ಬೆಂಗಳೂರು : ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಣೆ ವಿಚಾರವಾಗಿ ಕಲ್ಬುರ್ಗಿ ಜಿಲ್ಲೆಯಲ್ಲಿ ಪಥ ಸಂಚಲನ ಮಾಡುತ್ತೇವೆ ಅಂತ ಹಠ ಹಿಡಿದರು. ಮೊದಲೇ ಇತ್ತು ಏನು ದಿನಾಂಕವೆಂದು ಹೇಳಿರಲಿಲ್ಲ. ಉದ್ದೇಶಪೂರ್ವಕವಾಗಿ ನನ್ನ ಕ್ಷೇತ್ರದಲ್ಲಿ ಪ್ಲಾನ್ ಮಾಡಿಕೊಂಡಿದ್ದರು ನನಗೆ ಬುದ್ಧಿ ಕಲಿಸಬೇಕೆಂದು ಇದೆಲ್ಲ ಮಾಡಿದ್ದಾರೆ. ನನಗೆ ಬೆದರಿಕೆ ಹಾಕಿದ ವ್ಯಕ್ತಿ ಬಂಧನದ ಬಳಿಕ ಪಥ ಸಂಚಲನಕ್ಕೆ ಪ್ಲಾನ್ ಮಾಡಿದ್ದಾರೆ ಎಂದು ಬೆಂಗಳೂರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು
ಬೆಂಗಳೂರಲ್ಲಿ ಮಾತನಾಡಿದ ಅವರು, ಚಿತಾಪುರದಲ್ಲಿ ಆರ್‌ಎಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಣೆ ವಿಚಾರವಾಗಿ ಎಷ್ಟು ಜನ ಸೇರುತ್ತಾರೆ ತಹಸಿಲ್ದಾರ್ ಗೆ ಮಾಹಿತಿಗೆ ನೀಡಿಲ್ಲ. ಸ್ಥಳದ ಎನ್ ಓ ಸಿ ಕೊಟ್ಟಿಲ್ಲ, ದಾಖಲೆ ಕೊಟ್ಟಿಲ್ಲ, ಅನುಮತಿಯನ್ನು ಕೇಳಿಲ್ಲ, ಸಂಘದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಿಲ್ಲ ಹಲವಾರು ಪ್ರಶ್ನೆಗಳಿಗೆ ಪಥ ಸಂಚಲನ ನಡೆಸುವವರು ಮಾಹಿತಿ ನೀಡಿಲ್ಲ. ನಿನ್ನೆ ರಾತ್ರಿ ಯಾವುದೇ ನೋಂದಾಯಿತ ಅಲ್ಲ ಅಂತ ಬರೆದು ಕೊಟ್ಟಿದ್ದಾರೆ.
ಈ ಕುರಿತು ಕೋರ್ಟ್ ನಲ್ಲಿ ಬಹಳಷ್ಟು ಚರ್ಚೆಯಾಗಿದೆ ಶಾಂತಿ ಕಾಪಾಡುವ ಜವಾಬ್ದಾರಿ ಸರ್ಕಾರದ್ದು ಎಂದು ಜಡ್ಜ್ ಹೇಳಿದ್ದಾರೆ. ಮತ್ತೊಮ್ಮೆ ಅರ್ಜಿ ಹಾಕಿದರೆ ಪರಿಗಣಿಸಿ ಎಂದು ಕೋರ್ಟ್ ಹೇಳಿದೆ. ಮತ್ತೊಮ್ಮೆ ಅರ್ಜಿ ಕೊಡಲಿ ಆಗ ಸರ್ಕಾರ ಯೋಚನೆ ಮಾಡುತ್ತದೆ. ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.