ಬೆಂಗಳೂರು: ಪ್ರತೀ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ತೀರ್ಮಾನಿಸಿದ್ದು, ಈ ಬಗ್ಗೆ ತಕ್ಷಣವೇ ತೀರ್ಮಾನ ತೆಗೆದುಕೊಳ್ಳಲು ಸಿಎಂ ಗಮನಕ್ಕೆ ತರುವೆ ಎಂದು ವಿಧಾನಪರಿಷತ್ನಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ವಿಧಾನಪರಿಷತ್ನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 16 ಮಿಲ್ಕ್ ಯೂನಿಯನ್ ಇದೆ. ಹಾಲು ಉತ್ಪಾದಕರ ಜತೆ ಗ್ರಾಹಕರನ್ನೂ ನೋಡಬೇಕಾಗುತ್ತದೆ. ಹಾಲು ಪ್ಯಾಕೇಟ್ ದರ 3 ರೂ. ಹೆಚ್ಚಳ ಮಾಡಿ ನೇರವಾಗಿ ರೈತರಿಗೆ ಕೊಡಲು ಒಕ್ಕೂಟಗಳೇ ನಿರ್ಧರಿಸಿವೆ. ಗ್ರಾಹಕರಿಗೂ ಹೆಚ್ಚು ಹೊರೆ ಆಗುವ ಹಾಗೆ ಮಾಡಲಾಗುವುದಿಲ್ಲ. ಹೀಗಾಗಿ, ಸಿಎಂ ಸರಿಯಾದ ನಿರ್ಧಾರಕ್ಕೆ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
BIG NEWS: ಸೆ. 8ರಂದು ಮುಂದೂಡಲ್ಪಟ್ಟಿದ್ದ ರಾಜ್ಯ ಸಚಿವ ಸಂಪುಟ ಸಭೆ: ಇಂದು ಸಂಜೆ 5 ಗಂಟೆಗೆ ನಿಗದಿ
BIG NEWS: ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ: ಮೊದಲ ಬಾರಿಗೆ ʻತೃತೀಯ ಲಿಂಗಿ’ಗಳಿಗೆ ಮೀಸಲಾತಿ!
BIG NEWS: ಇಂದು ಮತ್ತೆ ನಲಪಾಡ್ ಅಕಾಡೆಮಿ ಆವರಣದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಕೆ