ಮಹಾಭಾರತದಲ್ಲಿ ‘ಸಹದೇವ’ ಪಾಂಡವ ರಲ್ಲಿ ನಾಲ್ಕನೇಯವನು. ಪಾಂಡುರಾಜನ ಪತ್ನಿಯರು, ಕುಂತಿ ಮತ್ತು ಮಾದ್ರಿ. ಋಷಿ ಮುನಿಗಳ ಶಾಪದಿಂದಾಗಿ ಪಾಂಡುರಾಜಗೆ ಮಕ್ಕಳಾಗುವುದಿಲ್ಲ ಎಂದು ತಿಳಿದಾಗ, ಹಿಂದೆ ದುರ್ವಾಸ ಮುನಿಗಳು ಕೊಟ್ಟ ವರ ದಿಂದ ಕುಂತಿಯು ಯುಧಿಷ್ಠಿರ, ಭೀಮ, ಮತ್ತು ಅರ್ಜುನ ಎಂಬ ಮೂರು ಮಕ್ಕ ಳನ್ನು ಪಡೆದು ಇನ್ನೊಂದು ಮಂತ್ರವನ್ನು ಮಾದ್ರಿಗೆ ಅನುಗ್ರಹಿಸುತ್ತಾಳೆ. ಮಾದ್ರಿ ಅಶ್ವಿನಿ ಅವಳಿ ದೇವತೆಗಳನ್ನು ಪ್ರಾರ್ಥಿಸಿ ಆ ದೇವತೆಗಳ ಆಶೀರ್ವಾದದಿಂದ ನಕುಲ ಹಾಗೂ ಸಹದೇವ ಅವಳಿ ಮಕ್ಕಳನ್ನು ಪಡೆದಳು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಪಾಂಡುರಾಜ ಮಾದ್ರಿಯ ಸೌಂದರ್ಯಕ್ಕೆ ಸೋತು ಅವಳ ಜೊತೆ ಬೆರೆಯಲು ಪ್ರಯ ತ್ನಿಸಿ ಪ್ರಾಣ ಕಳೆದುಕೊಳ್ಳುತ್ತಾನೆ. ಮಾದ್ರಿ ತನ್ನ ಮಕ್ಕಳನ್ನು ಕುಂತಿಗೆ ಒಪ್ಪಿಸಿ, ಪತಿಯ ಜೊತೆ ಸಹಗಮನ ಹೋಗುತ್ತಾಳೆ. ನಂತರ ನಕುಲ- ಸಹದೇವ ಕುಂತಿಯ ಪ್ರೀತಿಯ, ಆರೈಕೆಯಲ್ಲಿ ಬೆಳೆದರು. ಸಹದೇವ ಪಾಂಡವರಲ್ಲಿ ಕೊನೆಯವನು. ಶಸ್ತ್ರ ಶಾಸ್ತ್ರ ದಲ್ಲಿ ನಿಪುಣನಾಗಿದ್ದು ಉಳಿದ ಪಾಂಡವ ರಂತೆ ಇವನೂ ಬಲಶಾಲಿಯೇ. ತಾಯಿ ಕುಂತಿ ಸಹದೇವನನ್ನು ಪುಟ್ಟ ಮಗುವಿ ನಂತೆ ನೋಡಿಕೊಂಡಳು. ಸಭೆಯಲ್ಲಿ ಕೂರುವಾಗಲೂ ತಾಯಿ ಕುಂತಿಯೊಂದಿಗೆ ಏಕಾಸನವನ್ನೇ ಹಂಚಿಕೊಂಡೇ ಕೊರುತಿದ್ದ ಇಷ್ಟೆಲ್ಲಾ ಇದ್ದರೂ ಕೊನೆಯವನೆಂದು, ಇವನಿಗಿದ್ದ ಅದ್ಭುತ ಶಕ್ತಿಯನ್ನೆಲ್ಲ ಕಡೆಗಣಿ ಸುವಷ್ಟು, ಎಲ್ಲರಿಂದಲೂ ಮುದ್ದು,ಪ್ರೀತಿ ಸಿಕ್ಕಿಬಿಟ್ಟಿತು. ಉಳಿದ ಸಹೋದರರಿಗೆ ಸಿಕ್ಕಷ್ಟು ಖ್ಯಾತಿ, ಪ್ರಾಮುಖ್ಯತೆ, ಗೌರವ ಇವು ನಕುಲ-ಸಹದೇವ ಇಬ್ಬರಿಗೂ ಕಡೆ ವರೆಗೂ ಸಿಗಲಿಲ್ಲ. ಎಷ್ಟೇ ದೊಡ್ಡವನಾ ದರೂ ಚಿಕ್ಕ ಬಾಲಕನಂತೆ ಕುಂತಿ ನೋಡಿ ಕೊಂಡಳು. ಈಗ ಸಹದೇವನಿಗೆ ತನ್ನ ಬಗ್ಗೆ ತನಗೆ ನಾಚಿಕೆಯಾಗುತ್ತಿತ್ತು. ವಿವೇಕತನ, ಲೋಕಜ್ಞಾನ ಮತ್ತು ಬುದ್ಧಿವಂತಿಕೆ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಪುಣತೆ ಪಡೆದಿ ದ್ದನು. ಯುದ್ಧವನ್ನು ತಪ್ಪಿಸಬಹುದಾಗಿತ್ತು. ಆದರೆ ಅದು ಸಾಧ್ಯವಿರಲಿಲ್ಲ. ಕಾರಣ ಅಂದಿನ ಘಟನೆ ಕಣ್ಣ ಮುಂದೆ ಒಂದೊಂ ದಾಗಿ ಬರತೊಡಗಿತು.
ಸಹದೇವ, ಖಡ್ಗ ಪ್ರವೀಣನಾಗಿದ್ದು, ಬಿಲ್ವಿ ದ್ಯೆಯಲ್ಲಿ ಗುರಿಕಾರನಾಗಿದ್ದ, ಅವನ ತೋಳು ಮತ್ತು ದೇಹದಲ್ಲಿ ಅಗಾಧವಾದ ಶಕ್ತಿ ಇತ್ತು. ಭುಜಬಲ ಪರಾಕ್ರಮಿ ಉಳಿದ ಸಹೋದರರಲ್ಲಿ ಇಲ್ಲದಂಥ ಶಕ್ತಿ ಇವನಲ್ಲಿ ತ್ತು. ಅಥರ್ವ ವೇದದ ವೈದ್ಯಶಾಸ್ತ್ರ, ಮನ ಶಾಸ್ತ್ರ, ಲೋಹಶಾಸ್ತ್ರ, ಮತ್ತು ಖಗೋಳ ವಿಜ್ಞಾನಗಳ ಅಪಾರ ಜ್ಞಾನವನ್ನು ತಿಳಿದವ ನಾಗಿದ್ದು ವೈದ್ಯ ಚತುರ ನಾಗಿದ್ದ, ಪಶು- ಪ್ರಾಣಿ ಗಳ ಮನಸ್ಸನ್ನು ತಿಳಿಯುವ ಶಕ್ತಿ ಕರಗತವಾಗಿತ್ತು. ಇದರ ಜೊತೆ ಕೆಲವು ಸಿದ್ಧಿಗಳನ್ನು ಪಡೆದುಕೊಂಡಿದ್ದು ಭವಿಷ್ಯದ
ಲ್ಲಿ ಹಿಂದೆ ನಡೆದುದು-ಮುಂದೆ ನಡೆಯು ವುದರ ಜ್ಞಾನವಿತ್ತು. ಆದರೆ ಯಾವುದನ್ನು ನೇರವಾಗಿ ಹೇಳುವಷ್ಟು ಧೈರ್ಯ ಅವನ ಲ್ಲಿ ಇರಲಿಲ್ಲ. ಮತ್ತು ಸಂಕೋಚ ಪ್ರವೃತ್ತಿ ಅವನದಾಗಿತ್ತು. ಪಾಂಡವರು ಅಜ್ಞಾತ ವಾಸದಲ್ಲಿದ್ದಾಗ ವಿರಾಟನ ಆಸ್ಥಾನದ ಗೋಶಾಲೆಯ ಉಸ್ತುವಾರಿಯನ್ನು ‘ತಂತ್ರ ಪಾಲ’ನೆಂಬ ಹೆಸರಿನಿಂದ ನೀರ್ವಹಿದ್ದ. ಆ ಸಂದರ್ಭದಲ್ಲಿ ವಿರಾಟನ ಗೋ ಸಂಪತ್ತು ಹಿಂದೆಂದೂ ಕಾಣದಷ್ಟು ಅಭಿವೃದ್ಧಿಯನ್ನು ಹೊಂದಿತ್ತು. ಚಿಕ್ಕವನು ಎಂಬ ಕಾರಣಕ್ಕಾ ಗಿ ಉಳಿದವರಿಗೆ ಸಿಕ್ಕ ಪ್ರಾಮುಖ್ಯತೆ ಎಂದಿ ಗೂ ಸಿಗಲಿಲ್ಲ. ಅದರ ಬದಲು ಯಥೇಚ್ಛ ವಾದ ಪ್ರೀತಿ, ಕರುಣೆ ಸಿಕ್ಕಿತು.
ಸಹದೇವನಿಗೆ, ದ್ರೌಪತಿಯಿಂದ ‘ಸೃತಸೇ ನಾ’ ಎಂಬ ಮಗನಿದ್ದನು. ಮತ್ತು ಸಹ ದೇವನ ಮಾವ ಮದ್ರದೇಶದ ‘ಶಲ್ಯ’ನ ಸೋದರ ಸಂಬಂಧಿ ‘ದ್ವಿತಿಮಾನ್ಯ’ ಎಂಬು ವನ ಮಗಳು ‘ವಿಜಯ’ಳನ್ನು ವಿವಾಹ ವಾಗಿ ಅವಳಿಂದ ‘ಸುಹೋತ್ರ’ ಎಂಬ ಮಗನನ್ನು ಪಡೆದಿದ್ದನು. ಈ ಇಬ್ಬರು ಮಕ್ಕಳು ಬೆಳೆದು ನಿಂತ ಮೇಲೂ ಇವನ ನ್ನು ಎಲ್ಲರೂ ಚಿಕ್ಕವನೆಂದೇ ಪರಿಗಣಿಸಿ ದ್ದರು. ಎಲ್ಲಾ ಕಾರಣಗಳಿಂದ ಜಗತ್ತಿಗೆ ತನ್ನ ಶಕ್ತಿಯನ್ನು ತೋರಿಸುವ ಅವಕಾಶವೇ ಅವನಿಗೆ ಸಿಗಲಿಲ್ಲ. ಎಲೆಮರೆ ಕಾಯಿ ಯಂತೆ ಉಳಿದುಬಿಟ್ಟ. ಕುಂತಿ ತೋರಿದ ಪ್ರೀತಿ ಇದಕ್ಕೆ ಕಾರಣ ಎಂದುಕೊಂಡರೆ, ಸಾಧ್ಯವಿಲ್ಲ ಆಕೆ ಭೂಮಿ ತೂಕದ ಹೆಣ್ಣು. ತಾನೇ(ಸಹದೇವ) ತಾಯಿಗೆ ಅನ್ಯಾಯ ಮಾಡಿದ ಘಟನೆಗಳನ್ನು ನೆನಪಿಗೆ ತಂದು ಕೊಂಡ.
ಅಂದು ಕೌರವರ ಅರಮನೆ ಪ್ರಾಂಗಣ ದಲ್ಲಿ ‘ಶಸ್ತ್ರವಿದ್ಯಾ’ ಪರೀಕ್ಷೆ ನಡೆಯುತ್ತಿ ರುವಾಗ, ಕರ್ಣ ಬಂದನು. ಅವನನ್ನು ನೋಡುತ್ತಿದ್ದಂತೆ ಹಲವಾರು ಸೂಚನೆಗಳು ಕಂಡು ಬಂದವು. ಅದು ಏನೆಂದು ಸ್ಪಷ್ಟ ವಾಗಿ ಅರ್ಥವಾಗಿರಲಿಲ್ಲ. ಅವನನ್ನು ‘ಸೂತಪುತ್ರ’ ಎಂದು ಸಭೆಯಲ್ಲಿ ಅವಹೇ ಳನ ಮಾಡುತ್ತಿದ್ದಾಗ, ಇವನ ಮನಸ್ಸು ಬೇರೆ ಏನೋ ಹೇಳುತ್ತಿತ್ತು. ಆದರೆ ಸರಿ ಯಾಗಿ ಅರ್ಥೈಸಿಕೊಳ್ಳಲು ಆಗಲಿಲ್ಲ. ಮುಂದೊಂದು ದಿನ ಯುಧಿಷ್ಠಿರನು ‘ರಾಜಸೂಯ’ ಯಾಗ ಮಾಡಿದಾಗ ಅಲ್ಲಿ ಬಂದಿದ್ದ ಕರ್ಣನಿಗೆ ಆತೀಥ್ಯದ ವ್ಯವಸ್ಥೆ ಯನ್ನು ಸಹದೇವನೇ ಮಾಡುತ್ತಿದ್ದಾಗ, ಕರ್ಣನ ಕಣ್ಣಲ್ಲಿ ಕಣ್ಣಿಟ್ಟು ನೋಡಿದನು. ಆಗ ಅವನಿಗೆ ತನ್ನ ತಾಯಿ ಕುಂತಿಯ ಮೊದಲ ಪುತ್ರ ಎಂದು ತಿಳಿಯಿತು. ಅವನು ತನ್ನನ್ನು ಸೇರಿದಂತೆ ಐದು ಜನ ಅಗ್ರಜರಿಗೂ ಅಣ್ಣನಾಗಬೇಕು. ಆ ಕ್ಷಣ ದಿಂದ ಕರ್ಣನ ಮೇಲೆ ಪ್ರೀತಿ ಹುಟ್ಟಿತು. ಗೌರವ ಕೊಡಲು ಶುರುಮಾಡಿದ. ಈ ವಿಷಯವನ್ನು ತನ್ನ ತಾಯಿ ಕುಂತಿಗಾಗಲಿ, ಕರ್ಣನಿಗಾಗಲಿ, ಹಿರಿಯಣ್ಣ ಯುಧಿಷ್ಟರ ನಿಗಾಗಲಿ ಹೇಳಲಿಲ್ಲ.ತನ್ನ ಹುಟ್ಟಿನ ಬಗ್ಗೆ ಹುಡುಕಾಡುತ್ತಿದ್ದ ಕರ್ಣ ಒಂದು ವೇಳೆ ಕೇಳಿದ್ದರೆ, ತಾಯಿ ಕುಂತಿ ತನ್ನ ಹಿರೇ ಮಗ ನ ಬಗ್ಗೆ ಕೇಳಿದ ಪಕ್ಷದಲ್ಲಿ ಹೇಳುತ್ತಿದ್ದನೊ ಏನೋ, ಆದರೆ ಅವರು ಯಾರೂ ಸಹ ದೇವನನ್ನು ಕೇಳಲಿಲ್ಲ. ಅರಗಿನ ಮನೆಯ ಲ್ಲಿ ಅನಾಹುತ ನಡೆಯುತ್ತೆ ಅನ್ನುವ ಸೂಚ ನೆ ಮೊದಲು ಸಿಕ್ಕಿದ್ದು ಸಹದೇವನಿಗೆ, ಆದ ರೆ ಅದನ್ನು ತಿಳಿಸುವ ಮೊದಲೇ ವಿದುರನ ಮೂಲಕ ಪಾಂಡವರಿಗೆ ತಿಳಿದಿತ್ತು.
ಕೃಷ್ಣನಿಗೆ ಸಹದೇವನ ಎಲ್ಲಾ ವಿಚಾರ ಚೆನ್ನಾಗಿ ತಿಳಿದಿದ್ದ. ದ್ರೌಪದಿಯ ಸ್ವಯಂ ವರದ ನಂತರ, ಸಹದೇವನನ್ನು ಪ್ರತ್ಯೇಕ ವಾಗಿ ಭೇಟಿ ಮಾಡಿ ಅವನಲ್ಲಿದ್ದ ಅಪಾರ ವಾದ ಎಲ್ಲಾ ಶಕ್ತಿಗಳ ಬಗ್ಗೆ ಕೇಳಿಕೊಂಡ ನು. ಸ್ವಲ್ಪಹೊತ್ತಿನ ಮಾತುಕತೆಯಲ್ಲಿ ಸಹ ದೇವನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡ ಕೃಷ್ಣ ಸಹದೇವನ ಕೈಯ ಲ್ಲಿ ಕೃಷ್ಣನು ಒಂದು ಮಾತು ತೆಗೆದು ಕೊಂಡಿದ್ದ. ಸಹದೇವ ನಿನ್ನ ಭೂತ – ಭವಿಷ್ಯದ- ಕಾಲಜ್ಞಾನವು ನಿನಗೆ ವಿರುದ್ಧ ವಾಗಿ ಕೆಲಸ ಮಾಡುವ ಸಾಧ್ಯತೆಯಿದ್ದು ನಿನ್ನನ್ನು ಅಪಾಯಕ್ಕೆ ಒಡ್ಡಬಹುದು. ಆದು ದರಿಂದ ನೀನು, ನನ್ನ ಅನುಮತಿ ಇಲ್ಲದೆ ಮುಂದಾಗುವ ಘಟನೆಗಳ ಬಗ್ಗೆ ಹಾಗೂ ರಹಸ್ಯಗಳ ಕುರಿತು ಯಾರಿಗೂ ಹೇಳುವು ದಿಲ್ಲವೆಂದು ನನಗೆ ಭಾಷೆಕೊಡು ಎಂದು ಕೈಚಾಚಿ ಭಾಷೆ ತೆಗೆದುಕೊಂಡಿದ್ದನು. ಕೃಷ್ಣ ಹಾಗೂ ಸಹದೇವನದು, ಇದೇ ಮೊದಲ ಭೇಟಿಯಾದರೂ, ಸಹದೇವನಿಗೆ ಕೃಷ್ಣನ ಮೇಲೆ ನಂಬಿಕೆ, ಪ್ರೀತಿ, ವಿಶ್ವಾಸ ಎಲ್ಲವೂ ಒಡಮೂಡಿತ್ತು. ಬರೀ ಭಾಷೆಯನ್ನಷ್ಟೇ ಅಲ್ಲದೇ, ಕೃಷ್ಣ ಕೇಳಿದರೆ ಸಹದೇವ ತನ್ನ ಅವನ ಪ್ರಾಣವನ್ನೇ ಕೊಡಲು ತಯಾರಿದ್ದ.
ಆದರೂ ಕೃಷ್ಣನ ಹತ್ತಿರ ಸಹದೇವ ಒಂದು ಪ್ರಶ್ನೆ ಕೇಳಿದ ಕೃಷ್ಣ, ನಾನು ಜ್ಯೋತಿಷ್ಯಶಾ ಸ್ತ್ರ,ವಿಜ್ಞಾನ ಇವುಗಳನ್ನು ಶ್ರಮಪಟ್ಟು ಕಲಿ ತಿರುವೆ. ನಾನೇ ನನ್ನ ಪರಿಶ್ರಮದಿಂದ ಪಡೆ ದಿದ್ದೇನೆ ಯಾರಾದರೂ ನನ್ನನ್ನು ಭವಿಷ್ಯದ
ಬಗ್ಗೆ ಕೇಳಿದರೆ ಹೇಳದಿರುವುದು ಧರ್ಮಕ್ಕೆ ವಿರುದ್ಧವಾದುದಲ್ಲವೇ? ಎಂದು ಕೇಳಿದಾ ಗ ಕೃಷ್ಣ, ಅವನ ಮುಗ್ಧತೆಯನ್ನು ಕಂಡು , ನೋಡು ಸಹದೇವ ಇದೇ ನಿನ್ನ ಜೀವನಕ್ಕೆ ಮುಳುವಾಗಬಹುದು. ಏನೇ ಆಗಲಿ ಅವರಾಗಿಯೇ ನಿನ್ನ ಹತ್ತಿರ ಬಂದು ಕೇಳಿ ದರೆ ಮಾತ್ರ ಹೇಳು, ನೀನಾಗೇ ಎಂದೂ, ಯಾರಿಗೂ ಭೂತ- ಭವಿಷ್ಯ- ವರ್ತಮಾ ನಗಳ ಕುರಿತು ಹೇಳುವುದಿಲ್ಲವೆಂದು ಮಾತು ಕೊಟ್ಟಿರುವೆ. ಒಂದು ವೇಳೆ ನೀನು
ಗೊತ್ತಾಗದಂತೆ ಹೇಗೇ ಹೇಳಿದರೂ ನನಗೆ ತಿಳಿಯುತ್ತದೆ ಎಂದು ಕೃಷ್ಣ ಕಣ್ಣು ಮಿಟು ಕಿಸಿ ತುಂಟ ನಗು ನಗುತ್ತಾ ಹೇಳಿದಾಗ ಕೃಷ್ಣನನ್ನೇ ಅಪಾದ ಮಸ್ತಕ ನೋಡಿದ ಸಹದೇವ. ಕೃಷ್ಣಾ ನಾನು ನಿನ್ನನ್ನು ಸಂಪೂ ರ್ಣವಾಗಿ ನಂಬಿದ್ದೇನೆ ಎಂದು ಕಾಲಿಗೆ ನಮಸ್ಕರಿಸಿ, ನೀನು ಹೇಳಿದಂತೆ ಕೇಳುವೆ. ನಿನ್ನ ಅನುಮತಿ ಇಲ್ಲದೆ ಯಾರಿಗೂ ಏನನ್ನು ಹೇಳುವುದಿಲ್ಲ ಎಂದು ಭಾಷೆ ಕೊಟ್ಟನು. ಅಲ್ಲಿಂದ ಸಹದೇವನಿಗೆ ಯಾ ವುದೇ ರಹಸ್ಯಗಳು ತಿಳಿದಿದ್ದರೂ, ತನ್ನ ಗಂಟಲೊಳಗೆ ಮುಚ್ಚಿಟ್ಟು ಕಾಪಿಟ್ಟು ಕೊಳ್ಳುವುವದನ್ನು ಅಭ್ಯಾಸ ಮಾಡಿ ಕೊಂಡ. ದ್ಯೂತದಾಟದಲ್ಲಿ ಮುಂದೇನಾ ಗುತ್ತೆ, ಎನ್ನುವುದು ಗೊತ್ತಿದ್ದರೂ, ಸಹ ದೇವ ಎಲ್ಲವನ್ನೂ ತಾನೇ ಮೂಕ ಪಶುವಿ ನಂತೆ ಸಹಿಸುತ್ತಿದ್ದನು.
ಸಹದೇವನ ಬುದ್ಧಿವಂತಿಕೆ ಶಕುನಿಗೆ ತಿಳಿದಿತ್ತು. ಕುರುಕ್ಷೇತ್ರ ಯುದ್ಧ ಯಾವ ಸಮಯದಲ್ಲಿ ಆರಂಭ ಮಾಡಿದರೆ ಕೌರವ ರು ಜಯಗಳಿಸುತ್ತಾರೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿಯಲು ಸಹದೇವನಲ್ಲಿ ಹೋಗಿ ತಿಳಿದುಕೊಂಡು ಬರುವಂತೆ ದುರ್ಯೋಧನನನ್ನು ಕಳಿಸಿ ದ್ದನು. ಸಹದೇವ ಮಹಾಜ್ಞಾನಿ ಮತ್ತು ಸುಳ್ಳನ್ನು ಹೇಳುವುದಿಲ್ಲ. ಹಾಗಾಗಿ ದುರ್ಯೋಧನ ಬಂದಾಗ, ಅವರ ಗೆಲು ವಿಗೆ ಜ್ಯೋತಿಷ್ಯ ರೀತಿಯಲ್ಲಿ ಸರಿಯಾದು ದನನ್ನೇ ನಿಖರವಾಗಿ ತಿಳಿಸಿದ್ದನು. ತಾನು ಹಾಗೂ ತನ್ನ ನಾಲ್ಕೂಅಣ್ಣಂದಿರು ಸಾಯು ತ್ತೇವೆ, ಎಂದು ತಿಳಿದಿದ್ದರೂ, ಕೌರವರಿಗೆ ಗೆಲುವು ಸಿಗುವಂತಹ ಸಮಯವನ್ನೇ ಸಹದೇವ ತಿಳಿಸಿದ್ದ. ದುರ್ಯೋಧನನಿಗೆ ತುಂಬಾ ಸಂತೋಷವಾಗುತ್ತದೆ. ಇದನ್ನು ಶಕುನಿಗೆ ತಿಳಿಸುತ್ತಾನೆ ಅವರೆಲ್ಲರೂ ಸಂತೋಷವಾಗಿರುತ್ತಾರೆ. ಈ ವಿಷಯ ಕೃಷ್ಣನಿಗೆ ತಿಳಿಯುತ್ತದೆ. ಸೂರ್ಯ,ಚಂದ್ರ, ಭೂಮಿ, ತಾರೆಗಳು ಹಾಗೂ ಎಲ್ಲಾ ಗ್ರಹ ಗಳನ್ನು ಕರೆದು ಕೌರವರ ಯುದ್ಧದ ಮುಹೂರ್ತದ ಆರಂಭದ ಸಮಯಕ್ಕೆ ‘ಗ್ರಹಣ’ ಹಿಡಿಯುವಂತೆ ಮಾಡುತ್ತಾನೆ. ಸರಿಯಾದ ಸಮಯ ತಿಳಿದಿದ್ದರೂ ಆ ಸಮಯಕ್ಕೆ ಯುದ್ಧ ಆಗದಂತೆ ಕೃಷ್ಣ ತಡೆಯುತ್ತಾನೆ. ತಾನೆ ಗೊತ್ತುಪಡಿಸಿದ ಗ್ರಹಣದ ದಿವಸ ಕೃಷ್ಣನೇ ಅರ್ಘ್ಯ ಕೊಡು ವುದನ್ನು, ದುರ್ಯೋಧನನೇ ಕಂಡು ಯು ದ್ಧಕ್ಕೆ ಸಮಯವನ್ನು ನಿಗದಿ ಪಡಿಸುತ್ತಾನೆ. ಅದು ಕೌರವರಿಗೆ ಸೋಲಿನ ಸಮಯವಾ ಗಿರುತ್ತದೆ. ಎಲ್ಲವೂ ಕೃಷ್ಣನ ಲೀಲೆ ಎಂದು ತಿಳಿದಿದ್ದ ಸಹದೇವ ತನಗೆ ತನ್ನ ಅಣ್ಣಂದಿ ರಿಗೆ ಅಪಾಯ ಇದೆ ಎಂದು ತಿಳಿದಿದ್ದರೂ ಸತ್ಯವನ್ನು ನುಡಿದು ಜ್ಯೋತಿಷ್ಯ ಶಾಸ್ತ್ರ ವನ್ನು ಕಾಪಾಡಿಕೊಂಡು ಬರುತ್ತಾನೆ.
ಮಹಾಭಾರತದಲ್ಲಿ ಎರಡು ಅದ್ವಿತೀಯ ಪಾತ್ರಗಳೆಂದರೆ ಶ್ರೀಕೃಷ್ಣ ಮತ್ತು ಶಕುನಿ. ಇವರಿಬ್ಬರು ರಾಜ ತಂತ್ರಜ್ಞರು, ಬುದ್ಧಿವಂ ತರು ಹಾಗೂ ಜಗತ್ತಿನ ಆಗುಹೋಗುಗಳ ಮೇಲೆ ಸಾಕಷ್ಟು ಮಾಹಿತಿಯನ್ನು ಸಂಗ್ರ ಹಿಸುವ ಚತುರತೆ ಇವರಿಬ್ಬರಲ್ಲಿ ಮಾತ್ರ ಇತ್ತು. ಕೃಷ್ಣ ತನ್ನ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಧರ್ಮ ಮಾರ್ಗದಲ್ಲಿ ಒಳ್ಳೆ ಯದಕ್ಕೆ ಬಳಸಿಕೊಂಡರೆ, ಶಕುನಿ ಸ್ವಾರ್ಥ, ಅಧರ್ಮ ಹಾಗೂ ಕುಟಿಲ ತಂತ್ರಗಳಿಗೆ ಉಪಯೋಗಿಸಿದನು. ಶಕುನಿಯ ಬುದ್ಧಿ ಯು ಆರಂಭದಲ್ಲಿ ಜಯ ತಂದುಕೊಟ್ಟರೆ, ಕೊನೆಯಲ್ಲಿ ಅಧರ್ಮ ನಾಶಗೊಂಡಿತು ನ್ಯಾಯ, ನೀತಿ, ಸತ್ಯ, ಮತ್ತು ಧರ್ಮಕ್ಕೆ ಗೆಲುವಾಯಿತು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
“ಧರ್ಮಕ್ಷೇತ್ರೇ ಕುರುಕ್ಷೇತ್ರೇ,
ಸಮಾವೇತಾ ಯುಯುತ್ಸವಃ !
ಮಾಮಕಾ: ಪಾಂಡವಶ್ಚೈವ
ಕಿಮಕುರ್ವತ ಸಂಜಯ” !!
ಧರ್ಮ ಕ್ಷೇತ್ರವೆಂದರೆ ಧರ್ಮದ ತಾಣ
ಕುರುಕ್ಷೇತ್ರವೆಂದರೆ ಕರ್ಮ ಕ್ಷೇತ್ರ (ಕೆಲಸ ಮಾಡುವ ಭೂಮಿ) ಅಥವಾ ನಮ್ಮ ದೇಹ
ಇದು ನಮ್ಮ ಮನಸ್ಸು ಮತ್ತು ಆತ್ಮದ ಸಂಘರ್ಷವನ್ನು ಪ್ರತಿನಿಧಿಸುತ್ತದೆ.
ಯುದ್ಧ ಮಾಡಲು ಬಯಸಿ ಸೇರಿರುವ ನನ್ನವರು ಮತ್ತು ಪಾಂಡವರು ಏನು ಮಾಡುತ್ತಿದ್ದಾರೆ ಸಂಜಯನೇ?a








