಸ್ಥಳಕ್ಕೆ ಎಸ್ಐಟಿ ಭೇಟಿ ನೀಡಲಿದ್ದು ಈ ಒಂದು ತನಿಕಾ ತಂಡದಿಂದ ಯಾವುದೇ ಅಧಿಕಾರಿ ಹೊರಗೆ ಉಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೃತದೇಹ ವಿಲೇವಾರಿ ಪ್ರಕರಣ ಸಂಬಂಧ ತನಿಖೆಗೆ ಧರ್ಮಸ್ಥಳಕ್ಕೆ ಹೋಗಲು ಎಸ್ಐಟಿ ತಂಡಕ್ಕೆ ಸೂಚನೆ ನೀಡಿದ್ದೇವೆ. ಸದ್ಯದಲ್ಲೇ ಧರ್ಮಸ್ಥಳಕ್ಕೆ ಹೋಗಿ ಎಸ್ಐಟಿ ತನಿಖೆ ಶುರು ಮಾಡಲಿದೆ. ಎಸ್ಐಟಿ ತಂಡದಿಂದ ಯಾವ ಅಧಿಕಾರಿಯೂ ಹೊರಗುಳಿಯಲ್ಲ. ಹೊರಗೆ ಉಳಿಯೋದಾದ್ರೆ ನಮಗೆ ತಿಳಿಸಲಿ. ಆ ನಂತರ ಅದರ ಬಗ್ಗೆ ನಿರ್ಧಾರ ಮಾಡ್ತೇವೆ ಎಂದರು.
ಎಸ್ಐಟಿ ತನಿಖೆಗೆ ಬಿಜೆಪಿಯವರಿಂದ ಯಾಕೆ ಆಕ್ಷೇಪ?. ಈಗಿನಿಂದ್ಲೇ ಏನೇನೋ ಫ್ರೇಮ್ ಮಾಡ್ತಿದ್ದಾರೆ. ರಾಜಕೀಯ ಉದ್ದೇಶವಿದೆ ಅಂತ ಯಾಕೆ ಹೇಳ್ತಾರೆ. ಎಸ್ಐಟಿ ತನಿಖೆಗೆ ಯಾಕೆ ಅವರ ವಿರೋಧ. ಇದನ್ನು ನೋಡಿದ್ರೆ ಅವರ ಮನಸ್ಸಲ್ಲಿ ಏನೋ ಇರಬಹುದು ಎಂದು ಬಿಜೆಪಿಯವರ ಆಕ್ಷೇಪಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಕಿಡಿ ಕಾರಿದರು.