ಬೆಂಗಳೂರು : ಇಂದು ಭಾರತ ಸ್ವಾತಂತ್ರ್ಯಕ್ಕಾಗಿ ಕ್ವಿಟ್ ಇಂಡಿಯಾ ಚಳುವಳಿ ಹೋರಾಟ ಮಾಡಿದ ದಿನ ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಟ್ವೀಟ್ ನಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಮಹಾತ್ಮ ಗಾಂಧಿಯವರ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” ಎಂಬ ಘೋಷಣೆಯು ದೇಶವಾಸಿಗಳ ಎದೆಯಲ್ಲಿ ಸುಪ್ತವಾಗಿದ್ದ ಆಕ್ರೋಶ, ಅಸಹನೆಯನ್ನು ಬಡಿದೆಬ್ಬಿಸಿ, ಸ್ವಾತಂತ್ರ್ಯ ಚಳವಳಿಯ ತೀವ್ರತೆಗೆ ಹೊಸ ರೂಪ ನೀಡಿತು.
ಶತಮಾನಗಳ ಕಾಲ ಭಾರತವನ್ನು – ಭಾರತೀಯರನ್ನು ಕೊಳ್ಳೆಹೊಡೆಯುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ಕ್ವಿಟ್ ಇಂಡಿಯಾ ಚಳವಳಿ ನಡುಗಿಸಿದ್ದು ಮಾತ್ರವಲ್ಲ, ಇನ್ನು ಹೆಚ್ಚು ಕಾಲ ಹಿಂಸೆ, ದೌರ್ಜನ್ಯಗಳ ಮೂಲಕ ಭಾರತವನ್ನು ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಅವರಿಗೆ ಅರ್ಥ ಮಾಡಿಸಿತು. ನಂತರ ಇದು 1947 ಆಗಸ್ಟ್ 15ರ ಸ್ವಾತಂತ್ರ್ಯಕ್ಕೆ ಬುನಾದಿಯಾಯಿತು.ಈ ಐತಿಹಾಸಿಕ ದಿನದಂದು ದೇಶಕ್ಕಾಗಿ ಪ್ರಾಣಾರ್ಪಣೆಗೈದ ಎಲ್ಲಾ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ – ಬಲಿದಾನವನ್ನು ಸ್ಮರಿಸಿ, ಶಿರಬಾಗಿ ನಮಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಮಹಾತ್ಮ ಗಾಂಧಿಯವರ "ಬ್ರಿಟಿಷರೇ ಭಾರತ ಬಿಟ್ಟು ತೊಲಗಿ" ಎಂಬ ಘೋಷಣೆಯು ದೇಶವಾಸಿಗಳ ಎದೆಯಲ್ಲಿ ಸುಪ್ತವಾಗಿದ್ದ ಆಕ್ರೋಶ, ಅಸಹನೆಯನ್ನು ಬಡಿದೆಬ್ಬಿಸಿ, ಸ್ವಾತಂತ್ರ್ಯ ಚಳವಳಿಯ ತೀವ್ರತೆಗೆ ಹೊಸ ರೂಪ ನೀಡಿತು.
ಶತಮಾನಗಳ ಕಾಲ ಭಾರತವನ್ನು – ಭಾರತೀಯರನ್ನು ಕೊಳ್ಳೆಹೊಡೆಯುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ಕ್ವಿಟ್ ಇಂಡಿಯಾ ಚಳವಳಿ ನಡುಗಿಸಿದ್ದು… pic.twitter.com/urfNCyVx00
— Siddaramaiah (@siddaramaiah) August 8, 2025