ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಅಪರಿಚಿತ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಕೆಲವೇ ಕ್ಷಣಗಳಲ್ಲಿ 9ನೇ ಪಾಯಿಂಟ್ ನಲ್ಲಿ ನೆಲ ಆಗೆಯುವ ಪ್ರಕ್ರಿಯ ಆರಂಭವಾಗಲಿದೆ. 9ನೇ ಸ್ಥಳದಲ್ಲಿ ಆರರಿಂದ ಏಳು ಶವಗಳನ್ನು ಕೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿ ಹೇಳಿಕೆ ನೀಡಿದ್ದಾನೆ.
ಶವ ಹೂತು ಹಾಕಿರುವ ಬಗ್ಗೆ ದೂರುದಾರ ಎಸ್ಐಟಿಗೆ ಮಾಹಿತಿ ನೀಡಿದ್ದಾನೆ. ದೂರುದಾರನ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಅಧಿಕಾರಿಗಳು ಇದೀಗ ಆತನ ಮಾಹಿತಿಯಂತೆ 9ನೇ ಪಾಯಿಂಟ್ ನಲ್ಲಿ ಅಸ್ತಿಪಂಜರಗಳು ಸಿಗುತ್ತವಾ? ಅಥವಾ ಇಲ್ಲವಾ? ಎನ್ನುವುದು ಇವರ ಕುತೂಹಲ ಮೂಡಿಸಿದೆ. ಈಗಾಗಲೇ 9ನೇ ಪಾಯಿಂಟಲ್ಲಿ ಶೋಧ ಕಾರ್ಯ ಆರಂಭವಾಗಿದ್ದು ಸುಮಾರು 45ಕ್ಕೂ ಹೆಚ್ಚು ಕಾರ್ಮಿಕರ ಜೊತೆಗೆ ಅಧಿಕಾರಿಗಳು ಶೋಧ ಕಾರ್ಯಕ್ಕೆ ಇಳಿದಿದ್ದಾರೆ. ಈಗಾಗಲೇ 9ನೇ ಪಾಯಿಂಟ್ ಸ್ಥಳದಲ್ಲಿ ಹಸಿರು ಪರದೆ ಅಳವಡಿಸಲಾಗಿದೆ.