ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ದಾರಿಯೊಂದರಲ್ಲಿ ರೂ.6,500 ಸಿಕ್ಕಂತ ಹಣವನ್ನು ಕಳೆದುಕೊಂಡವರಿಗೆ ನೀಡುವಂತೆ ಉಡುಪಿ ಮೂಲದ ಬೇಕರಿ ಐಟಂ ವಿತರಕ ಆರುಮುಗ ಪೊಲೀಸರಿಗೆ ನೀಡಿದ್ದರು. ಇಂತಹ ಹಣವನ್ನು ಕಳೆದುಕೊಂಡವರಿಗೆ ಸಾಗರ ಟೌನ್ ಪೊಲೀಸರು ಹಿಂದಿರುಗಿಸಿದ್ದಾರೆ.
ಇಂದು ನಿಮ್ಮ ಕನ್ನಡ ನ್ಯೂಸ್ ನೌ “ಸಾಗರದಲ್ಲಿ ಪ್ರಾಮಾಣಿಕತೆ ಮೆರೆದ ಬೇಕರಿ ಐಟಂ ವಿತರಕ: ದಾರಿಯಲ್ಲಿ ಸಿಕ್ಕ 6,500 ಪೊಲೀಸರಿಗೆ ನೀಡಿಕೆ” ಎಂಬುದಾಗಿ ಸುದ್ದಿಯೊಂದನ್ನು ಪ್ರಕಟಿಸಿತ್ತು. ಅದರಲ್ಲಿ ಸಾಗರ ಟೌನ್ ಠಾಣೆ ಪಿಎಸ್ಐ ನಾಗರಾಜು ಅವರು, ಆರುಮುಗ ಎಂಬುವರು ಉಡುಪಿಯಿಂದ ಸಾಗರದ ವಿವಿಧ ಬೇಕರಿಗಳಿಗೆ ಬೇಕರಿ ತಿನಿಸು ಸರಬರಾಜು ಮಾಡುತ್ತಾರೆ. ಇಂದು ಮಾರಿಕಾಂಬಾ ದೇವಸ್ಥಾನದ ರಸ್ತೆಯ ಜೈಹಿಂದ್ ಸಮೀಪದ ದಾರಿಯಲ್ಲಿ ರೂ.6,500 ಹಣ ಸಿಕ್ಕಿದೆ. ಅದನ್ನು ಕಂಡು ಕೂಡಲೇ ಸಾಗರ ಟೌನ್ ಠಾಣೆಗೆ ತಂದು ಸಂಭವಿಸಿದವರಿಗೆ ನೀಡಲು ಮನವಿ ಮಾಡಿದ್ದಾರೆ ಎಂದಿದ್ದರು.
ಆರಮುಗ ನೀಡಿರುವಂತ ರೂ.6,500 ಸಾಗರ ಟೌನ್ ಠಾಣೆಯಲ್ಲಿ ಇರುತ್ತದೆ. ಸಾಗರ ನಗರ, ತಾಲ್ಲೂಕಿನ ಜನರು ಯಾರಾದರೂ ಕಳೆದುಕೊಂಡಿದ್ದರೇ ಸೂಕ್ತ ದಾಖಲೆ, ಮಾಹಿತಿ ಒದಗಿಸಿ ಪಡೆಯಬಹುದು ಎಂದು ತಿಳಿಸಿದ್ದರು.
ಸೋ ಸಾಗರದ ಜನರು ಯಾರಾದರೂ ಮಾರಿಕಾಂಬಾ ರಸ್ತೆಯ ಜೈಹಿಂದ್ ಬೇಕರಿ ಸಮೀಪದಲ್ಲಿ ರೂ.6,500 ಕಳೆದುಕೊಂಡಿದ್ದರೇ ಸಾಗರ ಟೌನ್ ಠಾಣೆಗೆ ತೆರಳಿ ಸೂಕ್ತ ಮಾಹಿತಿ, ಹಣದ ದಾಖಲೆ ಇದ್ದರೇ ನೀಡಿ ಪಡೆಯಬಹುದಾಗಿದೆ ಎಂಬುದಾಗಿ ಸುದ್ದಿಯನ್ನು ಪ್ರಕಟಿಸಲಾಗಿತ್ತು.
ಸಾಗರ ನಗರಸಭೆಯ ಮಾಜಿ ನಾಮನಿರ್ದೇಶಿತ ಸದಸ್ಯನಿಗೆ ಹಣ ವಾಪಾಸ್
ಈ ಸುದ್ದಿಯನ್ನು ಓದಿದಂತ ಸಾಗರದ ಸುಭಾಷ್ ನಗರ 2ನೇ ಕ್ರಾಸ್ ನ ನಿವಾಸಿ ಮಾಜಿ ನಾಮ ನಿರ್ದೇಶಿತ ನಗರಸಭೆ ಸದಸ್ಯರಾಗಿದ್ದಂತ ಪುರುಷೋತ್ತಮ್ ಅವರು ಸಾಗರ ಟೌನ್ ಪೊಲೀಸ್ ಠಾಣೆಗೆ ತೆರಳಿದ್ದರು. ಪೊಲೀಸರು ಕೇಳಿದಂತ ಮಾಹಿತಿ, ರೂ.6,500ರ ಹಣ ಕಳೆದುಕೊಂಡ ಬಗೆಯ ಬಗ್ಗೆ ವಿವರಿಸಿದ್ದರು. ತಾನು ಮೊಬೈಲ್ ಜೇಬಿನಿಂದ ತೆಗೆಯುವಾಗ ಸಾಗರದ ಮಾರಿಕಾಂಬಾ ದೇವಸ್ಥಾನ ರಸ್ತೆಯ ಜೈಹಿಂದ್ ಬೇಕರಿ ಸಮೀಪದ ರಸ್ತೆಯಲ್ಲಿ ಬಿದ್ದು ಹೋಗಿದ್ದನ್ನು, ಹಲವೆಡೆ ಹುಡುಕಾಡಿದ್ದನು ಸಾಗರ ಟೌನ್ ಠಾಣೆಯ ಪಿಎಸ್ಐ ನಾಗರಾಜ್ ಅವರಿಗೆ ತಿಳಿಸಿದರು.
ಪುರುಷೋತ್ತಮ್ ತಂದೆ ಬರಮಪ್ಪ ಅವರು ನೀಡಿದಂತ ಮಾಹಿತಿಯನ್ನು ಖಚಿತ ಪಡಿಸಿಕೊಂಡ ಸಾಗರ ಟೌನ್ ಠಾಣೆಯ ಪಿಎಸ್ಐ ನಾಗರಾಜ್ ಅವರು, ರೂ.6,500 ಹಣವನ್ನು ಕೊಟ್ಟಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದು ಉಡುಪಿ ಮೂಲದ ಬೇಕರಿ ಐಟಂ ವಿತರಕ ಆರಮುಗ ದಾರಿಯಲ್ಲಿ ಸಿಕ್ಕಿದ್ದಂತ ರೂ.6,500 ಹಣವನ್ನು ಅಷ್ಟೇ ಕಾಳಜಿಯಿಂದ ಕಳೆದುಕೊಂಡವರಿಗೆ ಹಿಂದಿರುಗಿಸಿದ್ದಾರೆ.
ಈ ಸಂದರ್ಭದಲ್ಲಿ ಮೂರನೇ ಕಣ್ಣು ನಾಗರಾಜ್, ಕೆಎ 15 ಲೈವ್ ನ ಫ್ರಾಂಕಿ ಲೋಬೋ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ನಿಮ್ಮ ಮೊಬೈಲ್ ಫೋನಿನ `ಬ್ಯಾಕ್ ಕವರ್’ ಬಣ್ಣ ಬದಲಾಗಲು ಕಾರಣ ಏನು ಗೊತ್ತಾ?