ಶಿವಮೊಗ್ಗ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ವತಿಯಿಂದ ಮಂಗಳವಾರ ನಗರಸಭೆ ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರನ್ನು ಅಭಿನಂದಿಸಲಾಯಿತು. ಪತ್ರಕರ್ತರ ಕಚೇರಿ ನಿರ್ಮಾಣದ ಹಿನ್ನೆಲೆಯಲ್ಲಿ ಪೌರಾಯುಕ್ತ ಎಚ್.ಕೆ.ನಾಗಪ್ಪ ನೀಡಿದ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಈ ವೇಳೆ ಮಾತನಾಡಿದಂತ ಸಾಗರ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ ಅವರು, ಪೌರಾಯುಕ್ತ ನಾಗಪ್ಪ ಅವರು ನಾವು ಸಂಘಕ್ಕೆ ಕಚೇರಿಗೆ ಮನವಿ ಮಾಡಿದಂತ ಸಂದರ್ಭದಲ್ಲಿ ಖುಷಿಯಿಂದಲೇ ಒಪ್ಪಿಕೊಂಡರು. ಆ ಬಳಿಕ ಸುಮಾರು 23 ಲಕ್ಷಕ್ಕೂ ಹೆಚ್ಚು ಅನುದಾನದಲ್ಲಿ ಸುಸಜ್ಜಿತ ಕಟ್ಟಡವನ್ನು ಪತ್ರಕರ್ತರ ಸಂಘಕ್ಕೆ ಕಟ್ಟಿಸಿಕೊಟ್ಟಿದ್ದಾರೆ. ಖುದ್ದಾಗಿ ಮುಂದೆ ನಿಂತು ಪತ್ರಕರ್ತರ ಸಂಘದ ಬಿಲ್ಡಿಂಗ್ ನಿರ್ಮಿಸಿಕೊಟ್ಟಿದ್ದಾರೆ. ಇಂತಹ ಸಾಗರ ನಗರಸಭೆ ಪೌರಾಯುಕ್ತ ನಾಗಪ್ಪ ಅವರಿಗೆ ಅಭಿನಂದನೆಗಳು ಅಂತ ತಿಳಿಸಿದರು.
ಇನ್ನೂ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಿಲ್ಡಿಂಗ್ ಗೆ ಕೆಲ ಮೂಲ ಸೌಕರ್ಯದ ಅಗತ್ಯವಿದೆ. ಈಗಾಗಲೇ ಪೌರಾಯುಕ್ತ ನಾಗಪ್ಪ ಅವರ ಗಮನಕ್ಕೂ ತರಲಾಗಿದೆ. ಅವರು ಆ ಎಲ್ಲಾ ಕೆಲಸವನ್ನು ಮಾಡಿಕೊಡುವ ಭರವಸೆ ನೀಡಿದ್ದಾರೆ. ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಕಚೇರಿ ನಿರ್ಮಿಸಿಕೊಟ್ಟಂತ ಪೌರಾಯುಕ್ತರಿಗೆ, ನಗರಸಭೆಯ ಸದಸ್ಯರಿಗೆ, ತಾಲ್ಲೂಕು ಆಡಳಿತಕ್ಕೆ ಸಂಘದ ಪರವಾಗಿ ಧನ್ಯವಾದವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಿ.ನಾಗೇಶ್, ಉಪಾಧ್ಯಕ್ಷರಾದ ರವಿನಾಯ್ಡು, ಲೋಕೇಶ್ ಕುಮಾರ್, ಸದಸ್ಯದಾರಂತ ಗಿರೀಶ್ ರಾಯ್ಕರ್, ಇಮ್ರಾನ್ ಸಾಗರ್, ಜಮೀಲ್ ಸಾಗರ್, ಶಿವಕುಮಾರ್ ಗೌಡ, ಮಾ.ಸ.ನಂಜುಂಡಸ್ವಾಮಿ, ರಫೀಕ್ ಕೊಪ್ಪ, ನಾಗರಾಜ್, ವಸಂತ ಬಿ ಈಶ್ವರಗೆರೆ ಹಾಜರಿದ್ದರು.
SHOCKING: ‘ಹಸ್ತಮೈಥುನ’ಕ್ಕಾಗಿಯೇ 30 ನಿಮಿಷ ವಿರಾಮ ಕೊಟ್ಟ ಕಂಪನಿ: ಕಾರಣ ಏನೆಂದು ಬಿಚ್ಚಿಟ್ಟ ಸಂಸ್ಥಾಪಕರು
ನಾಳೆ ಕ್ವಾಂಟಮ್ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳೊಂದಿಗೆ ಸಭೆ: ಸಚಿವ ಎನ್ ಎಸ್ ಭೋಸರಾಜು