ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೇಂದ್ರ ಸರ್ಕಾರವು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಚೀಟಿ ನೀಡಲು ಜಂಟಿ ನೋಂದಣಿ ಸೌಲಭ್ಯವನ್ನ ಪ್ರಾರಂಭಿಸಿದೆ. ಈ ನೋಂದಣಿಯೊಂದಿಗೆ ವಸತಿ ರಹಿತರು, ಬಡವರು, ವಲಸಿಗರು ಮತ್ತು ಇತರ ಅರ್ಹ ಫಲಾನುಭವಿಗಳು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸುಲಭವಾಗುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ‘ಸಾಮಾನ್ಯ ನೋಂದಣಿ ಸೌಲಭ್ಯ’ (Naa Ration-Naa Haaka) ಉದ್ದೇಶವಾಗಿದೆ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಈ ಸಂದರ್ಭದಲ್ಲಿ ಹೇಳಿದರು. ಇದರಿಂದ ಜನರಿಗೆ ಪಡಿತರ ಚೀಟಿ ನೀಡಲು ಸಹಕಾರಿಯಾಗಲಿದೆ ಎಂದರು.
4.7 ಕೋಟಿ ಪಡಿತರ ಚೀಟಿ ರದ್ದು
ಕಳೆದ 7 ರಿಂದ 8 ವರ್ಷಗಳಲ್ಲಿ ವಿವಿಧ ಕಾರಣಗಳಿಂದ ಸುಮಾರು 18 ರಿಂದ 19 ಕೋಟಿ ಫಲಾನುಭವಿಗಳ 4.7 ಕೋಟಿ ಪಡಿತರ ಚೀಟಿಗಳು ರದ್ದಾಗಿವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹ ನಿಯಮಿತವಾಗಿ ಅರ್ಹ ಫಲಾನುಭವಿಗಳಿಗೆ ಹೊಸ ಕಾರ್ಡ್ಗಳನ್ನ ನೀಡುತ್ತವೆ. ಹೊಸ ವೆಬ್ ಆಧಾರಿತ ಸೌಲಭ್ಯವು ಆರಂಭದಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಲಭ್ಯವಿರುತ್ತದೆ ಎಂದು ಅವ್ರು ಹೇಳಿದರು.
ಅಂದ್ಹಾಗೆ, ದೇಶದ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ಈ ಸೌಲಭ್ಯ ಪ್ರಾರಂಭವಾಗಲಿದೆ. ಸಧ್ಯ ಕೇಂದ್ರಾಡಳಿತ ಪ್ರದೇಶಗಳು ಮತ್ತು 11 ರಾಜ್ಯಗಳಾದ ಅಸ್ಸಾಂ, ಗೋವಾ, ಲಕ್ಷದ್ವೀಪ, ಮಹಾರಾಷ್ಟ್ರ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಪಂಜಾಬ್ ಮತ್ತು ಉತ್ತರಾಖಂಡ ಸೇರಿವೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಿಂದ ಸುಮಾರು 81.35 ಕೋಟಿ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಈ ಕಾಯ್ದೆಯಡಿ ಸುಮಾರು 79.77 ಕೋಟಿ ಜನರು ಆಹಾರ ಧಾನ್ಯಗಳನ್ನ ಪಡೆಯುತ್ತಿದ್ದಾರೆ.