ಕಲಬುರಗಿ: ಮುಸ್ಲಿಮರನ್ನ ಅಲ್ಪಸಂಖ್ಯಾತರ ಪಟ್ಟಿಯಿಂದ ಕೈಬಿಡುವ ವಿಚಾರವಾಗಿ ಮಾತನಾಡಿದ ಕಲಬುರಗಿ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
BIGG NEWS: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನದ ದೂರು: ಎಚ್ಡಿಕೆ, ಎಚ್ಡಿಆರ್ ವಿರುದ್ಧ ಶ್ರೀನಿವಾಸ್ ಆರೋಪ
ಅಂತಹ ಯಾವುದೇ ವಿಚಾರ ಕೇಂದ್ರ , ರಾಜ್ಯ ಸರ್ಕಾರ ಮುಂದಿಲ್ಲ ಎಂದು ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಸಿದ್ದರಾಮಯ್ಯ ಮಾತಾಡುತ್ತಾರೆ. ಮೀಸಲಾತಿ ಹೆಚ್ಚಿಸಿದ್ದು, ಸಂವಿಧಾನಬದ್ಧವಾಗಿದೆಯಾ ಎಂದು ಕೇಳುತ್ತಾರೆ? ಸರ್ವಪಕ್ಷ ಸಭೆಯಲ್ಲೇ ಸಿದ್ದರಾಮಯ್ಯೀ ಪ್ರಶ್ನೆ ಕೇಳಬೇಕಿತ್ತು. ಈಗ ಹೊರಗಡೆ ಬಂದು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಈಗ ಕುರುಬರಿಗೆ ಎಸ್ ಟಿ ಮೀಸಲಾತಿ ಕೊಡಬೇಕು ಅಂತ ಹೇಳಿದ್ದಾರೆ. ಹಿಂದೆ ನಿಮ್ಮ ಬಾಯಿಗೆ ಏನಾಗಿತ್ತು ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.