ಕೋಲ್ಕತಾ : ಪೊಲೀಸರು ಚಾಲನಾ ಪರವಾನಗಿಗಳನ್ನ ಮುಟ್ಟುಗೋಲು ಹಾಕಿಕೊಳ್ಳಬಹುದು ಮತ್ತು ಅಮಾನತುಗೊಳಿಸಲು ಶಿಫಾರಸು ಮಾಡಬಹುದು. ಆದ್ರೆ, ಮೋಟಾರು ವಾಹನ ಕಾಯ್ದೆ, 1988ರ ಅಡಿಯಲ್ಲಿ ಸ್ವಂತವಾಗಿ ಪರವಾನಗಿಗಳನ್ನ ಅಮಾನತುಗೊಳಿಸುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಅಂದ್ಹಾಗೆ, ಮೇ 19ರಂದು ಲೇಕ್ ಗಾರ್ಡನ್ಸ್-ಸದರ್ನ್ ಅವೆನ್ಯೂ ಕ್ರಾಸಿಂಗ್ನಲ್ಲಿ ಗಂಟೆಗೆ 61.1 ಕಿ.ಮೀ/ಗಂ ವೇಗದಲ್ಲಿ ವಾಹನ ಚಲಾಯಿಸಿದ ಆರೋಪದ ಮೇಲೆ ಹೊಸ ಅಲಿಪೋರ್ ನಿವಾಸಿಯ ಡ್ರೈವಿಂಗ್ ಲೈಸನ್ಸ್ ಅಮಾನತುಗೊಳಿಸಲಾಗಿತ್ತು. ಸಧ್ಯ ಅಮಾನತುಗೊಂಡ ಪರವಾನಗಿಯನ್ನ ಹಿಂದಿರುಗಿಸುವಂತೆ ಸಹಾಯಕ ಪೊಲೀಸ್ ಆಯುಕ್ತರಿಗೆ ಸೂಚಿಸಿದ ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಅವ್ರು ತಮ್ಮ ಏಳು ಪುಟಗಳ ಆದೇಶ ಹೊರಡಿಸಿದ್ದಾರೆ.
1988 ರ ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳು ಪರವಾನಗಿ ಪ್ರಾಧಿಕಾರ (ಈ ಸಂದರ್ಭದಲ್ಲಿ ರಾಜ್ಯ ಸಾರಿಗೆ ಇಲಾಖೆ) ಮಾತ್ರ ಪರವಾನಗಿ ಹೊಂದಿರುವವರಿಗೆ ವಿಚಾರಣೆ ನೀಡಿದ ನಂತರ ಚಾಲನಾ ಪರವಾನಗಿಯನ್ನು ಅನರ್ಹಗೊಳಿಸಬಹುದು ಅಥವಾ ರದ್ದುಗೊಳಿಸಬಹುದು ಎಂದು ಸೂಚಿಸುತ್ತದೆ ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಪ್ರಸ್ತುತ ನಿಯಮಗಳು ಪೊಲೀಸ್ ಅಧಿಕಾರಿಯ ಪಾತ್ರವನ್ನ “ಚಾಲನಾ ಪರವಾನಗಿಯನ್ನು ವಶಪಡಿಸಿಕೊಳ್ಳಲು ಮತ್ತು ಅದನ್ನ ಅನರ್ಹತೆ ಅಥವಾ ಹಿಂತೆಗೆದುಕೊಳ್ಳಲು ಪರವಾನಗಿ ಪ್ರಾಧಿಕಾರಕ್ಕೆ ಕಳುಹಿಸಲು ಮಾತ್ರ ಸೀಮಿತಗೊಳಿಸುತ್ತವೆ” ಎಂದು ಹೈಕೋರ್ಟ್ ಹೇಳಿದೆ.