ಕೆಎನ್ಎನ್ಡಿಜಿಟಲ್ ಡೆಸ್ಕ್ : ರಕ್ಷಾ ಬಂಧನದಂದು ಪ್ರಧಾನಿ ನರೇಂದ್ರ ಮೋದಿ, ಪಿಎಂ ಹೌಸ್ನಲ್ಲಿ ಮಕ್ಕಳಿಂದ ರಾಖಿ ಕಟ್ಟಿಸಿಕೊಂಡರು. ರಕ್ಷಾಬಂಧನ ಆಚರಣೆಯ ನಂತ್ರ ಪ್ರಧಾನಮಂತ್ರಿಯವರು ‘ಹರ್ ಘರ್ ತಿರಂಗ ಅಭಿಯಾನ’ವನ್ನ ವಿಶಿಷ್ಟ ರೀತಿಯಲ್ಲಿ ಗುರುತಿಸಲು ಪ್ರತಿ ಮಗುವಿಗೆ ತ್ರಿವರ್ಣ ಧ್ವಜವನ್ನ ನೀಡಿದರು. ಅಂದ್ಹಾಗೆ, ದೇಶದೆಲ್ಲೆಡೆ ರಕ್ಷಾಬಂಧನ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ವೇಳೆ ಪ್ರಧಾನಿ ಮೋದಿ ಮಕ್ಕಳೊಂದಿಗೆ ಹಬ್ಬ ಆಚರಿಸಿದರು. ಇನ್ನು ಈ ಕುರಿತು ಪ್ರಧಾನಿ ಕಾರ್ಯಾಲಯ (PMO) ಟ್ವೀಟ್ ಮೂಲಕ ಈ ಮಾಹಿತಿ ನೀಡಿದೆ.
ಪ್ರಧಾನಮಂತ್ರಿಯವರು ‘ಹರ್ ಘರ್ ತಿರಂಗ’ ಅಭಿಯಾನವನ್ನ ಗುರುತಿಸಲು ಪ್ರತಿ ಮಗುವಿಗೆ ತ್ರಿವರ್ಣ ಧ್ವಜವನ್ನ ನೀಡಿದರು. ಕೈಯಲ್ಲಿ ತ್ರಿವರ್ಣ ಧ್ವಜವನ್ನ ಹಿಡಿದುಕೊಂಡು ಮಕ್ಕಳು ಸಂತೋಷ ಪಟ್ಟಿದ್ದಾರೆ. ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ‘ಹರ್ ಘರ್ ತಿರಂಗ’ ಅಭಿಯಾನವನ್ನ ಸಹ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಚಿಕ್ಕ ಮಕ್ಕಳಿಗೆ ತ್ರಿವರ್ಣ ಧ್ವಜವನ್ನ ನೀಡಿದರು.
ಅಂದ್ಹಾಗೆ, ಈ ಅಭಿಯಾನದ ಅಡಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಭಿನ್ನ ಕಾರ್ಯಕ್ರಮಗಳನ್ನ ಆಯೋಜಿಸುತ್ತಿವೆ. ಏಕಕಾಲದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ತ್ರಿವರ್ಣ ಯಾತ್ರೆ ಕೈಗೊಳ್ಳಲಾಗುತ್ತಿದೆ. ಇದರಲ್ಲಿ, ಆಗಸ್ಟ್ 13 ಮತ್ತು 15 ರ ನಡುವೆ ಮನೆ ಅಥವಾ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಜನರನ್ನು ಪ್ರೋತ್ಸಾಹಿಸಲಾಗುತ್ತಿದೆ. ಇನ್ನು ಈ ಅಭಿಯಾನದಲ್ಲಿ ಜನರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.